Advertisement

ಕತಾರ್: ಶಿಕ್ಷಕರ ದಿನಾಚರಣೆ- ಶಿಕ್ಷಕರನ್ನು ಸನ್ಮಾನಿಸಿದ ಇಂಡಿಯನ್‌ ಕಲ್ಚರಲ್‌ ಸೆಂಟರ್

06:05 PM Sep 06, 2024 | Team Udayavani |

ಕತಾರ್: ಭಾರತೀಯ ರಾಯಭಾರಿ ಕಚೇರಿಯ ಆಶ್ರಯದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರವು ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಇತ್ತೀಚೆಗೆ 17 CBSE ಶಾಲೆಗಳಿಂದ ನಾಮನಿರ್ದೇಶನಗೊಂಡ 46 ವರ್ಷಗಳ ದೀರ್ಘಕಾಲ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ನೆರವೇರಿಸಿತು.

Advertisement

ಸಮಾರಂಭವನ್ನು ಐಸಿಸಿ(Indian Cultural Centre) ಅಶೋಕ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು ಮತ್ತು ಭಾರತೀಯ ರಾಯಭಾರ ಕಚೇರಿಯ ಡೆಪ್ಯುಟಿ ಚೀಫ್ ಸಂದೀಪ್ ಕುಮಾರ್ , ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

ಐಸಿಸಿಯ ಶಾಲಾ ಚಟುವಟಿಕೆಗಳ ಮುಖ್ಯಸ್ಥದ ಶಾಂತನು ದೇಶಪಾಂಡೆ ಈ ಕಾರ್ಯಕ್ರಮದ ಪರಿಕಲ್ಪನೆ ಕುರಿತು ವಿವರಿಸಿದರು.

Advertisement

ಐಸಿಸಿಯ ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್ ಸ್ವಾಗತಿಸಿದರು. ಐಸಿಸಿ ಅಧ್ಯಕ್ಷ ಎ.ಪಿ.ಮಣಿಕಂಠನ್ , ಈ ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಶಿಕ್ಷಕರ ಕೊಡುಗೆ ಕುರಿತು ಮಾತನಾಡಿದರು. ಸಂದೀಪ್ ಕುಮಾರ್ ಶಿಕ್ಷಕರ ಕೊಡುಗೆಯನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಐಸಿಸಿ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next