ನೃತ್ಯಾಂತರಂಗ 52 ಮತ್ತೂಂದು ವಿಶೇಷ ಕಾರ್ಯಕ್ರಮವಾಗಿತ್ತು. ಸಂಸ್ಥೆಯ ಉದಯೋನ್ಮುಖ ಕಲಾವಿದೆಯರಾದ ಕು| ಅಕ್ಷಯಾ ಪಾರ್ವತಿ ಸರೋಳಿ, ಇಶಾ ಸುಲೋಚನಾ ಮುಳಿಯ, ವಿಂಧ್ಯಾ ಕಾರಂತ, ಪ್ರಾರ್ಥನಾ ಮತ್ತು ಆದ್ಯ ಸುಲೋಚನಾ ಮುಳಿಯ ಇವರೆಲ್ಲರು ದೀಪಕ್ ಕುಮಾರ್ ಅವರ ಪರಿಕಲ್ಪನೆಯಂತೆ ಶಾಸ್ತ್ರೀಯ ಸಂಗೀತ ಆಧಾರಿತ ಕನ್ನಡ ಚಿತ್ರರಂಗದ ಹಳೆಯ ಗೀತೆಗಳಿಗೆ ಹೆಜ್ಜೆ ಹಾಕಿದರು. ಕನ್ನಡ ಚಿತ್ರರಂಗದಲ್ಲಿ ಇಷ್ಟೊಂದು ಶಾಸ್ತ್ರೀಯ ಆಧಾರಿತ ಹಾಡುಗಳಿವೆಯೇ ಎನ್ನುವಂತೆ ವಿಸ್ಮಯ ಪಡುವಂತಾಯಿತು. ಕನ್ನಡ ಚಿತ್ರರಂಗ ಎಷ್ಟೊಂದು ಶ್ರೀಮಂತವಾಗಿತ್ತು, ಎಷ್ಟು ಶಾಸ್ತ್ರೀಯ ಸಂಗೀತಗಳನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದರು ಎನ್ನುವುದನ್ನು ಮತ್ತೂಮ್ಮೆ ಅವಲೋಕಿಸುವಂತಾಯಿತು. ಭರತನಾಟ್ಯದ ಶಾಸ್ತ್ರೀಯ ಚೌಕಟ್ಟಿನೊಳಗೆ ಭದ್ರವಾಗಿ ಕೂರಿಸಿದಂತಿತ್ತು ನೃತ್ಯ ಸಂಯೋಜನೆ. ಮುಖ್ಯವಾಗಿ ಎಲ್ಲವೂ ದೇವತಾ ಸ್ತುತಿಯಾಗಿತ್ತು.
Advertisement
ಕಲಾಪ್ರಿಯ