Advertisement
ಜಿಲ್ಲೆಯ 2ನೇ ಅತಿದೊಡ್ಡ ಪಟ್ಟಣ ಎಂಬ ಖ್ಯಾತಿ ಇದ್ದರೂ ಪುತ್ತೂರು ಪೇಟೆಯ ವ್ಯಾಪ್ತಿ ತೀರಾ ಸಣ್ಣದು. ಕೋರ್ಟ್ ರಸ್ತೆಯನ್ನು ಕೇಂದ್ರೀಕರಿಸಿಕೊಂಡು ಒಂದಷ್ಟು ದೂರದಲ್ಲಿ ಪೇಟೆ ಬೆಳೆದುಕೊಂಡಿದೆಯಷ್ಟೇ. ನಗರದ ವ್ಯಾಪ್ತಿಯನ್ನು ಇನ್ನಷ್ಟು ಹಿಗ್ಗಿಸಬೇಕು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಆದರೆ ಇದಕ್ಕೆ ಅಧಿಕಾರಿಗಳಿಂದ ಹಾಗೂ ಜನಪ್ರತಿ ನಿಧಿಗಳಿಂದ ಯಾವುದೇ ಕಿಮ್ಮತ್ತು ಸಿಕ್ಕಿಲ್ಲ. ಇದರಿಂದ ನೊಂದ ಕೆಲ ಸಾರ್ವ ಜನಿಕರು, ಕನಿಷ್ಠ ಇರುವ ವ್ಯವಸ್ಥೆಯನ್ನಾದರೂ ಸುಧಾರಿಸಿ ಎಂಬ ಬೇಡಿಕೆ ಮುಂದಿಟ್ಟಿದ್ದರು. ಸಾರ್ವಜನಿಕರ ಬೇಡಿ ಕೆಗೆ ನಗರಸಭೆ ಆಡಳಿತ ಹಸಿರು ನಿಶಾನೆ ತೋರಿಸಿದೆ. ನಗರವನ್ನು ಅಭಿವೃದ್ಧಿ ಪಡಿಸಲು ಹಲವಾರು ಸವಾಲುಗಳಿವೆ, ದೊಡ್ಡ ಮಟ್ಟಿನ ಅನುದಾನುಗಳ ಅಗತ್ಯವಿದೆ. ಆದರೆ ಇರುವ ವ್ಯವಸ್ಥೆ ಸುಧಾರಿಸಲು ಸಣ್ಣ ಅನುದಾನ ಸಾಕಲ್ಲವೇ? ಎಂದು ಚಿಂತಿಸಿ ಸುಧಾರಣ ಕ್ರಮಗಳಿಗೆ 10 ಲಕ್ಷ ರೂ. ಮೀಸಲಿಟ್ಟಿದೆ.
ಮೊಳಹಳ್ಳಿ ಶಿವರಾಯ ವೃತ್ತದ ಎದುರುಗಡೆಯ ಖಾಲಿ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ನಗರಸಭೆ ಮುಂದಾಗಿದೆ. ಇಲ್ಲಿ ಇಂಟರ್‌ಲಾಕ್ ಹಾಕಲು 10 ಲಕ್ಷ ರೂ. ಮಂಜೂರು ಮಾಡಿದೆ. ಸದ್ಯ ಈ ಪ್ರದೇಶದಲ್ಲಿ ಬೇಕಾಬಿಟ್ಟಿ ವಾಹನ ಪಾರ್ಕ್ ಮಾಡಲಾಗುತ್ತಿದೆ. ಇತ್ತೀಚೆಗೆ ಸಣ್ಣ ಅಂಗಡಿಯೊಂದು ಪ್ರತ್ಯಕ್ಷವಾಗಿದೆ. ಇದರ ಬಗ್ಗೆ ಸಹಾಯಕ ಆಯುಕ್ತರು, ನಗರಸಭೆಯಿಂದ ಲಿಖಿತ ಮಾಹಿತಿ ನೀಡುವಂತೆ ಕೇಳಿದ್ದಾರೆ. ಅದೇನೇ ಇದ್ದರೂ, ಪುತ್ತೂರು ಪೇಟೆಗೊಂದು ಪಾರ್ಕಿಂಗ್ ಜಾಗ ಸಿಗಲಿದೆ.
Related Articles
ಸುಮಾರು 30-40 ಸೆಂಟ್ಸ್ ಜಾಗದಲ್ಲಿ ಪಾರ್ಕಿಂಗ್ ಕಾಂಪ್ಲೆಕ್ಸ್ ನಿರ್ಮಿಸಲು ನಗರಸಭೆ ಯೋಜಿಸಿತ್ತು. ಆದರೆ ಇಷ್ಟು ಜಾಗ ಪೇಟೆಯಲ್ಲಿ ಇಲ್ಲ. ಆದ್ದರಿಂದ ಸದ್ಯಕ್ಕೆ ಇದರ ಪ್ರಸ್ತಾಪ ಕೇಳಿಬರುತ್ತಿಲ್ಲ.
Advertisement
ಏಕೆ ಸೂಚನ ಫಲಕ?ಪುತ್ತೂರಿನಲ್ಲಿ 5 ಒನ್ ವೇ ರಸ್ತೆಗಳಿವೆ. ಕಲ್ಲಾರೆ ಪೇ ಪಾರ್ಕಿಂಗ್ ಇದೆ. ಹಲವು ನೋ ಪಾರ್ಕಿಂಗ್ ರಸ್ತೆ, ಪ್ರದೇಶಗಳಿವೆ. ಸಂಚಾರ ದಟ್ಟಣೆ ದೃಷ್ಟಿಯಿಂದ ಹಲವು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಆದರೆ ಇವಾವುದರ ಸೂಚನೆಯೂ ಸಾರ್ವಜನಿಕರಿಗೆ ಸಿಗುತ್ತಿಲ್ಲ. ಪರಿಣಾಮ, ಹೊರ ಜಿಲ್ಲೆಯಿಂದ ಆಗಮಿಸಿದವರು, ತಮ್ಮ ವಾಹನವನ್ನು ಆಯಕಟ್ಟಿನ ಪ್ರದೇಶದಲ್ಲಿ ಪಾರ್ಕ್ ಮಾಡಿ ಹೋದರೆ, ಬರುವ ಹೊತ್ತಿಗೆ ಪೊಲೀಸರ ಲಾಕ್ ಬಿದ್ದಿರುತ್ತದೆ. ತುರ್ತು ಸಂದರ್ಭವಾದರೆ ತಾವು ಹೋಗಬೇಕಾದ ಸ್ಥಳಕ್ಕೆ ತೆರಳುವುದೋ ಅಥವಾ ಠಾಣೆಗೆ ದೌಡಾಯಿಸುವುದೋ? ಇಂತಹ ಹಲವು ಸನ್ನಿವೇಶಗಳು ಪುತ್ತೂರು ಪೇಟೆಯಲ್ಲಿ ನಡೆದಿವೆ. ಅಮಾಯಕ ಸಾರ್ವಜನಿಕರ ಸಂಕಷ್ಟದ ಸ್ಥಿತಿಯನ್ನು ತಪ್ಪಿಸಲು ಸೂಚನ ಫಲಕ ತೀರಾ ಅಗತ್ಯ. ಕಟ್ಟಡದ ಮಾಲಕರ ಜವಾಬ್ದಾರಿ
ಪಾರ್ಕಿಂಗ್ ಸೌಲಭ್ಯ ಕೊಡುವ ಪ್ರಾಥಮಿಕ ಜವಾಬ್ದಾರಿ ಆಯಾ ಕಟ್ಟಡದ ಮಾಲಕರದ್ದು. ಸರಕಾರಿ ಜಾಗದಲ್ಲಿ ಸರಕಾರ ಸೌಲಭ್ಯ ಒದಗಿಸಬಹುದು. ಸಂಚಾರಕ್ಕೆ ಅಡಚಣೆ ಉಂಟುಮಾಡುವ ವಾಹನಗಳಿಗೆ ಸೂಚನ ಫಲಕ ಇಲ್ಲದೇ ಇದ್ದರೂ ದಂಡ ವಿಧಿಸಬಹುದು. ಪಾರ್ಕಿಂಗ್ ಜಾಗದ ನಿಯಮ ಪಾಲನೆ ಆಗಿದ್ದರೆ, ಈ ಸಮಸ್ಯೆ ಕಾಡುತ್ತಿರಲಿಲ್ಲ. ಕಟ್ಟಡ ಮಾಲಕರ ನಿಯಮ ಉಲ್ಲಂಘನೆ, ಆಡಳಿತದ ಕರ್ತವ್ಯ ಲೋಪ, ಭ್ರಷ್ಟಾಚಾರಕ್ಕೆ ಸಹಕರಿಸಿದ ಕಾರಣ ಸಮಸ್ಯೆ ಉಲ್ಬಣಗೊಂಡಿದೆ.
– ದಿನೇಶ್ ಭಟ್,
ಸ್ಥಳೀಯ ಮುಖಂಡರು 10 ಲಕ್ಷ ರೂ. ಮಂಜೂರು
ಪುತ್ತೂರು ಪೇಟೆಯಲ್ಲಿ ಪಾರ್ಕಿಂಗ್‌ಗೆ ಜಾಗವೇ ಇಲ್ಲ. ಕಲ್ಲಾರೆಯಲ್ಲಿ ವಾಹನ ಪಾರ್ಕ್ ಮಾಡಿ, ರಿಕ್ಷಾದಲ್ಲಿ ಪೇಟೆಗೆ ಬರುವಂತಾಗಿದೆ. ಈ ನಿಟ್ಟಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲು 10 ಲಕ್ಷ ರೂ. ಮಂಜೂರು ಮಾಡಲಾಗಿದೆ. ಪ್ರಮುಖ ರಸ್ತೆಗಳಿಗೆ ಜೀಬ್ರಾ ಕ್ರಾಸಿಂಗ್, ಡಿವೈಡರ್, ಹಂಪ್‌ಗ್ಳಿಗೆ ಬಣ್ಣ ಬಳಿ ಯಲು, ಸೂಚನ ಫಲಕ ಅಳವಡಿಸಲು 10 ಲಕ್ಷ ರೂ. ನೀಡಲಾಗಿದೆ. ಸಂಚಾರಿ ಪೊಲೀಸರ ಸಲಹೆ ಪಡೆದುಕೊಂಡು, ನೋಟಿಫಿಕೇಶನ್‌ಗೆ ಜಿಲ್ಲಾಧಿಕಾರಿಗೆ ಕಳುಹಿಸಲಾಗುವುದು.
– ಜಯಂತಿ ಬಲ್ನಾಡ್,
ಅಧ್ಯಕ್ಷೆ, ಪುತ್ತೂರು ನಗರಸಭೆ ಗಣೇಶ್ ಎನ್. ಕಲ್ಲರ್ಪೆ