Advertisement

ಸೋಲು, ಸೋಲು, ಸೋಲು –ಕುಗ್ಗದೇ ಸ್ವರ್ಣಕ್ಕೆ ಮುತ್ತಿಟ್ಟ ಪಿ.ವಿ. ಸಿಂಧು ಕಥೆ

10:06 AM Jan 25, 2020 | Nagendra Trasi |

ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಓದುಗರ ಆಯ್ದ ಲೇಖನ ಇಲ್ಲಿದೆ. “ಸಿಂಧು ಅವರು ತನ್ನ ಮನೆಯಿಂದ 56 ಕಿ.ಮೀ. ದೂರ ಪ್ರಯಾಣ ಮಾಡಿ ದೈನಂದಿನ ತರಬೇತಿ ಶಿಬಿರಗಳಲ್ಲಿ ಸಮಯಕ್ಕೆ ಸರಿಯಾಗಿ ಹಾಜರಾಗಿ ಅಗತ್ಯವಿರುವಷ್ಟೂ ಕಾರ್ಯಕ್ಷಮತೆ ತೋರುವುದು ಮತ್ತು ಶಿಸ್ತುಬದ್ಧವಾದ ಅವರ ಜೀವನವು ಅವರೊಬ್ಬ ಉತ್ತಮ ಬ್ಯಾಡ್ಮಿಂಟನ್ ಆಟಗಾರ್ತಿ ಅನ್ನುವುದನ್ನು ಬಿಂಬಿಸುತ್ತದೆ.”

Advertisement

ಬಾಲ್ಯ ಮತ್ತು ಆರಂಭಿಕ ತರಬೇತಿ

ಪಿ.ವಿ ಸಿಂಧು ಜನಿಸಿದ್ದು ಹೈದರಾಬಾದ್‍ನಲ್ಲಿ. ತಂದೆ ಪಿ.ವಿ. ರಮಣ ಮತ್ತು ತಾಯಿ ಪಿ. ವಿಜಯ. ಸಿಂಧುವಿನ ತಂದೆ-ತಾಯಿ ಇಬ್ಬರೂ ಸಹ ಮಾಜಿ ವಾಲಿಬಾಲ್ ಆಟಗಾರರಾಗಿರುವುದೊಂದು ವಿಶೇಷ. ಭಾರತ ಸರ್ಕಾರವು ಕೊಡಮಾಡುವ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಪಿ.ರಮಣರು 2೦೦೦ ನೆಯ ಇಸವಿಯಲ್ಲಿ ಭಾಜನರಾಗಿದ್ದಾರೆ.

ತಂದೆ ವೃತ್ತಿಪರ ವಾಲಿಬಾಲ್ ಆಟಗಾರರಾಗಿದ್ದರೂ ಸಹ ಸಿಂಧು ಮಾತ್ರ ಬ್ಯಾಡ್ಮಿಂಟನ್ ನಡೆಗೆ ಆಕರ್ಷಿತರಾದರು.. ಅದಕ್ಕೆ ಕಾರಣ, 2೦೦1 ರ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದ ಪುಲ್ಲೇಲ ಗೋಪಿಚಂದ್‍ರ ಯಶಸ್ಸು ಮತ್ತು ಅವರಿಂದ ಪಡೆದ ಸ್ಫೂರ್ತಿ. ತನ್ನ ಎಂಟನೆಯ ವಯಸ್ಸಿನಲ್ಲೇ ಸಿಂಧು ಬ್ಯಾಡ್ಮಿಂಟನ್ ಆಡಲು ಪ್ರಾರಂಭಿಸಿದ್ದರು, ಇದೂ ಸಹ ಅವರನ್ನು ಬ್ಯಾಡ್ಮಿಂಟನ್ ಕಡೆಗೆ ಸೆಳೆಯಲು ಕಾರಣವಾಯಿತು..

ವಿಶ್ವ ದಾಖಲೆ

Advertisement

ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಅವರು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ರ್‌ಯಾಂಕಿಂಗ್‌ನಲ್ಲಿ 5ನೇ ಸ್ಥಾನಕ್ಕೇರಿದ್ದಾರೆ. ಇದು ಅವರ ಕ್ರೀಡಾ ಜೀವನದ ಶ್ರೇಷ್ಠ ಸಾಧನೆಯಾಗಿದೆ. ಅವರು ಜನವರಿ 2017 ರಲ್ಲಿ ಸೈಯದ್ ಮೋದಿ ಗ್ರ್ಯಾನ್‌ಪ್ರಿ ಗೋಲ್ಡ್‌ ಪ್ರಶಸ್ತಿ ಗೆದ್ದಿದ್ದಾರೆ.ಆರ್ ಹೈದರಾಬಾದಿನ 21 ವರ್ಷದ ಸಿಂಧು ಅವರ ಖಾತೆಯಲ್ಲಿ 69,399 ಅಂಕಗಳು ಇವೆ. 2016 ರಲ್ಲಿ ರಿಯೊ ಡಿ ಜನೈರೊದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಅವರು ಬೆಳ್ಳಿ ಪದಕ ಜಯಿಸಿದ್ದರು. ನಂತರ ಅವರು ಚೀನಾ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದಿದ್ದರು.

ಅಂತಾರಾಷ್ಟ್ರೀಯ ಖ್ಯಾತಿಯ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ.ಹೈದರಾಬಾದ್ ನ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಇವರು, ಭಾರತೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತಿರುವ ಸ್ವಸಹಾಯ ಸಂಸ್ಥೆಯಾದ ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ ನ ಭಾಗವಾಗಿದ್ದಾರೆ. 2೦13ರ ಆಗಸ್ಟ್ 10ರಂದು ಇವರು ಚೀನಾ ದಲ್ಲಿ ಜರುಗಿದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ (ಪ್ರಕಾಶ್ ಪಡುಕೋಣೆ 1983 ರಲ್ಲಿ ಕಂಚು ಗೆದ್ದಿದ್ದರು. ಅನಂತರ ಭಾರತದ ಮೊದಲ ಸಿಂಗಲ್ಸ್ ಪದಕ) ನ ಸಿಂಗಲ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ಸೆಪ್ಟೆಂಬರ್ 21ರ 2012 ರಂದು ಬಿಡುಗಡೆ ಮಾಡಲಾದ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಶ್ರೇಯಾಂಕಗಳಲ್ಲಿ ಮೊದಲ 20ರೊಳಗಿನ ಶ್ರೇಣಿಯಲ್ಲಿದ್ದರು. ಬಿಡಬ್ಲ್ಯೂಎಫ್ ಜೂನಿಯರ್ ಶ್ರೇಯಾಂಕಗಳಲ್ಲಿ 3 ನೇ ಸ್ಥಾನದಲ್ಲಿದ್ದಾರೆ.

ನಮ್ಮ ಹೆಮ್ಮೆಯ ಭಾರತದ ಮಹಿಳೆ ಇವರು ಮಾಡಿರುವ ಸಾಧನೆಗಳ ಬಗ್ಗೆ ಎಷ್ಟು ಹೇಳಿದರೂ ಸಾಲದು.

ಸಾನಿಯಾ ಆರ್. ಎಸ್ ಡಿ ಎಂ ಕಾಲೇಜ್

ಉಜಿರೆ.

Advertisement

Udayavani is now on Telegram. Click here to join our channel and stay updated with the latest news.

Next