Advertisement

Hunsur: ಕಳಪೆ ಕಾಮಗಾರಿ ಪ್ರಶ್ನಿಸಿದ ಗ್ರಾ.ಪಂ.ಉಪಾಧ್ಯಕ್ಷೆಯ ಮೂಳೆ ಮುರಿದ ಅಧ್ಯಕ್ಷೆಯ ಪತಿ

03:33 PM Feb 13, 2024 | Team Udayavani |

ಹುಣಸೂರು: ಕಳಪೆ ಕಾಮಗಾರಿ ಬಗ್ಗೆ ಪ್ರಶ್ನಿಸಿದ ಗ್ರಾಮ ಪಂಚಾಯತ್ ಉಪಾಧ್ಯಕ್ಷೆಗೆ ಅಧ್ಯಕ್ಷರ ಪತಿ ಹಾಗೂ ಸದಸ್ಯರೊಬ್ಬರು ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಉಪಾಧ್ಯಕ್ಷರ ಭುಜದ ಮೂಳೆ ಮುರಿದು ಅಸ್ಪತ್ರೆಗೆ ದಾಖಲಾಗಿರುವ ಘಟನೆ ತಾಲೂಕಿನ ಜಾಬಗೆರೆಯಲ್ಲಿ ನಡೆದಿದೆ.

Advertisement

ತಾಲೂಕಿನ ಶಂಕರೇಗೌಡನಕೊಪ್ಪಲು ನಿವಾಸಿ ನಾಗರಾಜು ಅವರ ಪತ್ನಿ ಹಾಗೂ ಜಾಬಗೆರೆ ಗ್ರಾ.ಪಂ.ಉಪಾಧ್ಯಕ್ಷೆ ಜಯಮ್ಮ ಹಲ್ಲೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವವರು.

ಘಟನೆ ವಿವರ:

ಜಾಬಗೆರೆ ಪಂಚಾಯಿತಿಯ ಕಟ್ಟಡದ ಮೇಲಂತಸ್ತಿನ ಕಟ್ಟದ ಕಾಮಗಾರಿ ನಡೆಯುತ್ತಿದ್ದು, ಸೋಮವಾರ ಮಧ್ಯಾಹ್ನ ಉಪಾಧ್ಯಕ್ಷೆ ಜಯಮ್ಮ ಪರಿಶೀಲಿಸಿ ಕೆಲಸ ಸರಿಯಾಗಿ ಮಾಡುತ್ತಿಲ್ಲ. ಕಳಪೆ ಕಾಮಗಾರಿ ನಡೆಸುತ್ತಿದ್ದೀರಾ, ಪಂಚಾಯತ್ ಕಟ್ಟಡವೇ ಹೀಗಾದರೆ ಹೇಗೆಂದು ಪ್ರಶ್ನಿಸಿ, ಕೆಲಸ ಸ್ಥಗಿತಗೊಳಿಸಿ, ಇಲ್ಲದಿದ್ದಲ್ಲಿ ನಿಮ್ಮ‌ ಮೇಲೆ ಕ್ರಮಕ್ಕೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗುವುದೆಂದು ಹೇಳಿದರು.

ಪಿ.ಡಿ.ಒ ಮಿನಾಕ್ಷಮ್ಮರಿಗೆ ಹೇಳಿದ ವೇಳೆ ಪಂಚಾಯತ್‌ ಕಚೇರಿಯಲ್ಲೇ ಕುಳಿತಿದ್ದ ಗ್ರಾ.ಪಂ.ಅಧ್ಯಕ್ಷೆ ಮಂಜುಳಮ್ಮರ ಪತಿ ಹಾಗೂ ಸದಸ್ಯ ತಿಮ್ಮನಾಯ್ಕ ಹೊರ ಬಂದು ನೀನ್ಯಾರು ಕೇಳೊದಕ್ಕೆ, ಇಲ್ಲಿ ನಮ್ಮದೆ ದರ್ಬಾರ್, ನನ್ನ ಹೆಂಡ್ತಿನೆ ಅಧ್ಯಕ್ಷೆ ನಮ್ಮದೆ ಅಧಿಕಾರ, ನಿನ್ಯಾರು ಕೇಳೊದಿಕೆ, ಇಲ್ಲಿ ಉಪಾದ್ಯಕ್ಷರಿಗೆ ಯಾವ ಅಧಿಕಾರ ಇಲ್ಲವೆಂದು ಕೇವಲವಾಗಿ ಮಾತನಾಡಿದ್ದರಿಂದ ಮಾತಿಗೆ ಮಾತು ಬೆಳೆದಿದೆ.

Advertisement

ಈ ವೇಳೆ ಉಪಾಧ್ಯಕ್ಷೆ ಜಯಮ್ಮರ ಮೇಲೆ ತಿಮ್ಮನಾಯಕ ದೈಹಿಕವಾಗಿಯೂ ಹಲ್ಲೆ ನಡೆಸಿದ್ದು ಮಾತ್ರವಲ್ಲದೇ ಆಕೆಯನ್ನು ಕೆಳಕ್ಕೆ ದೂಡಲಾಗಿದೆ. ಈ ವೇಳೆ ಕೆಳಕ್ಕೆ ಬಿದ್ದ ಉಪಾದ್ಯಕ್ಷೆ ಜಯಮ್ಮರ ಎಡ ಭುಜದ ಮೂಳೆ ಮುರಿದು ತೀವ್ರ ಪೆಟ್ಟಾಗಿದೆ.  ನೋವಿನಿಂದ ಕೂಗಿಕೊಂಡ ವೇಳೆ ಗ್ರಾ.ಪಂ.ಬಳಿಯಲ್ಲೇ ಇದ್ದ ಅವರ ಪುತ್ರ ನಾಗೇಂದ್ರ ನಾಯ್ಕ ತಾಯಿಯನ್ನು ಕರೆ ತಂದು ಸಾರ್ವಜನಿಕ ಅಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಸಂಬಂಧ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂಜಿನಿಯರ್ ಸೂಚನೆ ದಿಕ್ಕರಿಸಿದ್ದ ಗುತ್ತಿಗೆದಾರ:

ಈ ಕಾಮಗಾರಿ ಬಗ್ಗೆ ಮೇಲ್ನೋಟಕ್ಕೆ ಕಳಪೆ ಎಂದು ತಿಳಿದು ಎಇ, ಎಇಇ ಹಾಗೂ ಸ್ಥಳೀಯ ಇಂಜಿನಿಯರ್ ಸ್ಥಳ ಪರಿಶೀಲಿಸಿ ಕಾಮಗಾರಿ ಪರಿಶಿಲಿಸಿ ಸ್ಥಗಿತಗೊಳಿಸಲು ಸೂಚಿಸಿದ್ದರು. ಆದರೆ ಗುತ್ತಿಗೆದಾರ ಕೆಲಸ ನಿಲ್ಲಿಸದೆ ಮುಂದುವರೆಸಿದ್ದರು.

ಉಪಾಧ್ಯಕ್ಷರ ಮೇಲೆ ಹಲ್ಲೆ ಅವಮಾನವೀಯ:

ಸೋಮವಾರ ಕಚೇರಿಗೆ ಆಗಮಿಸಿದ ಉಪಾಧ್ಯಕ್ಷೆ ಕೆಲಸ ನಿಲ್ಲಿಸಿ ಎಂದು ಹೇಳಿದರು. ಏಕೆ ಮಾಡುತ್ತಿದ್ದಿರಿ ಎಂದು ಕೇಳಿದಕ್ಕೆ ಅವರ ಮೇಲೆಯೇ ಹಲ್ಲೆ ನಡೆಸಿರುವುದು ಪ್ರಜಾಪ್ರಭತ್ವ ವ್ಯವಸ್ಥೆಯಲ್ಲಿ ಒಬ್ಬ ಮಹಿಳಾ ಉಪಾಧ್ಯಕ್ಷರಾಗಿರುವ ಜಯಮ್ಮರ ಮೇಲೆ ಹಲ್ಲೆ ನಡೆಸಿರುವ ಅಧ್ಯಕ್ಷೆಯ ಪತಿ ಹಾಗೂ ತಿಮ್ಮನಾಯಕ ಅವಮಾನವೀಯವಾಗಿ ನಡೆದುಕೊಂಡಿದ್ದಾರೆ.

ತನಿಖೆಗೆ ಒತ್ತಾಯ:

ಕಾಮಗಾರಿಯ ಅಕ್ರಮ ಪ್ರಶ್ನಿಸಿದಕ್ಕೆ ಪಂಚಾಯತ್ ಅಬಿವೃದ್ದಿ ಅಧಿಕಾರಿ ಎದುರಿನಲ್ಲೇ ಅಧ್ಯಕ್ಷರ ಪತಿ ಜೊತೆಗೆ ಸದಸ್ಯರಿಂದಲೇ ಉಪಾಧ್ಯಕ್ಷರ ಮೇಲೆಯೇ ಈ ರೀತಿ ಹಲ್ಲೆ ನಡೆದಿರುವುದು ಆತಂಕಕ್ಕೀಡು ಮಾಡಿದ್ದು, ಈ ಸಂಬಂಧ ಸಮಗ್ರ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಜಿ.ಪಂ.ಸಿಇಓ ರಲ್ಲಿ  ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next