Advertisement

ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಿ: ರಾಜುಗೌಡ

07:35 PM Sep 05, 2021 | Team Udayavani |

ನಾರಾಯಣಪುರ: ಸಮಯದ ಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವುದು, ಗುಣಮಟ್ಟಕ್ಕೆ ಆದ್ಯತೆ ನೀಡುವುದರ ಜೊತೆಗೆ ಕಾಮಗಾರಿ ಸ್ಥಳದಲ್ಲಿ ಮರ ಗಿಡಗಳ ರಕ್ಷಣೆಗೆ ಆದ್ಯತೆ ನೀಡಿ ಪರಿಸರ ಬಗ್ಗೆ ಕಾಳಜಿ ವಹಿಸಬೇಕು ಎಂದು ಶಾಸಕ ರಾಜುಗೌಡ ಹೇಳಿದರು.

Advertisement

ಇಲ್ಲಿನ ಕೆಬಿಜೆಎನ್‌ಎಲ್‌ ಕಚೇರಿಗಳ ಆವರಣದಲ್ಲಿ ಶುಕ್ರವಾರ ಸಂಜೆ ನೂತನವಾಗಿ ನಿರ್ಮಿಸಲಾಗಿರುವ ಕಾರ್ಯನಿರ್ವಾಹಕ ಎಂಜಿನಿಯರ್‌ ಕಚೇರಿ ಉದ್ಘಾಟನೆ ಹಾಗೂ 2.5 ಕೋಟಿ ವೆಚ್ಚದ ಮುಖ್ಯ ಎಂಜಿನಿಯರ್‌ ಕಚೇರಿ ಹಾಗೂ 71 ಲಕ್ಷ ವೆಚ್ಚದಲ್ಲಿ ಸಮುದಾಯ ಭವನಕ್ಕೆ ಅಡಿಗಲ್ಲು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈಗಾಗಲೇ ಮುಖ್ಯ ಎಂಜಿನಿಯರ್‌ ಕಚೇರಿ ಮತ್ತು ಈಶ್ವರ ದೇಗುಲದ ಬಳಿ ಸಮುದಾಯ ಭವನ ನಿರ್ಮಿಸಲು ಉದ್ದೇಶಿಸಿರುವ ಸ್ಥಳದಲ್ಲಿ ಬೆಳೆದು ನಿಂತ ಮರ ಗಿಡಗಳು ಹಾಗೂ ಕ್ರೀಡಾಂಗಣವಿದ್ದು, ಮರಗಳಿಗೆ ಧಕ್ಕೆಯಾಗದಂತೆ ಪರಿಸರ ಉಳಿಸಿಕೊಂಡು ಅಭಿವೃದ್ಧಿಗೆ ಆದ್ಯತೆ
ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇದನ್ನೂ ಓದಿ:ಭಾರಿ ಮಳೆಯಾಗುವ ಸಾಧ್ಯತೆ: ಗೋವಾದಲ್ಲಿ ಆರೆಂಜ್ ಅಲರ್ಟ್ ಘೋಷಣೆ

ಮುಖ್ಯ ಎಂಜಿನಿಯರ್‌ ಎಚ್‌. ಶಿವಕುಮಾರ, ಅಧೀಕ್ಷಕ ಅಭಿಯಂತರ ಶಂಕರ್‌ ರಾಠೊಡ, ಇಇ ಶಂಕರ್‌, ಟಿ.ಎ. ಅಜೀತಕುಮಾರ, ಎಇಇ
ವಿದ್ಯಾಧರ, ಇಎ ದೇವಿಂದ್ರಪ್ಪ ಇಕ್ಕಲಗುತ್ತಿ, ಗ್ರಾಪಂ ಅಧ್ಯಕ್ಷೆ ಹನುಮವ್ವ, ಪ್ರಮುಖರಾದ ಶರಣಪ್ಪ ಬಬಲೇಶ್ವರ, ಗ್ರಾಪಂ ಉಪಾಧ್ಯಕ್ಷ
ಅಂದಾನಪ್ಪ ಚಿನಿವಾಲರ, ಅಶೋಕ ನಾಯ್ಡು, ನರಸಿಂಹ ದೇಸಾಯಿ, ಅರ್ಚಕರಾದ ಸಂಗಯ್ಯ ಹಿರೇಮಠ, ರಾಘವೇಂದ್ರ ಆಚಾರ್ಯ, ಈರಯ್ಯ ಸ್ವಾಮಿ, ಗಂಗಾಧರ ಬಿರಾದರ, ದೇವರಾಜ ಹೆಗ್ಗೂರ, ಗುರು ಕುಲಕರ್ಣಿ, ಮಲ್ಲಿಕಾರ್ಜುನ ಮೇಸ್ತಕ್‌, ಮುತ್ತು ಕಬಡರ, ಗೌಡಪ್ಪ ಪೋಲಿಸ್‌ ಪಾಟೀಲ್‌, ಗೋಪಿಲಾಲ್‌ ನಾಯಕ, ಶೇಖರ ಚವ್ಹಾಣ ಸೇರಿದಂತೆ ಇನ್ನಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next