Advertisement

ಕಾಂಗ್ರೆಸ್‌ ನಿಯೋಗ ತಹಶೀಲ್ದಾರ್‌ ಭೇಟಿ

09:46 PM May 17, 2020 | Sriram |

ಕುಂದಾಪುರ: ಕ್ವಾರಂಟೈನ್‌ ಕೇಂದ್ರಗಳಲ್ಲಿ ವಿವಿಧೆಡೆ ಸಮಸ್ಯೆಗಳಾಗುತ್ತಿದ್ದು ಅದನ್ನು ನಿವಾರಿಸಿ ಉತ್ತಮ ವ್ಯವಸ್ಥೆ ಮಾಡಿಕೊಡಬೇಕೆಂದು ಒತ್ತಾಯಿಸಲು ಕಾಂಗ್ರೆಸ್‌ ನಿಯೋಗ ತಹಶೀಲ್ದಾರರನ್ನು ಭೇಟಿ ಮಾಡಿತು.

Advertisement

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಕುಂದಾಪುರದ ಹರಿಪ್ರಸಾದ್‌ ಶೆಟ್ಟಿ ಕಾನ್ಮಕ್ಕಿ, ವಂಡ್ಸೆಯ ಪ್ರದೀಪ್‌ ಶೆಟ್ಟರ ನೇತೃತ್ವದಲ್ಲಿ ವಿವಿಧ ಕ್ವಾರಂಟೈನ್‌ ಕೇಂದ್ರಗಳಿಗೆ ಭೇಟಿ ನೀಡಲಾಯಿತು.

ಎಲ್ಲ ಕ್ವಾರಂಟೈನ್‌ ಕೇಂದ್ರಗಳಲ್ಲಿ ಊಟೋಪಚಾರ, ವಸತಿಯದ್ದೇ ದೂರುಗಳು ಹೆಚ್ಚಾಗಿತ್ತು, ಶೌಚಾಲಯಗಳನ್ನು ನಾವೇ ಶುಚಿಗೊಳಿಸಿ ಕೊಳ್ಳುತ್ತೇವೆ. ಆದರೆ 4 ದಿನಗಳಿಂದ 1 ಕಪ್‌ ಚಹಾ ಇಲ್ಲ, ತಿಂಡಿ ಇಲ್ಲ. ಇಡ್ಲಿ ಬಂದಿದೆ ಅದು ನಮ್ಮಲ್ಲಿರುವ ಅರ್ಧದಷ್ಟು ಜನರಿಗೆ ಸಾಕಾಗುವುದಿಲ್ಲ ಎಂದು ಅಲ್ಲಿದ್ದವರು ನಿಯೋಗದ ಜತೆ ದೂರಿದರು.

ಕ್ವಾರಂಟೈನ್‌ನಲ್ಲಿರುವವರೆ ಹೇಳಿದಂತೆ 3 ದಿನದಿಂದ ಹಣಕೊಟ್ಟು ಹೊರಗಿನಿಂದ ಚಹಾ, ತಿಂಡಿ ತರಿಸಿಕೊಳ್ಳುತ್ತಿದ್ದಾರೆ. ಇದರಿಂದ ಎಲ್ಲಿಯಾದರೂ ಅವರಲ್ಲಿ ಯಾರಿಗಾದರೂ ಕೋವಿಡ್-19 ಪಾಸಿಟಿವ್‌ ಇದ್ದರೆ ಸಾರ್ವಜನಿಕರ ಗತಿಯೇನು?. ಕೋಟೇಶ್ವರದ ವರದರಾಜ್‌ ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕ್ವಾರಂಟೈನ್‌ಗೆ ಕಳುಹಿಸುವವರನ್ನು ಜಮೆ ಮಾಡಿದ್ದರೆ ಹೊರಗಡೆ ಕುಂದಾಪುರದ ಸಂತೆಯಾಗುತ್ತಿದೆ. ಸಂತೆಗೆ ಬಂದವರು ಅವರ ಸಂಬಂಧಿಕರನ್ನು ಮಾತನಾಡಿಸಲು ಹೋದರೆ ಯಾರು ಹೊಣೆ ಎಂದು ಕಾಂಗ್ರೆಸ್‌ ಮುಖಂಡರು ತಹಶೀಲ್ದಾರರನ್ನು ಭೇಟಿಯಾಗಿ ವಿಚಾರಿಸಿದರು.

ಈ ಸಂದರ್ಭ ತಹಶೀಲ್ದಾರರಿಗೇ ಎಷ್ಟು ಕ್ವಾರಂಟೈನ್‌ ಕೇಂದ್ರವಿದೆ, ಅಲ್ಲಿ ಎಷ್ಟು ಜನ ಕ್ವಾರಂಟೈನ್‌ ಆಗಿದ್ದಾರೆ ಎನ್ನುವ ಮಾಹಿತಿ ಇರಲಿಲ್ಲ. ಅವರು ನಿಯೋಗದ ಎದುರೇ ಅಧಿಕಾರಿಗಳಿಗೆ ಫೋನ್‌ ಮಾಡಿ ಮಾಹಿತಿ ಸಂಗ್ರಹಿಸುತ್ತಿದ್ದರು.ಕ್ವಾರಂಟೈನ್‌ ಕೇಂದ್ರದಲ್ಲಿರುವವರ ಬಗ್ಗೆ ನಿಗಾವಿರಲಿ. ಕೇಂದ್ರಗಳ ಅವ್ಯವಸ್ಥೆ ಸರಿಪಡಿಸಿ ಎಂದು ನಿಯೋಗ ಮನವಿ ಮಾಡಿತು.

Advertisement

ನಿಯೋಗದಲ್ಲಿ ವಿಕಾಸ್‌ ಹೆಗ್ಡೆ , ಶಿವರಾಮ ಶೆಟ್ಟಿ, ಚಂದ್ರಶೇಖರ್‌ ಖಾರ್ವಿ, ಎಪಿಎಂಸಿ ಅಧ್ಯಕ್ಷ ಶರತ್‌ ಶೆಟ್ಟಿ , ವಿನೋದ ಕ್ರಾಸ್ತಾ, ರವಿಚಂದ್ರ ಕುಲಾಲ ವಕ್ವಾಡಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next