Advertisement
ಪ್ರಮೋದ್ ಭಗತ್ ಕಳೆದ 12 ತಿಂಗಳ ಅವಧಿಯಲ್ಲಿ 3 ಬಾರಿ ತಮ್ಮ ಇರುವಿಕೆಯ ಬಗ್ಗೆ ಮಾಹಿತಿ ನೀಡಲು ವಿಫಲರಾದ ಕಾರಣ ಬಿಡಬ್ಲ್ಯುಎಫ್ ಡೋಪಿಂಗ್ ನಿಯಮ ವನ್ನು ಉಲ್ಲಂ ಸಿ ದಂತಾಗಿದೆ. ಹೀಗಾಗಿ ಅವರು ತಪ್ಪಿತಸ್ಥರಾಗು ತ್ತಾರೆಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯ ಮಂಡಳಿ (ಸಿಎಎಸ್) ಮಾರ್ಚ್ ಒಂದರಂದು ಹೇಳಿತ್ತು. ಇದರ ವಿರುದ್ಧ ಭಗತ್ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಸಿಎಎಸ್ ತನ್ನ ಆದೇಶವನ್ನು ಎತ್ತಿಹಿಡಿದು ಅಮಾನತು ಕ್ರಮವನ್ನು ದೃಢಪಡಿಸಿದೆ.
“ನನ್ನ ಪಾಲಿಗೆ ಇದೊಂದು ಘೋರ ಶಿಕ್ಷೆ. ಆದರೆ ನಾನು ವಾಡಾ ತೀರ್ಪನ್ನು ಗೌರವಿಸು ತ್ತೇನೆ. ಆದರೆ ತಾಂತ್ರಿಕ ಕಾರಣಗಳಿಗೆ ಈ ರೀತಿ ಅಮಾನತು ಶಿಕ್ಷೆ ವಿಧಿಸುವುದು ಸರಿಯಾದ ಕ್ರಮವಲ್ಲ’ ಎಂಬುದಾಗಿ ಭಗತ್ ಹೇಳಿದ್ದಾರೆ. “ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದು ಅಮಾನತು ಗೊಂಡರೆ ಅದು ಸಹಜ. ಆದರೆ ಎರಡು ಸಲ ಪರೀಕ್ಷೆಗೆ ಕರೆ ಬಂದಾಗ ನಾನು ಬೇರೊಂದು ಸ್ಥಳದಲ್ಲಿದ್ದೆ. ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆ ಮತ್ತು ಸಾಕ್ಷ್ಯಗಳನ್ನು ನಾನು ಮೂರನೇ ಪರೀಕ್ಷೆ ವೇಳೆ ಸಲ್ಲಿಸಿದ್ದೆ. ಆದರೆ ಇದನ್ನು ತಿರಸ್ಕರಿಸಲಾಯಿತು. ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ಗೆ ಸಿದ್ಧತೆಯಲ್ಲಿದ್ದ ನನ್ನ ಪಾಲಿಗೆ ಇದೊಂದು ಭಾರೀ ನಷ್ಟ. ಅಲ್ಲದೇ ನಾನೋರ್ವ ಪದಕ ವಿಜೇತ ಕ್ರೀಡಾಪಟು. ನಿಜಕ್ಕೂ ಹೃದಯ ಬಿರಿದಿದೆ’ ಎಂದು ಪ್ರಮೋದ್ ಭಗತ್ ಅತ್ಯಂತ ನೋವಿನಿಂದ ಹೇಳಿಕೊಂಡಿದ್ದಾರೆ.
Related Articles
Advertisement
ಭಾರೀ ನಷ್ಟ: ಕೋಚ್ ಖನ್ನಾ“ಇದು ಅತ್ಯಂತ ದುಃಖದ ಹಾಗೂ ದುರದೃಷ್ಟಕರ ಸಂಗತಿ. ಪ್ರಮೋದ್ ಭಗತ್ ಮುಂದಿನ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಖಂಡಿತವಾಗಿಯೂ ಪದಕವೊಂದನ್ನು ಗೆದ್ದು ತರುತ್ತಿದ್ದರು. ಆದರೆ ಅವರೋರ್ವ ಹೋರಾಟಗಾರ. ಅತ್ಯಂತ ಬಲಿಷ್ಠರಾಗಿ ಅವರು ಮರಳಲಿದ್ದಾರೆ’ ಎಂಬುದಾಗಿ ಪ್ಯಾರಾ ಬ್ಯಾಡ್ಮಿಂಟನ್ ಕೋಚ್ ಗೌರವ್ ಖನ್ನಾ ಹೇಳಿದ್ದಾರೆ.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಆ. 28ರಿಂದ ಸೆ. 8ರ ತನಕ ನಡೆಯಲಿದೆ.