ಹೊಸದಲ್ಲಿ: ಮುಂದಿನ ಅಕ್ಟೋಬರ್‌ನಿಂದ ಡ್ರೈವಿಂಗ್ ಲೈಸೆನ್ಸ್ ಹಾಗೂ ರಿಜಿಸ್ಟ್ರೇಶನ್ ಸರ್ಟಿಫಿಕೇಟ್‌ಗಳು (ಆರ್‌ಸಿ) ಹೊಸ ರೂಪದಲ್ಲಿರಲಿದ್ದು, ಇಡೀ ದೇಶದಲ್ಲಿ ಒಂದೇ ಆಕಾರ, ಬಣ್ಣ ಮತ್ತು ಭದ್ರತಾ ವೈಶಿಷ್ಟéಗಳನ್ನು ಹೊಂದಿರಲಿವೆ. ಇದರಲ್ಲಿ ಕ್ಯೂಆರ್ ಕೋಡ್, ಎನ್‌ಎಫ್ಸಿ ಹಾಗೂ ಚಿಪ್‌ಗ್ಳು ಇರಲಿದ್ದು, ಟ್ರಾಫಿಕ್ ನಿಯಮ ಉಲ್ಲಂ ಸಿದರೆ ತಪ್ಪಿಸಿಕೊಂಡು ಹೋಗಲು ಸಾಧ್ಯವೇ ಇಲ್ಲ. ಇದರಲ್ಲಿರುವ ಕ್ಯೂಆರ್ ಕೋಡ್ ಅನ್ನು ಟ್ರಾಫಿಕ್ ಪೊಲೀಸರು ಸ್ಕ್ಯಾನ್ ಮಾಡಿದರೆ, ವಾಹನದ ಹಾಗೂ ಚಾಲಕರ ಸಮಗ್ರ ಮಾಹಿತಿ ಲಭ್ಯವಾಗುತ್ತದೆ ಮತ್ತು ಈ ಹಿಂದೆ ಯಾವುದೇ ಟ್ರಾಫಿಕ್ ಉಲ್ಲಂಘನೆ ಮಾಡಿ ದಂಡ ಕಟ್ಟದೇ ಇದ್ದರೆ ಮಾಹಿತಿ ನೀಡುತ್ತದೆ.
ಸದ್ಯ ಕೇಂದ್ರ ಸರಕಾರದ ನಿಯಮದ ಪ್ರಕಾರ ಕ್ಯೂಆರ್ ಕೋಡ್ ನಮೂದಿಸುವುದು ಕಡ್ಡಾಯವಾಗಿರಲಿದ್ದು, ಹೆಚ್ಚುವರಿ ಸೌಲಭ್ಯಗಳಾದ ಚಿಪ್ ಹಾಗೂ ಎನ್‌ಎಫ್ಸಿ ಅಳವಡಿಸುವುದು ರಾಜ್ಯಗಳಿಗೆ ಐಚ್ಛಿಕವಾಗಿದೆ. ಈ ಕಾರ್ಡ್‌ಗಳಲ್ಲಿ ಚಿಪ್ ಅಳವಡಿಸಿದರೆ 10 ವರ್ಷ ಬಾಳಿಕೆ ಬರುವಂತಿರಬೇಕು ಎಂದು ಸೂಚನೆ ನೀಡಲಾಗಿದೆ.
ಅಷ್ಟೇ ಅಲ್ಲ, ಡಿಎಲ್‌ನಲ್ಲಿ ಚಾಲಕರು ಅಂಗಾಂಗ ದಾನ ಮಾಡಲು ಸಮ್ಮತಿಸಿದ್ದರೆ ಅದರ ವಿವರಗಳೂ ಇರುತ್ತವೆ ಮತ್ತು ದಿವ್ಯಾಂ ಗರು ವಾಹನವನ್ನು ಚಾಲನೆ ಮಾಡುತ್ತಿದ್ದರೆ ಅದರ ವಿವರಗಳೂ ಈ ಕಾರ್ಡ್ ನಲ್ಲಿ ಇರಲಿದೆ. ಸದ್ಯ ವಿವಿಧ ರಾಜ್ಯಗಳ ಕಾರ್ಡ್‌ಗಳು ವಿವಿಧ ಆಕಾರ, ಬಣ್ಣದಲ್ಲಿ ಇರುತ್ತಿದ್ದವು. ಕೆಲವು ರಾಜ್ಯಗಳ ಕಾರ್ಡ್‌ನ ಗುಣಮಟ್ಟವೂ ಕಳಪೆಯಾಗಿರುತ್ತಿತ್ತು. ಡಿಎಲ್ ವ್ಯಾಲಿಡಿಟಿ ಮುಗಿಯದಿದ್ದರೂ ಕಾರ್ಡ್‌ನ ಬಣ್ಣ ಕಳೆಗುಂದಿರುತ್ತಿತ್ತು. ಹೀಗಾಗಿ ಕೇಂದ್ರ ಸರಕಾರ ಇಡೀ ದೇಶದಲ್ಲಿ ಒಂದೇ ನಮೂನೆಯ ಕಾರ್ಡ್ ಜಾರಿಗೆ ತರಲು ನಿರ್ಧರಿಸಿದೆ.
ಚಿಪ್, ಎನ್‌ಎಫ್ಸಿ ಕೂಡ ಇರಲಿದೆ
2019 ಅಕ್ಟೋಬರ್ 1ರಿಂದ ದೇಶಾದ್ಯಂತ ಜಾರಿ