Advertisement

100, 200 ರೂ. ಅಲ್ಲ ಸ್ವಾಮಿ ಗ್ರಾಹಕನಿಗೆ‌ ಬರೋಬ್ಬರಿ 1.36 ಕೋಟಿ ರೂ. ಬಿಲ್‌ ಮಾಡಿದ ರೆಸ್ಟೋರೆಂಟ್‌!

07:59 PM Nov 19, 2022 | Team Udayavani |

ಅಬುಧಾಬಿ: ಫೈವ್‌ ಸ್ಟಾರ್‌ ರೆಸ್ಟೋರೆಂಟ್‌ ಹೋಗಿ ಭರ್ಜರಿಯಾಗಿ ಊಟ ಮಾಡಿ ಬಂದರೆ ಬಿಲ್‌ ಎಷ್ಟಾಗಬಹುದು. ಸಾವಿರ ರೂ.ಗಿಂತ ಹೆಚ್ಚಾಗಬಹುದು. ಆದರೆ ಇಲ್ಲೊಂದು ರೆಸ್ಟೋರೆಂಟ್‌ ಗ್ರಾಹಕನೊಬ್ಬನಿಗೆ ಕೋಟಿಗೂ ಅಧಿಕ ಬಿಲ್‌ ಮಾಡಿದೆ.!

Advertisement

ತನ್ನ ಅಡುಗೆಯ ಶೈಲಿಯಿಂದಲೇ ಫೇಮಸ್‌ ಆಗಿರುವ ಟರ್ಕಿಷ್ ನ ಚೇಫ್ ನಸ್ರ್‌ – ಎಟ್‌ ಗೋಕ್ಸೆ (ಸ್ಲಾಟ್‌ ಬೇ ಎಂದೇ ಖ್ಯಾತಿ) ತನ್ನ ರೆಸ್ಟೋರೆಂಟ್‌ ಗೆ ನಲ್ಲಿ ಆಹಾರ ಸೇವಿಸಿದ ಗ್ರಾಹಕನಿಗೆ 1.36 ಕೋಟಿ.ರೂ ಬಿಲ್‌ ಮಾಡಿದ್ದಾರೆ.

ಸ್ಲಾಟ್‌ ಬೇ ತನ್ನ ಅಬುಧಾಬಿಯ ರೆಸ್ಟೋರೆಂಟ್‌ ನಲ್ಲಿ ಗ್ರಾಹಕನಿಗೆ ಕೊಟ್ಟ ಬಿಲ್‌ ನ ಫೋಟೋವನ್ನು ಹಂಚಿಕೊಂಡಿದ್ದು, ದೊಡ್ಡ ಮೊತ್ತದ ಬಿಲ್‌ ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ, ಎಲ್ಲರೂ ಒಮ್ಮೆ ದಂಗಾಗುವಂತೆ ಮಾಡಿದೆ.

ಬೋರ್ಡೆಕ್ಸ್, ಬಕ್ಲಾವಾ ಕಂಪೆನಿಯ ದುಬಾರಿ ವೈನ್ ಹಾಗೂ ಚಿನ್ನದ ಲೇಪಿತ‌ (ಗೋಲ್ಡ್‌ ಸ್ಟಿಕ್)  ಇಸ್ತಾಂಬುಲ್ ಮಾಂಸ ಮುಂತಾದ ಆಹಾರಗಳಿದ್ದವು. ಇದೆಲ್ಲದರ ಬಿಲ್‌ ಬರೋಬ್ಬರಿ 1.36 ಕೋಟಿ ರೂ.

ಬಿಲ್‌ ನ ಪ್ರತಿಯ ಫೋಟೋ ಹಂಚಿಕೊಂಡು ಸಾಲ್ಟ್‌ ಬೇ “ ಗುಣಮಟ್ಟ ಎಂದಿಗೂ ದುಬಾರಿಯಲ್ಲ”( “Quality never expensive”) ಎಂದು ಬರೆದುಕೊಂಡಿದ್ದಾರೆ.

Advertisement

ಸೋಶಿಯಲ್‌ ಮೀಡಿಯಾ ಬಳಕೆದಾರರೊಬ್ಬರು “ನಾನು ಎಷ್ಟು ಶ್ರೀಮಂತನಾಗಿದ್ದರೂ ಪರವಾಗಿಲ್ಲ, ಈ ರೀತಿಯ ಹುಚ್ಚುತನವನ್ನು ನಾನು ಎಂದಿಗೂ ಬೆಂಬಲಿಸುವುದಿಲ್ಲ” ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಇದೊಂದು ಹಗಲು ದರೋಡೆ ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next