Advertisement
ಪುತ್ತೂರು ಟೌನ್‌ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ಉದಯವಾಣಿಯ ವತಿಯಿಂದ ಹಮ್ಮಿಕೊಂಡಿದ್ದ ‘ನವರೂಪ’ದ ಬಹುಮಾನ ವಿತರಣಾ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು. ಎಳೆಯ ಮಗುವಿನಿಂದ ಇಳಿ ವಯಸ್ಸಿನವರ ತನಕ ಬಣ್ಣ, ಬೆಳಕು ಬೀರುವ ಪರಿಣಾಮ ಆಗಾಧವಾದದು. ವೈಜ್ಞಾನಿಕ ದೃಷ್ಟಿಯಿಂದಲೂ ಬಣ್ಣ, ಬೆಳಕಿನ ಕಡೆಗೆ ಕಣ್ಣಿನ ದೃಷ್ಟಿ ಹರಿದಾಗ ಖುಷಿ ಮೂಡಿ ದೇಹದಲ್ಲಿ ನವೋಲ್ಲಾಸದ ಭಾವ ಮೂಡುತ್ತದೆ ಎನ್ನುವುದು ದೃಢಪಟ್ಟಿದೆ ಎಂದರು.
Related Articles
Advertisement
ಉದಯವಾಣಿ ಅಭಿಮಾನದ ಪತ್ರಿಕೆನಾನು ಇಪ್ಪತ್ತಾರು ವರ್ಷದ ಹಿಂದೆ ಪುತ್ತೂರಿಗೆ ಕಾಲಿಟ್ಟಾಗ ನ್ಯೂಸ್ ಪೇಪರ್ ಅಂದರೆ ಉದಯವಾಣಿ ಎನ್ನುವ ಮಾತಿತ್ತು. ಅಂದಿನಿಂದ ಈ ತನಕವು ಉದಯವಾಣಿ ಓದುತ್ತಲೇ ಬಂದಿದ್ದೇನೆ. ಎಷ್ಟೇ ಪತ್ರಿಕೆಗಳನ್ನು ಓದಿದರೂ ಉದಯವಾಣಿ ಓದದೆ ಇದ್ದರೆ ಆ ದಿನ ಪತ್ರಿಕೆ ಓದು ಅಪೂರ್ಣ ಎಂದೆನಿಸುತ್ತದೆ. ಅಂತಹ ಗುಣಮಟ್ಟವನ್ನು ಪತ್ರಿಕೆ ಹೊಂದಿದ್ದು ಉದಯವಾಣಿ ನಮ್ಮ ಅಭಿಮಾನದ ಪತ್ರಿಕೆ ಎಂದು ವಂದನಾ ಶಂಕರ್ ನುಡಿದರು. ಉದಯವಾಣಿ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ರಾಮಚಂದ್ರ ಮಿಜಾರು ಮಾತನಾಡಿ, ಈ ಬಾರಿಯ ನವರೂಪಕ್ಕೆ ನಾಡಿನ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪೋಟೋಗಳು ಬಂದಿವೆೆ. ಈ ಅಭೂತಪೂರ್ವ ಪ್ರತಿಕ್ರಿಯೆ ನವರೂಪದ ಸಂಭ್ರಮ ಎಷ್ಟರ ಮಟ್ಟಿಗೆ ಇತ್ತು ಅನ್ನುವುದಕ್ಕೆ ಉದಾಹರಣೆ ಎಂದರು. ಸವಾಲಿನ ಕಾಲಘಟ್ಟ ಇದು. ಮಹಿಳಾ ಸಬಲೀಕರಣದ ಜತೆಗೆ ಮತ್ತಷ್ಟು ಬಣ್ಣಗಳನ್ನು ಅವರ ಬದುಕಿಗೆ ತುಂಬುವುದು, ಮತ್ತಷ್ಟು ಜನರನ್ನು ಸ್ಪಂದಿಸುವ, ಪ್ರೀತಿಸುವ, ಒಪ್ಪಿಕೊಳ್ಳುವ ಮನೋಭಾವ ಸೃಷ್ಟಿಸುವ ಮೂಲಕ ಒಂದು ಸುಂದರ ಸಮಾಜದ ನಿರ್ಮಾಣದ ಆಶಯ ಉದಯವಾಣಿ ನವರೂಪದ್ದು ಎಂದರು.
ಪುಂಜಾಲಕಟ್ಟೆ ಕುಕ್ಕುಳ ಪ್ರಂಡ್ಸ್ ಸಮೂಹ, ಪುತ್ತೂರು ವೈಷ್ಣವಿ ತಂಡ, ಅಜ್ಜಿಬೆಟ್ಟು ವಠಾರ ಪ್ರಂಡ್ಸ್, ಬೆಳ್ಳಾರೆ ಪಡ್ಪು ಗೆಳತಿಯರ ಬಳಗ, ಧೀಶಕ್ತಿ ಮಹಿಳಾ ಯಕ್ಷ ಬಳಗ, ಗುರುವಾಯನಕೆರೆ ಶಾರಾದ ಮತ್ತು ಬಳಗ, ಐವರ್ನಾಡು ಸಂಗಮ ತಂಡಕ್ಕೆ ಮುಖ್ಯ ಅತಿಥಿ ವಂದನಾ ಶಂಕರ್ ಅವರು ಬಹುಮಾನ ವಿತರಿಸಿದರು. ಬಹುಮಾನ ಪಡೆದ ಸದಸ್ಯೆಯರು ಉದಯವಾಣಿಯ ನವರೂಪದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಉದಯವಾಣಿ ಮಾರುಕಟ್ಟೆ ವಿಭಾಗದ ಸೀನಿಯರ್ ಎಕ್ಸಿಕ್ಯೂಟಿವ್ ಹರ್ಷ ಎ ಪುತ್ತೂರು ಬಹುಮಾನಿತ ಪಟ್ಟಿ ವಾಚಿಸಿದರು. ಬಂಟ್ವಾಳ ಮಾರುಕಟ್ಟೆ ವಿಭಾಗದ ಎಕ್ಸಿಕ್ಯೂಟಿವ್ ಶ್ರೀವತ್ಸ ಸುದೆಂಬಳ ವಂದಿಸಿದರು. ವರದಿಗಾರ ಕಿರಣ್ ಪ್ರಸಾದ್ ಕುಂಡಡ್ಕ ನಿರೂಪಿಸಿದರು.