Advertisement
ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸಿಂಧು ವಿಶ್ವದ 3ನೇ ರ್‍ಯಾಂಕಿಂಗ್ ಆಟಗಾರ್ತಿ ಚೆನ್ ಯುಫೀ ವಿರುದ್ಧ 21-19, 21-10 ನೇರ ಗೇಮ್‌ಗಳಿಂದ ಗೆದ್ದು ಬಂದರು. ರವಿವಾರದ ಫೈನಲ್ನಲ್ಲಿ ಸಿಂಧು ಜಪಾನಿನ 4ನೇ ಶ್ರೇಯಾಂಕಿತೆ ಅಕಾನೆ ಯಮಾಗುಚಿ ವಿರುದ್ಧ ಸೆಣಸಲಿದ್ದಾರೆ. ಯಮಾಗುಚಿ ವಿರುದ್ಧ ಸಿಂಧು 10-4 ಗೆಲುವಿನ ದಾಖಲೆ ಹೊಂದಿದ್ದಾರಷ್ಟೇ ಅಲ್ಲ, ಕಳೆದ 4 ಪಂದ್ಯಗಳನ್ನು ಗೆದ್ದು ಸಂಭ್ರಮಿಸಿದ್ದಾರೆ. ಹೀಗಾಗಿ ಸಿಂಧು ಅವರನ್ನೇ ನೆಚ್ಚಿನ ಆಟಗಾರ್ತಿಯಾಗಿ ಗುರುತಿಸಲಾಗಿದೆ.
ಆಲ್ ಇಂಗ್ಲೆಂಡ್ ಮಾತ್ರವಲ್ಲದೆ, ಈ ವರ್ಷದ ಆಸ್ಟ್ರೇಲಿಯ ಮತ್ತು ಸ್ವಿಸ್ ಓಪನ್ ಕೂಟಗಳಲ್ಲೂ ಚೆನ್ ಯುಫೀ ಚಾಂಪಿಯನ್ ಆಗಿ ಮೂಡಿಬಂದಿದ್ದರು. ಹೀಗಾಗಿ ತೀವ್ರ ಪೈಪೋಟಿ ಯನ್ನು ನಿರೀಕ್ಷಿಸಲಾಗಿತ್ತು. ಮೊದಲ ಗೇಮ್‌ನಲ್ಲೇ ಸಿಂಧುಗೆ ಇದರ ಅನು ಭವವಾಯಿತು. 18-18, 19-19ರಲ್ಲಿ ಪಂದ್ಯ ಸಮಬಲಗೊಂಡಾಗ ಇಲ್ಲಿ ಯಾರೂ ಗೆಲ್ಲುವ ಸಾಧ್ಯತೆ ಇತ್ತು. ಈ ಅದೃಷ್ಟ ಭಾರತೀಯಳದ್ದಾಯಿತು.
Related Articles
ಎರಡನೇ ಗೇಮ್‌ನಲ್ಲಿ ಸಿಂಧು ಸುಲಭ ಜಯ ಒಲಿಸಿಕೊಂಡರೂ ಆರಂಭದಲ್ಲಿ ಯುಫೀ 4-0 ಮುನ್ನಡೆಯಲ್ಲಿದ್ದರು. ಆದರೆ ಇಲ್ಲಿಂದ ಮುಂದೆ ಚೀನೀ ಆಟಗಾರ್ತಿ ಮಂಕಾಗುತ್ತ ಹೋದರು. ಸಿಂಧು ಮುನ್ನಡೆ ದ್ವಿಗುಣಗೊಂಡಿತು (16-8). ಯುಫೀ ಅಂಕ ಹತ್ತರ ಗಡಿ ದಾಟಲಿಲ್ಲ.
Advertisement