Advertisement

ಕತಾರ್‌ ಓಪನ್‌: ಜೊಕೋಗೆ ಆರಂಭಿಕ ಜಯ

12:34 PM Jan 05, 2019 | Team Udayavani |

ಕತಾರ್‌: ಕತಾರ್‌ ಓಪನ್‌ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ. 1 ಟೆನಿಸಿಗ ನೊವಾಕ್‌ ಜೊಕೋವಿಕ್‌ ಗೆಲುವು ದಾಖಲಿಸಿದ್ದಾರೆ.

Advertisement

ಜೊಕೋವಿಕ್‌ ಬೋಸ್ನಿಯಾದ ದಮಿರ್‌ ಜೂಹೂರ್‌ ವಿರುದ್ಧ 6-1, 6-2 ನೇರ ಸೆಟ್‌ಗಳಿಂದ ಜಯಿಸಿದರು.  ಮತ್ತೂಂದು ಪಂದ್ಯದಲ್ಲಿ 2ನೇ ಶ್ರೇಯಾಂಕಿತ ಡೊಮಿನಿಕ್‌ ಥೀಮ್‌ ಅಘಾತಕಾರಿ ಸೋಲನುಭವಿಸಿದ್ದಾರೆ. ಅವರು ಫ್ರಾನ್ಸ್‌ನ ಪಿಯರೆ ಹ್ಯೂಸ್‌ ಹರ್ಬರ್ಟ್‌ ವಿರುದ್ಧ 3-6, 5-7 ಅಂತರದಿಂದ ಸೋತರು.

ವಾವ್ರಿಂಕಾ ಗೆಲುವು
ಸ್ವಿಜರ್‌ಲ್ಯಾಂಡಿನ  ಸ್ಟಾನ್‌ ವಾವ್ರಿಂಕ ರಶ್ಯದ ಕರೆನ್‌ ಕಶನೋವ್‌ ಅವರನ್ನು 7-6 (9-7), 6-4 ನೇರ ಸೆಟ್‌ಗಳಿಂದ ಸೋಲಿಸುವಲ್ಲಿ ಯಶಸ್ವಿಯಾದರು. ಗಾಯದಿಂದ ಚೇತರಿಸಿಕೊಂಡು ಟೆನಿಸ್‌ಗೆ ಮರಳಿದ ಬೆಲ್ಜಿಯಂನ ಡೇವಿಡ್‌ ಗೊಫಿನ್‌ ಲಿಥುವೇನಿಯ ರಿಕಾರ್ಡಿಸ್‌ ಬೆರಾಂಕಿಸ್‌ ವಿರುದ್ಧ 3-6, 6-4, 7-6 (7-4) ಸೆಟ್‌ಗಳಿಂದ ಸೋತರು.

Advertisement

Udayavani is now on Telegram. Click here to join our channel and stay updated with the latest news.

Next