Advertisement

ಮಲೇಷ್ಯಾ ಬ್ಯಾಡ್ಮಿಂಟನ್‌: ಸಿಂಧು, ಅಶ್ಮಿತಾ ಕ್ವಾರ್ಟರ್‌ಫೈನಲಿಗೆ

09:50 PM May 23, 2024 | Team Udayavani |

ಕೌಲಾಲಂಪುರ: ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತೆ ಪಿ.ವಿ.ಸಿಂಧು ಸೋಲಿನ ದವಡೆಯಿಂದ ಪಾರಾಗಿ ಬಂದು ಮಲೇಷ್ಯಾ ಮಾಸ್ಟರ್ ಬ್ಯಾಡ್ಮಿಂಟನ್‌ ಕೂಟದ ಕ್ವಾರ್ಟರ್‌ ಫೈನಲ್‌ ಹಂತಕ್ಕೇರಿದ್ದಾರೆ.

Advertisement

ಇದೇ ವೇಳೆ ಅದ್ಭುತ ಆಟದ ಪ್ರದರ್ಶನ ನೀಡಿದ ಅಶ್ಮಿತಾ ಚಲಿಹಾ ಅವರು ಮೂರನೇ ಶ್ರೇಯಾಂಕದ ಅಮೆರಿಕದ ಬೈವೆನ್‌ ಝಾಂಗ್‌ ಅವರನ್ನು ಅಚ್ಚರಿಯ ರೀತಿಯಲ್ಲಿ ಸೋಲಿಸಿ ಕ್ವಾರ್ಟರ್‌ಫೈನಲ್‌ಗೇರಿದ್ದಾರೆ. ವಿಶ್ವದ 15ನೇ ರ್‍ಯಾಂಕಿನ ಸಿಂಧು ಕೊರಿಯದ ಸಿಮ್‌ ಯು ಜಿನ್‌ ಅವರನ್ನು 21-13, 12-21, 21-14 ಗೇಮ್‌ಗಳಿಂದ ಉರುಳಿಸಿ ಮುನ್ನಡೆದರು.

ಅವರು ವಿಶ್ವದ 34ನೇ ರ್‍ಯಾಂಕಿನ ಸಿಮ್‌ ಅವರನ್ನು ಮೂರನೇ ಬಾರಿ ಸೋಲಿಸಿದ ಸಾಧನೆ ಮಾಡಿದರು. ಐದನೇ ಶ್ರೇಯಾಂಕದ ಸಿಂಧು ಮುಂದಿನ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಹಾನ್‌ ಯುಯಿ ಅವರ ಸವಾಲನ್ನು ಎದುರಿಸಲಿದ್ದಾರೆ.

ಇದು ಸಿಂಧು ಪಾಲಿಗೆ ಸೇಡಿನ ಪಂದ್ಯವಾಗಿದೆ. ಸಿಂಧು ಮತ್ತು ಹಾನ್‌ ಕಳೆದ ತಿಂಗಳು ನಡೆದ ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಪರಸ್ಪರ ಮುಖಾಮುಖಿಯಾಗಿದ್ದು ಹಾನ್‌ ಜಯ ಸಾಧಿಸಿದ್ದರು.

2022ರಲ್ಲಿ ಈ ಹಿಂದೆ ಪ್ರಶಸ್ತಿ (ಸಿಂಗಾಪುರ ಓಪನ್‌) ಜಯಿಸಿದ್ದ ಸಿಂಧು ಅವರು ಹಾನ್‌ ಜತೆ ಇಷ್ಟರವರೆಗೆ ಆರು ಬಾರಿ ಮುಖಾಮುಖಿಯಾಗಿದ್ದು 5 ಗೆಲುವು ಒಂದು ಸೋಲಿನ ದಾಖಲೆ ಹೊಂದಿದ್ದಾರೆ.

Advertisement

ಅಮೋಘ ಜಯ:

ಇದೇ ವೇಳೆ 24ರ ಹರೆಯದ ಅಸ್ಮಿತಾ ಮೂರನೇ ಶ್ರೇಯಾಂಕದ ಝಾಂಗ್‌ ಅವರನ್ನು 21-19, 16-21, 21-12 ಗೇಮ್‌ಗಳಿಂದ ಉರುಳಿಸಿ ಕ್ವಾರ್ಟರ್‌ಫೈನಲ್‌ ಹಂತಕ್ಕೇರಿದರು. ಸೂಪರ್‌ 500 ಕೂಟದಲ್ಲಿ ಅವರು ಎರಡನೇ ಬಾರಿ ಕ್ವಾರ್ಟರ್‌ಫೈನಲ್‌ ತಲುಪಿದ ಸಾಧನೆ ಮಾಡಿದ್ದಾರೆ. 2022ರ ಇಂಡಿಯಾ ಓಪನ್‌ನಲ್ಲಿ ಅವರು ಅಂತಿಮ ಎಂಟರ ಸುತ್ತಿಗೇರಿದ್ದರು. ಮುಂದಿನ ಸುತ್ತಿನಲ್ಲಿ ಅವರು ಆರನೇ ಶ್ರೇಯಾಂಕದ ಚೀನದ ಝಾಂಗ್‌ ಯಿ ಮಾನ್‌ ಅವರನ್ನು ಎದುರಿಸಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next