ಹೊಸದಿಲ್ಲಿ: ಅಕ್ಟೋಬರ್- ಡಿಸೆಂಬರ್ ತ್ತೈಮಾಸಿಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯು ಶೇ.4.4ಕ್ಕೆ ಕುಸಿದಿದೆ.
Advertisement
ಈ ಬಗ್ಗೆ ಕೇಂದ್ರ ಸರಕಾರ ಬಿಡುಗಡೆ ಮಾಡಿದ ದತ್ತಾಂಶಗಳಲ್ಲಿ ಉಲ್ಲೇಖಿಸಲಾಗಿದೆ. ಉತ್ಪಾದನ ವಲಯದಲ್ಲಿ ಕುಸಿತ, ತಗ್ಗಿದ ಬೇಡಿಕೆ, ಅದಾನಿ ಸಮೂಹದ ಬಿಕ್ಕಟ್ಟು ಹಾಗೂ ತೀವ್ರ ಬೇಸಗೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಆರ್ಥಿಕ ಬೆಳೆವಣಿಗೆ ತಗ್ಗಿದೆ ಎಂದು ವಿಶ್ಲೇಷಿಸಲಾಗಿದೆ.
2022ರ ಹಣಕಾಸು ವರ್ಷದ ಜಿಡಿಪಿಯನ್ನು ಈ ಹಿಂದೆ ಇದ್ದ ಶೇ.8.7ರಿಂದ ಶೇ.9.1ಕ್ಕೆ ಪರಿಷ್ಕರಿಸಲಾಗಿದೆ. ಇದರಿಂದ ಮೂಲ ಅಂಶದಲ್ಲಿ ಪ್ರಮುಖವಾಗಿ ಬದಲಾವಣೆಯಾಗಿದೆ. ಆದಾಗ್ಯೂ 2023ರ ಹಣಕಾಸು ವರ್ಷ ಜಿಡಿಪಿ ಬೆಳವಣಿಗೆ ದರ ಶೇ.7ಕ್ಕೆ ತಲುಪುವ ನಿರೀಕ್ಷೆ ಇದೆ.