Advertisement

ಖಾಸಗಿ ಹೊಟೇಲ್‌ಗ‌ಳಲ್ಲಿ ಕ್ವಾರಂಟೈನ್‌ ಕ್ಯಾಂಪ್‌

01:06 AM Apr 16, 2020 | Sriram |

ಬೆಂಗಳೂರು: ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ರಾಜ್ಯಸರಕಾರ ಸರಕಾರಿ ಆಸ್ಪತ್ರೆ, ಕಲ್ಯಾಣ ಮಂಟಪ, ಸಭಾಭವನಗಳ ಜತೆಗೆ ಖಾಸಗಿ ಹೊಟೇಲ್‌ಗ‌ಳಲ್ಲಿಯೂ ಕ್ವಾರಂಟೈನ್‌ ಕೇಂದ್ರ ತೆರೆಯಲು ಸೂಚಿಸಿದೆ.

Advertisement

ಕಡಿಮೆ ವೆಚ್ಚದ ಖಾಸಗಿ ಹೊಟೇಲ್‌ಗ‌ಳನ್ನು ಸಂಬಂಧಪಟ್ಟ ಮಹಾನಗರ, ನಗರಸಭೆಗಳು 1 ತಿಂಗಳಿಗೆ ಬಾಡಿಗೆಗೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಊಟ- ವಸತಿ ಸಹಿತ 900 ರೂ., ಇತರ ಮಹಾನಗರ ಪಾಲಿಕೆಗಳಲ್ಲಿ 750 ರೂ., ಪುರಸಭೆ ಸಹಿತ ಇತರ ಪ್ರದೇಶಗಳಲ್ಲಿ 600 ರೂ. ನಿಗದಿಪಡಿಸಲಾಗಿದೆ. ಸರಕಾರಿ ವಾಸ್ತವ್ಯದ ವ್ಯವಸ್ಥೆಗೆ ಅವಕಾಶ ಇಲ್ಲದಿರುವುದನ್ನು ಖಚಿತಪಡಿಸಿ ಖಾಸಗಿ ಹೋಟೆಲ್‌ಗ‌ಳನ್ನು ಬಾಡಿಗೆಗೆ ಪಡೆಯಬೇಕು. ಹೊಟೇಲ್‌ಗ‌ಳಲ್ಲಿ ಶುಚಿತ್ವ, ಸಿಬಂದಿಗೆ ಮಾಸ್ಕ್, ಸ್ಯಾನಿಟೈಸರ್‌ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next