Advertisement

ಕ್ಯಾಮ್ಲಿನ್‌ ಆಂಗ್ಲ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ

12:01 PM Apr 14, 2018 | Team Udayavani |

ಬೆಂಗಳೂರು: ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಬೆಂಗಳೂರು, ಗುಣಮಟ್ಟದ ವಿದ್ಯಾಭ್ಯಾಸ ನೀಡುವ ವಿಚಾರದಲ್ಲಿ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಪಡೆದಿವೆ. ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು ಉದ್ಯಾನ ನಗರದಲ್ಲಿದ್ದು ಆ ಸಾಲಿನಲ್ಲಿ ಹಂಪಿನಗರದ ಕ್ಯಾಮ್ಲಿನ್‌ ಇಂಗ್ಲಿಷ್‌ ಶಾಲೆ ಕೂಡ ಒಂದಾಗಿದೆ.

Advertisement

ಸುಸಜ್ಜಿತ ಕಟ್ಟಡ, ಹೈಟೆಕ್‌ ಗ್ರಂಥಾಲಯ, ವಿದ್ಯಾರ್ಥಿಗಳಿಗೆ ಅಗತ್ಯವಾದ ಸೌಕರ್ಯಗಳನ್ನು ಹೊಂದಿರುವ ಕ್ಯಾಮ್ಲಿನ್‌ ಇಂಗ್ಲಿಷ್‌ ಶಾಲೆ, ಶಿಕ್ಷಣ ತಜ್ಞರ ಹೊಗಳಿಕೆಗೆ ಪಾತ್ರವಾಗಿದೆಯಲ್ಲದೆ ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಕಳೆದ ಮೂವತ್ತು ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಈ ಶಾಲೆಯಲ್ಲಿ ಓದಿದ ಹಲವು ವಿದ್ಯಾರ್ಥಿಗಳು ಈಗಾಗಲೇ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ.

1982 ರಲ್ಲಿ ಆರಂಭವಾದ ಈ ಶಾಲೆ, ಎಸ್‌ಎಸ್‌ಎಲ್‌ಸಿಯಲ್ಲಿ ನೂರಕ್ಕೆ ನೂರಷ್ಟು ಫ‌ಲಿತಾಂಶ ನೀಡುತ್ತಾ ಪೋಷಕರ ನಂಬಿಕೆಗೆ ಪಾತ್ರವಾಗಿದೆ. ಶಿಶುವಿಹಾರದಿಂದ ಹತ್ತನೇ ತರಗತಿವರೆಗೂ ಶಿಕ್ಷಣ ಕಲಿಕೆ ಇದ್ದು, ನುರಿತ ಶಿಕ್ಷಕ ವರ್ಗ ಹೊಂದಿದೆ.

ಉತ್ತಮ ಶಿಕ್ಷಣ ನೀಡುವ ಗುರಿಯಿಂದ ಟಿಬಿಜಿ ಆರಾಧ್ಯ ಅವರು ಈ ಶಾಲೆಯನ್ನು ಆರಂಭಿಸಿದ್ದರು. ಕೇವಲ 30 ಮಕ್ಕಳಿಂದ ಆರಂಭವಾದ ಈ ಶಾಲೆಯಲ್ಲೀಗ ಸಾವಿರಕ್ಕೂ ಅಧಿಕ ಮಕ್ಕಳು ವಿವಿಧ ತರಗತಿಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಶೈಕ್ಷಣಿಕ ಚಟುವಟಿಕೆಗಳ ಜತೆಗೆ ಇನ್ನಿತರ ಮಕ್ಕಳ ಚಟುವಟಿಕೆಗಳಿಗೂ ಆದ್ಯತೆಯನ್ನು ನೀಡಲಾಗಿದೆ.

Advertisement

ಶಾಲೆಯು ಆಧುನಿಕ ಶೈಲಿಯ ವಿಜ್ಞಾನ ಪ್ರಯೋಗಾಲಯ, ಗಣಕಯಂತ್ರ ಪ್ರಯೋಗಾಲಯ, ಉತ್ತಮ ಗ್ರಂಥಾಲಯ ಕೂಡ ಹೊಂದಿದೆ. ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರತೆಗೆಯುವಂತಹ ಕಾರ್ಯಗಳು ನಡೆಯಲಿದ್ದು, ಮಕ್ಕಳ ನೆಚ್ಚಿನ ಶಾಲೆ ಎಂಬ ಹೊಗಳಿಕೆಗೆ ಪಾತ್ರವಾಗಿದೆ. ಪಠ್ಯ ಚಟುವಟಿಕೆ ಅಷ್ಟೇ ಅಲ್ಲದೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗುತ್ತಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾರ್ಯಕ್ರಮ, ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರದ ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿದ್ಯಾರ್ಥಿಗಳು ಶಾಲೆಗೆ ಕೀರ್ತಿ ತಂದಿದ್ದಾರೆ. ಅಲ್ಲದೆ ಅಂತರ್‌ ಶಾಲಾ ಕ್ರೀಡಾ ಕೂಟದಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ.

ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಟಿಬಿಜಿ ಆರಾಧ್ಯ ಶಿಕ್ಷಣ ತಜ್ಞರಾಗಿದ್ದು ಮಕ್ಕಳಿಗೆ ಎಂತಹ ಶಿಕ್ಷಣಬೇಕು ಎಂಬುದನ್ನು ಅರಿತು ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಶಿಸ್ತಿನ ಸಿಪಾಯಿ ಪರಿಕಲ್ಪನೆಯಲ್ಲಿ ವಿದ್ಯಾರ್ಥಿಗಳನ್ನು ರೂಪಿಸುತ್ತಿದ್ದಾರೆ. ಮುಖ್ಯೋಪಾಧ್ಯಾಯರಾದ ಎಚ್‌.ಪಿ.ವಿಜಯಾ ಅವರು ವಿದ್ಯಾರ್ಥಿಗಳಲ್ಲಿ ಕಲಿಕೆ ಬಗ್ಗೆ ಆಸಕ್ತಿ ಮೂಡಿಸಿ ಸ್ಪರ್ಧಾತ್ಮಕ ಯುಗದಲ್ಲಿ ಯಾವ ರೀತಿ ಸಜ್ಜುಗೊಳ್ಳಬೇಕು ಎಂಬ ಬಗ್ಗೆ ಪ್ರತಿನಿತ್ಯ ಸಲಹೆ-ಸೂಚನೆ ನೀಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next