Advertisement

ಕ್ವಾರಂಟೈನ್‌ ಕೇಂದ್ರ: ಉತ್ತಮ ವ್ಯವಸ್ಥೆಗೆ ಸೂಚನೆ

11:58 PM May 15, 2020 | Sriram |

ಕುಂದಾಪುರ: ಕ್ವಾರಂಟೈನ್‌ ಕೇಂದ್ರದಲ್ಲಿ ಇರುವವರು ನಮ್ಮ ಊರಿನ ನಮ್ಮ ವರೇ ಆಗಿದ್ದು ಅವರು ಅಪರಾಧಿಗಳಲ್ಲ, ಕೈದಿಗಳಲ್ಲ. ಅವರ ಹಾಗೂ ಇತರರ ಆರೋಗ್ಯ ರಕ್ಷಣೆಯ ಹಿತದೃಷ್ಟಿಯಿಂದ ಅವರನ್ನು ಪ್ರತ್ಯೇಕ ನಿಗಾದಲ್ಲಿ ಇರಿಸಲಾಗಿದೆ. ಆದ್ದ ರಿಂದ ಅವರಿಗೆ ಉತ್ತಮ ವಸತಿ, ಆಹಾರದ ವ್ಯವಸ್ಥೆ ಮಾಡಬೇಕಾದುದು ನಮ್ಮೆಲ್ಲರ ಕರ್ತವ್ಯ.

Advertisement

ಇದಕ್ಕಾಗಿ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ತಾಲೂಕು ಆಡಳಿತದ ಜತೆಗೆ ಕೈ ಜೋಡಿಸುತ್ತೇವೆ ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.

ಅವರು ಶುಕ್ರವಾರ ಇಲ್ಲಿನ ತಾಲೂಕು ಪಂ. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ, ಉತ್ತಮ ಗುಣಮಟ್ಟದ ಆಹಾರ, ಸಮಯಕ್ಕೆ ಸರಿಯಾಗಿ ನೀಡಬೇಕು. ಆಹಾರ ಕೊಂಡೊಯ್ಯಲು ಕೇಂದ್ರಕ್ಕೊಂದು ವಾಹನದಂತೆ ನಿಯೋಜಿಸಿ ಅಥವಾ ಅಲ್ಲೇ ಅಡುಗೆ ತಯಾರಿಸಿ ನೀಡುವ ವ್ಯವಸ್ಥೆ ಮಾಡಿ. ಪಂಚಾಯತ್‌ ಮಟ್ಟದಲ್ಲಿ ಸಭೆ ನಡೆಸಿ ದಾನಿಗಳನ್ನು ಸಂಪರ್ಕಿಸಿ ಎಂದರು.

ಕ್ವಾರಂಟೈನ್‌ ಸೆಂಟರ್‌ ಮಾಡಲು ವಿರೋಧ ಮಾಡುವವರ ಕುರಿತು ಪೊಲೀಸರಿಗೆ ಮಾಹಿತಿ ನೀಡಿ. ಇದು ದೇಶಕ್ಕೆ ಒದಗಿದ ವಿಪತ್ತು. ಇಂತಹ ಸಂದರ್ಭದಲ್ಲಿ ಯಾರೂ ಕಾರ್ಯಾಚರಣೆಗೆ ಅಡ್ಡಿ ಮಾಡುವಂತಿಲ್ಲ ಎಂದ ಶಾಸಕರು, ಕ್ವಾರಂಟೈನ್‌ ಕೇಂದ್ರಗಳ ಅಗತ್ಯ ನಿರ್ವಹಣೆಗೆ ಬೇಕಾದ ಎಲ್ಲ ನೆರವು ನೀಡುವುದಾಗಿ ಹೇಳಿದರು. ಆಹಾರ ಸರಬರಾಜಿಗೆ ತಾವೇ ಸ್ವತಃ ವಾಹನಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು. ಸಂಘ ಸಂಸ್ಥೆಗಳು, ರಾಜಕೀಯ ಪಕ್ಷದವರು ಜಾತಿ, ಮತ, ಪಕ್ಷ ಭೇದ ಮರೆತು ಸಹಕರಿಸಲಿದ್ದಾರೆ. ಸಂಬಂಧಪಟ್ಟ ಇಲಾಖೆಯವರು ಎಲ್ಲರನ್ನೂ ಒಳಗೊಂಡಂತೆ ಕ್ವಾರಂಟೈನ್‌ ಕೇಂದ್ರಗಳಲ್ಲಿ ಸುವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು ಎಂದರು.

ಎಎಸ್‌ಪಿ ಹರಿರಾಮ್‌ ಶಂಕರ್‌, ಎರಡು ಮೂರು ಕೇಂದ್ರಗಳಿಗೆ ಒಬ್ಬರಂತೆ ಪೊಲೀಸರನ್ನು ನಿಯೋಜಿಸಲಾಗಿದೆ. ಕುಂದಾಪುರ ವೃತ್ತದಲ್ಲಿ 1,027, ಬೈಂದೂರು ವೃತ್ತದಲ್ಲಿ 1,600 ಮಂದಿ ಕ್ವಾರಂಟೈನ್‌ ಕೇಂದ್ರಗಳಲ್ಲಿ ಇದ್ದಾರೆ. ಕುಂದಾಪುರ ವೃತ್ತದಲ್ಲಿ 27 ಕೇಂದ್ರಗಳಿಗೆ 23
ಹೆಡ್‌ಕಾನ್‌ ಸ್ಟೇಬಲ್‌, ಸಿಬಂದಿ, 11 ಹೋಮ್‌ ಗಾರ್ಡ್‌ ಗಳನ್ನು ನೇಮಿಸಲಾಗಿದೆ ಎಂದರು.

Advertisement

ತಹಶೀಲ್ದಾರ್‌ ತಿಪ್ಪೇಸ್ವಾಮಿ, ಕುಂದಾಪುರ ತಾಲೂಕಿನಲ್ಲಿ 540 ಮಂದಿ ಹೋಟೆಲ್‌ಗ‌ಳಲ್ಲಿ, 440 ಮಂದಿ ಸರಕಾರಿ ಕ್ವಾರಂಟೈನ್‌ ಕೇಂದ್ರಗಳಲ್ಲಿ, 9 ಹಾಸ್ಟೆಲ್‌ಗ‌ಳಲ್ಲಿ ಜನರನ್ನು ಉಳಿಸಿಕೊಳ್ಳಲಾಗಿದೆ. ವಿವಿಧ ದೇವಾಲಯಗಳ ಮೂಲಕ ಊಟ ನೀಡಲಾಗುತ್ತಿದೆ ಎಂದರು.

ಬ್ರಹ್ಮಾವರ ತಹಶೀಲ್ದಾರ್‌ ಕಿರಣ್‌ ಗೌರಯ್ಯ, ಕುಂದಾಪುರ ಇಒ ಕೇಶವ ಶೆಟ್ಟಿಗಾರ್‌, ಬೈಂದೂರು ಇಒ ಭಾರತಿ, ಉಡುಪಿ ಇಒ ಮೋಹನ್‌ಚಂದ್ರ, ಎಲ್ಲ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಕಾಂಗ್ರೆಸ್‌ ಅಧ್ಯಕ್ಷ ಹರಿಪ್ರಸಾದ್‌ ಶೆಟ್ಟಿ ಕಾನ್ಮಕ್ಕಿ, ಮಾಜಿ ಅಧ್ಯಕ್ಷ ಶಿವರಾಮ ಶೆಟ್ಟಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕಿರಣ್‌ ಕೊಡ್ಗಿ, ಮಂಡಲ ಅಧ್ಯಕ್ಷ ಶಂಕರ್‌ ಅಂಕದಕಟ್ಟೆ, ಮಾಜಿ ಅಧ್ಯಕ್ಷ ಸುರೇಶ್‌ ಶೆಟ್ಟಿ ಕಾಡೂರು, ಜಿ.ಪಂ. ಸದಸ್ಯೆ ಶ್ರೀಲತಾ ಸುರೇಶ್‌ ಶೆಟ್ಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next