Advertisement

ಚೀನಾ ಆಟಗಾರ್ತಿಯನ್ನು ಸೋಲಿಸಿ ಸಿಂಗಾಪುರ ಓಪನ್ ಪ್ರಶಸ್ತಿ ಗೆದ್ದ ಪಿ.ವಿ.ಸಿಂಧು

10:13 AM Jul 18, 2022 | Team Udayavani |

ಸಿಂಗಾಪುರ: ಭಾರತದ ತಾರಾ ಆಟಗಾರ್ತಿ ಪಿ.ವಿ.ಸಿಂಧು ಅವರು ಇಂದು ಸಿಂಗಾಪುರ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಜಯ ಸಾಧಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಚೀನಾದ ವಾಂಗ್ ಝಿ ಯಿ ವಿರುದ್ಧ ಗೆದ್ದರು.

Advertisement

ಪಿ.ವಿ.ಸಿಂಧು ಅವರು ಸಿಂಗಾಪುರ ಓಪನ್ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯ ಮಹಿಳಾ ಶಟ್ಲರ್ ಮತ್ತು ಒಟ್ಟಾರೆ ಮೂರನೇ ಭಾರತೀಯರಾಗಿದ್ದಾರೆ. ಸೈನಾ ನೆಹ್ವಾಲ್ (2010) ಮತ್ತು ಬಿ ಸಾಯಿ ಪ್ರಣೀತ್ (2017) ಪ್ರಶಸ್ತಿ ಎತ್ತಿ ಹಿಡಿದಿದ್ದರು.

ಶನಿವಾರ ನಡೆದಿದ್ದ ಸೆಮಿ ಫೈನಲ್ ಪಂದ್ಯದಲ್ಲಿ ಜಪಾನಿನ ಸೇನಾ ಕವಾಕಮಿ ವಿರುದ್ಧ 21-15, 21-7 ನೇರ ಗೇಮ್ ಗಳಿಂದ ಗೆದ್ದಿದ್ದ ಸಿಂಧು ಫೈನಲ್ ಪ್ರವೇಶಿಸಿದ್ದರು. ಇಂದು ನಡೆದ ಫೈನಲ್ ಸೆಣಸಾಟದಲ್ಲಿ ಚೀನಾದ ವಾಂಗ್ ಝಿ ಯಿ ವಿರುದ್ಧ 21-9, 11-21, 21-15 ಅಂತರದಿಂದ ಜಯ ಸಾಧಿಸಿದರು.

Koo App

Absolutely fantastic performance by PV Sindhu. She has won the Singapore Open in a tense final. This is just what was needed ahead of the commonwealth Games, where she will be aiming for Gold! #PVSindhu #SingaporeOpen2022

Advertisement

Gaurav Kalra (@GK75) 17 July 2022

ಇದನ್ನೂ ಓದಿ:ಕರಾಚಿಯಲ್ಲಿ ತುರ್ತು ಲ್ಯಾಂಡ್ ಆದ ಹೈದರಾಬಾದ್ ಗೆ ಬರುತ್ತಿದ್ದ ವಿಮಾನ: ಪ್ರಯಾಣಿಕರು ಸುರಕ್ಷಿತ

ಇತ್ತೀಚೆಗೆ ನಡೆದಿದ್ದ ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ನಲ್ಲಿ ವಿಶ್ವದ 11ನೇ ಶ್ರೇಯಾಂಕಿತೆ ವಾಂಗ್ ಝಿ ಯಿ ಅವರನ್ನು ಸಿಂಧು ಸೋಲಿಸಿದ್ದರು. ಇದೀಗ ಸಿಂಗಾಪುರ ಓಪನ್ ಕೂಟದಲ್ಲೂ ತನ್ನ ಗೆಲುವಿನ ಓಟವನ್ನು ಮುಂದುವರಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next