Advertisement

ಉದ್ಘಾಟನೆಗಾಗಿ ಮದುವಣಗಿತ್ತಿಯಂತೆ ಶೋಭಿಸುತ್ತಿದೆ ಜಿ.ಎಲ್‌.ಒನ್‌

07:57 PM Apr 01, 2023 | Team Udayavani |

ಪುತ್ತೂರು: ಜಿ.ಎಲ್‌. ಪ್ರಾಪರ್ಟಿಸ್‌ ಪ್ರವರ್ತಿತ ಜಿ.ಎಲ್‌.ಒನ್‌ ಶಾಪಿಂಗ್‌ ಮಾಲ್‌ ಎ.2 ರಂದು ಲೋರ್ಕಾಪಣೆಗೊಳ್ಳಲಿದ್ದು, ಉದ್ಘಾಟನೆಗಾಗಿ ಮದುವಣಗಿತ್ತಿಯಂತೆ ಶೋಭಿಸುತ್ತಿದೆ..!.

Advertisement

ನಗರದ ಮುಖ್ಯ ಬಸ್‌ ನಿಲ್ದಾಣದಿಂದ 500 ಮೀಟರ್‌ ದೂರದಲ್ಲಿ ನಿರ್ಮಾಣಗೊಂಡಿರುವ ಈ ಮಾಲ್‌ 1 ಲಕ್ಷ ಚದರಡಿ ವಿಸ್ತೀರ್ಣದಲ್ಲಿ ಇದೆ. ಒಟ್ಟು ಐದು ಅಂತಸ್ತುಗಳಿವೆ. ಬೇಸ್‌ಮೆಂಟ್‌ನಲ್ಲಿ ವಿಶಾಲ ಪಾರ್ಕಿಂಗ್‌, ನೆಲ ಮಹಡಿ ಮತ್ತು ಪ್ರಥಮ ಮಹಡಿಯಲ್ಲಿ ಶಾಫಿಂಗ್‌ ಮಳಿಗೆ, ಎರಡನೆ ಮಹಡಿಯಲ್ಲಿ ಸುಸಜ್ಜಿತ ಮೂರು ಸಿನೆಮಾ ಥಿಯೇಟರ್‌, ಮಕ್ಕಳ ಮನರಂಜನೆಗಾಗಿ ಗೇಮಿಂಗ್‌ ವಲಯ, ಆರು ಫುಡ್‌ ಕೋರ್ಟ್‌ ಸೇರಿದಂತೆ ವಿವಿಧ ಸೌಲಭ್ಯಗಳಿವೆ.

ಆಧುನಿಕ ಸೌಲಭ್ಯ

ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಮಾಲ್‌ ಪುತ್ತೂರಿಗೆ ಮೊದಲ ಬಾರಿಗೆ ಪರಿಚಯಗೊಳ್ಳುತ್ತಿದೆ. ಮೂರು ಲಿಫ್ಟ್‌, 2 ಎಲವೇಟರ್‌, ಪ್ರತಿ ಮಹಡಿಯಲ್ಲಿ ಶೌಚಾಲಯ, ಕ್ಲೀನ್‌ ಎನರ್ಜಿ-ಗ್ರೀನ್‌ ಎನರ್ಜಿ ಪರಿಕಲ್ಪನೆಯಲ್ಲಿ ಸೋಲಾರ್‌ ಪ್ಲ್ಯಾಂಟ್ ನಿರ್ಮಾಣ, ನೀರಿನ ಮರು ಬಳಕೆ, ಪವರ್‌ ಎಫಿಶಿಯೇಟ್‌ ಏರ್‌ ಕಂಡಿಷನ್‌, ಪ್ರತಿ ಮಹಡಿಯಲ್ಲಿ ಸಣ್ಣ ಗಾತ್ರ ಕಿಯೋಕ್ಸ್‌, ವಿಶಾಲ ಪಾರ್ಕಿಂಗ್‌, ಪ್ರತಿ ಮಹಡಿಯಲ್ಲಿ ವಾಶ್‌ ರೂಂ, ಕುಡಿಯುವ ನೀರಿನ ಸೌಲಭ್ಯ ಮೊದಲಾದ ಸೌಲಭ್ಯಗಳಿವೆ.

Advertisement

ಎ.2 : ಉದ್ಘಾಟನೆ
ಜಿ.ಎಲ್‌.ಒನ್‌ ಶಾಪಿಂಗ್‌ ಮಾಲ್‌ ಅನ್ನು ಎ.2 ರಂದು ಸಂಜೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಲಾಂಛನವನ್ನು ಸಂಸದ ನಳಿನ್‌ ಕುಮಾರ್‌ ಕಟೀಲು ಅನಾವರಣಗೊಳಿಸಲಿದ್ದಾರೆ. ಕಟ್ಟಡವನ್ನು ಶ್ರೀ ಧರ್ಮಸ್ಥಳ ಕ್ಷೇತ್ರದ ಡಿ.ಹರ್ಷೇಂದ್ರ  ಕುಮಾರ್‌ ಲೋಕಾರ್ಪಣೆಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷ ಜೀವಂಧರ್‌ ಜೈನ್‌, ಪುತ್ತೂರು ಎಸ್‌ಜಿ ಕಾರ್ಪೋರೇಟ್ಸ್‌ ಚೇರ್‌ವೆುನ್‌ ಕೆ.ಸತ್ಯಶಂಕರ್‌, ಪುತ್ತೂರು ಛೇಂಬರ್‌ ಆಫ್‌ ಕಾಮರ್ಸ್‌ ಮತ್ತು ಇಂಡಸ್ಟ್ರೀಸ್‌ ಅಧ್ಯಕ್ಷ ಜಾನ್‌ ಕುಟಿನ್ಹಾ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ|ಕಲ್ಲಡ್ಕ ಪ್ರಭಾಕರ ಭಟ್‌, ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ, ಮಂಗಳೂರು ಭಾರತ್‌ ಸಮೂಹ ಸಂಸ್ಥೆಯ ನಿರ್ದೇಶಕ ಆನಂದ್‌ ಪೈ, ಪುತ್ತೂರು ಅನ್ಸಾರುದ್ದಿನ್‌ ಜಮಾತ್‌ ಸಮಿತಿ ಅಧ್ಯಕ್ಷ ಎಲ್‌.ಟಿ.ಅಬ್ದುಲ್‌ ರಝಾಕ್‌ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಮ್ಯೂಸಿಕ್‌ ಪರ್ಬ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next