Advertisement

ಹೊರ ಜಿಲ್ಲೆಯಿಂದ ಬಂದ ಶಿರೂರು ವ್ಯಕ್ತಿಗೆ ಕ್ವಾರಂಟೈನ್‌

09:22 AM May 03, 2020 | mahesh |

ಉಡುಪಿ: ಬೆಳಗಾವಿ ಜಿಲ್ಲೆ ಖಾನಾಪುರದಿಂದ ಬಂದ ಬೈಂದೂರು ತಾಲೂಕು ಶಿರೂರು ಸಮೀಪದ ವ್ಯಕ್ತಿಯನ್ನು ಆಸ್ಪತ್ರೆ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಇವರು ಮಾತ್ರವಲ್ಲದೆ ಬೆಳಗಾವಿ ಜಿಲ್ಲೆಯಿಂದ ಶಂಕರನಾರಾಯಣ, ಸಿದ್ದಾಪುರ, ಸಾೖಕಟ್ಟೆಯ ಹತ್ತು ಜನರು ಎರಡು ವಾಹನಗಳಲ್ಲಿ ಶುಕ್ರವಾರ ಮುಂಜಾವ ಉಡುಪಿ ಜಿಲ್ಲೆಗೆ ಬಂದಿದ್ದರು. ಶಿರೂರು ಮೂಲದ ವ್ಯಕ್ತಿಗೆ ಕೊರೊನಾ ಸೋಂಕು ಇದೆ ಎಂಬ ಗುಲ್ಲು ಹಬ್ಬಿತು. ಇವರು ಈಗಾಗಲೇ ಖಾನಾಪುರದಲ್ಲಿ ಪರೀಕ್ಷೆ ಮಾಡಿಕೊಂಡಿದ್ದರು. ಕೂಡಲೇ ಸ್ಥಳೀಯ ಆರೋಗ್ಯಾಧಿಕಾರಿಯವರು ಬೆಳಗಾವಿ ಜಿಲ್ಲಾ ಆರೋಗ್ಯಾಧಿಕಾರಿಯವರಲ್ಲಿ ಮಾತನಾಡಿದಾಗ ಇವರಿಗೆ ಯಾವುದೇ ಸೋಂಕು ಇಲ್ಲವೆಂದು ದೃಢಪಡಿಸಿದರು.  ಇವರನ್ನು ಕುಂದಾಪುರದ ಆಸ್ಪತ್ರೆಯ ಐಸೊಲೇಶನ್‌ ವಾರ್ಡ್‌
ನಲ್ಲಿ ಕ್ವಾರಂಟೈನ್‌ಗೆ ಸೇರಿಸಿದ್ದಾರೆ. ಇವರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಉಳಿದವರಲ್ಲಿ ಏಳು ಮಂದಿಯನ್ನು ಉಡುಪಿ ಬನ್ನಂಜೆಯ ಬಿಸಿಎಂ ಹಾಸ್ಟೆಲ್‌ನಲ್ಲಿ, ಇಬ್ಬರನ್ನು ಕುಂದಾಪುರದ ದೇವರಾಜ ಅರಸು ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿರಿಸಲಾಯಿತು.

Advertisement

14 ಮಾದರಿ ಸಂಗ್ರಹ
ಶನಿವಾರ ಜಿಲ್ಲೆಯಲ್ಲಿ 14 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇವರಲ್ಲಿ ಉಸಿರಾಟದ ಸಮಸ್ಯೆ ಇರುವ ನಾಲ್ವರು, ಕೊರೊನಾ ಶಂಕಿತ ಇಬ್ಬರು, ಫ್ಲ್ಯೂ ಜ್ವರದ ಏಳು ಮಂದಿ, ಹಾಟ್‌ಸ್ಪಾಟ್‌ ಸಂಪರ್ಕದ ಒಬ್ಬರು ಇದ್ದಾರೆ.  11 ಜನರ ವರದಿ ಬಂದಿದ್ದು ಎಲ್ಲವೂ ನೆಗೆಟಿವ್‌ ಆಗಿವೆ. 50 ಜನರ ವರದಿಗಳು ಬರಬೇಕಾಗಿವೆ.  46 ಮಂದಿ ಹೆಸರು ನೋಂದಾಯಿಸಿದ್ದಾರೆ. 65 ಮಂದಿ 28 ದಿನಗಳ, 86 ಮಂದಿ 14 ದಿನಗಳ ಕ್ವಾರಂಟೈನ್‌ ಮುಗಿಸಿದ್ದಾರೆ. ಸದ್ಯ 446 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಒಬ್ಬರು ಆಸ್ಪತ್ರೆ ಕ್ವಾರಂಟೈನ್‌ಗೆ ಸೇರಿದ್ದು 38 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. 12 ಮಂದಿ ಐಸೊಲೇಶನ್‌ ವಾರ್ಡ್‌ಗೆ ಸೇರಿದ್ದು ಹತ್ತು ಮಂದಿ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ 50 ಮಂದಿ ವಾರ್ಡ್‌ನಲ್ಲಿದ್ದಾರೆ.

ವದಂತಿ ಹಬ್ಬಿದರೆ ಕಠಿನ ಕ್ರಮ: ಎಎಸ್ಪಿ
ಕುಂದಾಪುರ: ಬೆಳಗಾವಿಯಿಂದ ಬೈಂದೂರಿಗೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ಕೊರೊನಾ ನೆಗೆಟಿವ್‌ ಎನ್ನುವ ವರದಿ ಬಂದಿದ್ದರೂ ಕೆಲವರು ಅವರು ಕೊರೊನಾ ಸೋಂಕಿತ ಎನ್ನುವುದಾಗಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅಂಥವರ ಮೇಲೆ ಪ್ರಾಕೃತಿಕ ವಿಕೋಪ ನಿಯಂತ್ರಣ ಕಾಯ್ದೆಯಡಿ ಕೇಸು ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು
– ಹರಿರಾಂ ಶಂಕರ್‌, ಕುಂದಾಪುರ ಉಪವಿಭಾಗದ ಎಎಸ್ಪಿ

Advertisement

Udayavani is now on Telegram. Click here to join our channel and stay updated with the latest news.

Next