Advertisement
ದಿ ಗಾರ್ಡಿಯನ್ ವರದಿ ಮಾಡಿರುವ ಪ್ರಕಾರ, ಕತಾರ್ 2022ರ ವಿಶ್ವಕಪ್ ಪೂರ್ವ ತಯಾರಿ ನಡೆಸುತ್ತಿದೆ. ಕ್ರೀಡಾಂಗಣ ನಿರ್ಮಾಣ ಕೆಲಸದಲ್ಲಿ ವಲಸೆ ಕಾರ್ಮಿಕರನ್ನು ಬಳಸಲಾಗುತ್ತಿದೆ. ಕ್ರೀಡಾಕೂಟಕ್ಕೆ ಇನ್ನೂ ಎರಡು ವರ್ಷಗಳಿದ್ದು, ಕಾಮಗಾರಿ ನಡೆಸಲು ಸಮಯವಿದೆ. ಆದರೆ ಅದರ ಬಗ್ಗೆ ಗಮನ ಹರಿಸದ ಕತಾರ್ ಆಡಳಿತ, ಪ್ರತಿನಿತ್ಯವೂ ನೂರಾರು ಕಾರ್ಮಿಕರಿಂದ ಕೆಲಸ ಮಾಡಿಸುತ್ತಿದೆ. ಅಲ್ಲಿ ಸಾಮಾಜಿಕ ಅಂತರವಾಗಲೀ, ಸುರಕ್ಷತಾ ಕ್ರಮವಾಗಲಿ ಪಾಲಿಸುತ್ತಿಲ್ಲ ಎನ್ನಲಾಗುತ್ತಿದೆ.
ಕಳೆದ ವಾರ, ಕತಾರ್ ಅಧಿಕಾರಿಗಳು ಸಾಮೂಹಿಕ ಸಮಾರಂಭಗಳ ಆಯೋಜನೆ, ಜಿಮ್‌ಗಳು, ಚಿತ್ರಮಂದಿರಗಳು, ಶಾಪಿಂಗ್ ಮಾಲ್‌ಗಳು ಮತ್ತು ಬ್ಯಾಂಕ್‌ಗಳ ಕಾರ್ಯಾಚರಣೆಯನ್ನು ಸಂಪೂರ್ಣ ಸ್ಥಗಿತಗೊಳಿಸುವಂತೆ ಆದೇಶಿಸಿದ್ದರು. ಆದರೆ ಕಟ್ಟದ ನಿರ್ಮಾಣ ಕಾರ್ಮಿಕರಿಗೆ ಮತ್ತು ಖಾಸಗಿ ವಲಯದ ಇತರ ಕೆಲಸಗಾರರಿಗೆ, ಕಾರ್ಮಿಕರಿಗೆ ಈ ನಿಯಮ ಅನ್ವಯಿಸದು ಎಂದು ತಿಳಿಸಿದರು. ಸೀಮಿತ ನಿಯಮಗಳ ಅನ್ವಯ ಸಾರ್ವ ಜನಿಕ ಉದ್ಯಾನವ ನಗಳಲ್ಲಿ, ಕಡಲತೀರಗಳು ಮತ್ತು ಸಾಮಾಜಿಕ ಕೂಟಗಳನ್ನು ನಡೆಸಬಹುದೂ ಎಂದು ಹೇಳಿದೆ. ಹಾಗಾಗಿ ಪೂರ್ಣ ಲಾಕ್‌ಡೌನ್ ಪಾಲಿಸುತ್ತಿಲ್ಲ.
Related Articles
ಸಾರ್ವಜನಿಕ ಸ್ಥಳಗಳು ಮತ್ತು ಕೂಟಗಳಲ್ಲಿ ಸಾಮೂಹಿಕವಾಗಿ ಸೇರಬೇಡಿ ಎಂಬ ಆದೇಶ ಹೊರಡಿಸಿದ ಸುದ್ದಿಯನ್ನು ಸರಕಾರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಅಲ್ಲಿನ ಕಟ್ಟಡ ಕಾರ್ಮಿಕ ಓರ್ವರು “ಕಟ್ಟಡ ನಿರ್ಮಾಣ ಕಾರ್ಮಿಕರು ಹೇಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ? ನಮ್ಮ ಸುರಕ್ಷತೆಯ ಬಗ್ಗೆ ಯಾರೂ ಏಕೆ ಕಾಳಜಿ ವಹಿಸುವುದಿಲ್ಲ ? ನಾವು ಬದುಕುವುದು ಇಷ್ಟವಿಲ್ಲವೇ? ನಮ್ಮ ಕುಟುಂಬಗಳನ್ನು ತೊರೆದು ಜೀವದ ಆಸೆಬಿಟ್ಟು ಕೆಲಸಕ್ಕೆ ಬರಬೇಕೇ ? ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ.
Advertisement
ಇದೇ ವಿಷಯವಾಗಿ 2022ರ ಕ್ರೀಡಾಂಗಣ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿರುವ ಕೀನ್ಯಾದ ವಲಸೆ ಕಾರ್ಮಿಕರೂ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, “ಪ್ರತಿದಿನ ಸೋಂಕಿನ ಭಯದಿಂದಲೇ ಮನೆಯಿಂದ ಹೊರಬೀಳುವ ನಮಗೆ ಕೆಲಸ ಮಾಡುವಾಗಲು ಅದೇ ಭಯ.
ನಮ್ಮಂಥ ಬಡ ಕಾರ್ಮಿಕರು ದಿನ ದುಡಿದೇ ತಿನ್ನಬೇಕು. ಅದಕ್ಕೆ ಆದಾಯಬೇಕು. ಅನಿವಾರ್ಯವಾಗಿ ಮತ್ತು ಒತ್ತಡದಿಂದ ಕೆಲಸಕ್ಕೆ ಬರುತ್ತಿದ್ದೇವೆ ಎಂದು ಹೇಳಿದ್ದಾರೆ.