Advertisement

ಕತಾರ್‌ ಓಪನ್‌ ಟೆನಿಸ್‌: ಸೆಮಿಫೈನಲ್‌ಗೆ ಜೊಕೋವಿಕ್‌

12:30 AM Jan 05, 2019 | |

ದೋಹಾ: ವಿಶ್ವದ ನಂ. ವನ್‌ ಟೆನಿಸಿಗ ನೊವಾಕ್‌ ಜೊಕೋವಿಕ್‌ “ಕತಾರ್‌ ಓಪನ್‌’ ಕೂಟದಲ್ಲಿ ಅಜೇಯ ಓಟವನ್ನು ಮುಂದುರಿಸಿದ್ದು, ಸೆಮಿಫೈನಲ್‌ಗೆ ಕಾಲಿರಿಸಿದ್ದಾರೆ.

Advertisement

ಗುರುವಾರ ರಾತ್ರಿ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಜೊಕೋವಿಕ್‌ ಜಾರ್ಜಿಯಾದ ನಿಕೋಲಸ್‌ ಬಸಿಲಶ್ವಿ‌ಲಿ ವಿರುದ್ಧ 4-6, 6-3, 6-4 ಸೆಟ್‌ಗಳಿಂದ ಜಯ ದಾಖಲಿಸಿದರು. ಸೆಮಿಫೈನಲ್‌ನಲ್ಲಿ ಜೊಕೋವಿಕ್‌ ಸ್ಪೇನ್‌ ರಾಬರ್ಟೊ ಬಟಿಸ್ಟಾ ಅಗುಟ್‌ ಅವರನ್ನು ಎದುರಿಸಲಿದ್ದಾರೆ.

ಇನ್ನೊಂದು ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ  3 ಬಾರಿಯ ಗ್ರ್ಯಾನ್‌ಸ್ಲಾಮ್‌ ವಿಜೇತ ಸ್ಟಾನ್‌ ವಾವ್ರಿಂಕ ಅವರನ್ನು ಅಗುಟ್‌ 6-4, 6-4 ನೇರ ಸೆಟ್‌ಗಳಿಂದ ಸೋಲಿಸಿದರು.

ಡಬಲ್ಸ್‌ನಲ್ಲಿ ಸೋಲು
ಕೂಟದ ಡಬಲ್ಸ್‌ ವಿಭಾಗದಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದ ನೊವಾಕ್‌ ಜೊಕೋವಿಕ್‌-ಮಾರ್ಕೊ ಜೊಕೋವಿಕ್‌ ಜೋಡಿ ಪಿಯರೆ ಹ್ಯೂಸ್‌ ಹರ್ಬರ್ಟ್‌-ಡೇವಿಡ್‌ ಗೊಫಿನ್‌ ವಿರುದ್ಧ 1-6, 6-3, 13-15 ಸೆಟ್‌ಗಳಿಂದ ಪರಾಭವಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next