Advertisement
ಧ್ವಜಾವರೋಹಣಒಂದು ಸುತ್ತು ಉತ್ಸವ ನಡೆದು ಬಳಿಕ ಧ್ವಜಾವರೋಹಣ ನಡೆಯಿತು. ಬಳಿಕ ಭಕ್ತರು ದೇವರ ಧರ್ಮನಡೆಯಲ್ಲಿ ನಿಂತು ಪ್ರಾರ್ಥಿಸಿ, ಕಾಣಿಕೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಧ್ವಜಾವರೋಹಣ ಮುಗಿದ ಬೆನ್ನಲ್ಲೇ ದೇವಾಲ ಯದಲ್ಲಿ ಅನ್ನಸಂತರ್ಪಣೆ ಆರಂಭವಾಯಿತು.
ಶ್ರೀ ದೇವರ ಸವಾರಿ ಮರಳಿ ಬರುವ ವೇಳೆ ಶ್ರೀ ಮಹಾಲಿಂಗೇಶ್ವರ ದೇವರ ಭಕ್ತಿಗೀತೆ, ಭಕ್ತರಿಂದ ಶಿವ ನಾಮಸ್ಮರಣೆ ನಡೆಯಿತು. ಗುರುವಾರ ಸಂಜೆ ದೇವರೊಂದಿಗೆ ಅವಭೃಥ ಸ್ನಾನಕ್ಕೆ ಬರಿಗಾಲಿನಲ್ಲಿ ಭಕ್ತಿ, ಶ್ರದ್ಧೆಯೊಂದಿಗೆ ತೆರಳಿದ ನೂರಾರು ಭಕ್ತರು ವೀರಮಂಗಲ ಕುಮಾರಧಾರಾ ನದಿಯಲ್ಲಿ ಶ್ರೀ ದೇವರೊಂದಿಗೆ ಸ್ನಾನ ಮುಗಿಸಿ ಮರಳಿ ದೇವರೊಂದಿಗೆ ದೇವಾಲಯಕ್ಕೆ ಬಂದು ಪುನೀತರಾದರು. ಈ ಬಾರಿ ಅವಭೃಥಕ್ಕೆ ತೆರಳಿದ ಭಕ್ತರ ಸಂಖ್ಯೆ ಅಧಿಕವಾಗಿತ್ತು. ಪೊಲೀಸ್ ನಿಗಾ
ಜಾತ್ರೆ ಆರಂಭದಿಂದ ಧ್ವಜಾವರೋಹಣದ ವರೆಗೆ ಪೊಲೀಸ್ ಸಿಬಂದಿ ನಿತ್ಯ ಬಂದೋಬಸ್ತ್ ನಡೆಸಿದರು. ಅವಭೃಥ ಸವಾರಿ ಉದ್ದಕ್ಕೂ ಹಾಗೂ ಸ್ನಾನದ ಬಳಿ ಭಕ್ತರು ಅಪಾಯಕಾರಿ ಸ್ಥಳದಲ್ಲಿ ನೀರಿಗೆ ಇಳಿಯದಂತೆ ಪೊಲೀಸರು ನಿಗಾ ವಹಿಸಿದರು.
Related Articles
ದೇವಾಲಯದಲ್ಲಿ ಎ. 10ರಿಂದ 19ರ ತನಕ ಪ್ರತಿದಿನ ಮಧ್ಯಾಹ್ನ ಭಕ್ತರಿಗೆ ವಿಶೇಷ ಅನ್ನಸಂತರ್ಪಣೆ ನಡೆಸಲಾಗಿತ್ತು. ಸೀಮೆಯ ಭಕ್ತರು ದೇವರಿಗೆ ಹೊರೆಕಾಣಿಕೆಯಾಗಿ ಸಮರ್ಪಿಸಿದ ವಿವಿಧ ಸುವಸ್ತುಗಳನ್ನು ಅನ್ನಸಂತರ್ಪಣೆಯ ಕಾರ್ಯಕ್ಕಾಗಿ ಬಳಸಲಾಯಿತು. ಲಕ್ಷಕ್ಕೂ ಮಿಕ್ಕಿ ಭಕ್ತರು 10 ದಿನಗಳಲ್ಲಿ ಶ್ರೀ ದೇವರ ಅನ್ನ ಪ್ರಸಾದ ಸ್ವೀಕರಿಸಿದರು. ದೈವಗಳ ನೇಮ ಎ. 10ರಿಂದ ಕೊಡಿ ಏರಿ ಜಾತ್ರೆ ನಡೆದು ಎ. 19ರಂದು ಕೊಡಿ ಇಳಿದ ಬಳಿಕ ಎರಡು ದಿನ ದೈವಗಳ ನೇಮ, ಚೂರ್ಣೋತ್ಸವ, ವಸಂತಕಟ್ಟೆ ಪೂಜೆ ನಡೆಯುತ್ತದೆ. ಶುಕ್ರವಾರ ರಾತ್ರಿ ಹುಲಿಭೂತ, ರಕ್ತೇಶ್ವರಿ ನೇಮ ನಡೆದು ಶನಿವಾರ ರಾತ್ರಿ ಮಂತ್ರಾಕ್ಷತೆ, ಅಂಙಣತ್ತಾಯ, ಪಂಜುರ್ಲಿ ವಗೈರೆ ದೈವಗಳ ನೇಮ ನಡೆದವು.
Advertisement
ದೇವರ ಸ್ನಾನಶುಕ್ರವಾರ ಬೆಳಗ್ಗೆ ವೀರಮಂಗಲ ಕುಮಾರಧಾರ ನದಿಯಲ್ಲಿ ಶ್ರೀ ದೇವರ ಅವಭೃತ ಸ್ನಾನ ವಿವಿಧ ವಿಧಿ- ವಿಧಾನಗಳೊಂದಿಗೆ ನಡೆಯಿತು. ತುಪ್ಪ, ಜೇನು, ಸೀಯಾಳ ಸೇರಿದಂತೆ ಪಂಚ ದ್ರವ್ಯಗಳಿಂದ ಶ್ರೀ ದೇವರಿಗೆ ಅವಭೃಥ ಸ್ನಾನ ನೆರವೇರಿಸ ಲಾಯಿತು. ಶ್ರೀ ದೇವರ ಸ್ನಾನದ ಬಳಿಕ ಸಾವಿರಾರು ಸಂಖ್ಯೆಯ ಭಕ್ತರು ನದಿಯಲ್ಲಿ ಮಿಂದು ಪುನೀತರಾದರು. ಬಳಿಕ ಶ್ರೀ ದೇವರ ಪ್ರಭಾವಳಿಯೊಂದಿಗೆ ನದಿ ದಡದಲ್ಲಿ ರುವ ಕಟ್ಟೆಯಲ್ಲಿ ಪೂಜೆ ನಡೆದು ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ಶ್ರೀ ದೇವರ ಸವಾರಿ ಮರಳಿ ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಮರಳಿತು.