Advertisement
ಟಿಕೆಟ್ ಕೌಂಟರ್ ಬಳಿ ಬಂದ ವಿದ್ಯಾರ್ಥಿಗಳು ಬೆಂಗಳೂರಿಗೆ ಹೊರಡುವ ರೈಲಿನ ಬಗ್ಗೆ ಮಾಹಿತಿ ಪಡೆದು ಟಿಕೆಟ್ ನೀಡುವಂತೆ ಕೇಳಿದ್ದಾರೆ. ಇವರ ವರ್ತನೆಯನ್ನು ಗಮನಿಸಿ ಸಂಶಯಗೊಂಡ ಸಿಬಂದಿ ವಿದ್ಯಾರ್ಥಿಗಳನ್ನು ವಿಚಾರಿಸಿದಾಗ, ಅವರು ತಪ್ಪಿಸಿಕೊಂಡು ಬಂದಿರುವ ಸಂಗತಿ ತಿಳಿಯಿತು. ಸ್ಥಳಕ್ಕಾಗಮಿಸಿದ ಪೊಲೀಸರು ಬಾಲಕರನ್ನು ವಿಚಾರಣೆ ನಡೆಸಿ ಅವರ ಮನವೊಲಿಸಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಬಾಲಕರು ಪೋಷಕರ ಜತೆಯಲ್ಲಿದ್ದು, ಪ್ರಕರಣ ಸುಖಾಂತ್ಯಗೊಂಡಿದೆ. ಪುತ್ತೂರು ರೈಲು ನಿಲ್ದಾಣದ ಸೀನಿಯರ್ ಟೆಕ್ ಸಿಬಂದಿಯಾದ ಕುಮಾರ್, ವಾಸಿಮ್ ಸಯ್ಯದ್, ವಸಂತ್, ಮಾಲಶ್ರೀ ಅವರ ಸಮಯಪ್ರಜ್ಞೆಯು ಮಕ್ಕಳ ರಕ್ಷಣೆಗೆ ಸಹಕಾರಿಯಾಯಿತು. Advertisement
Puttur; ಹಾಸ್ಟೆಲ್‌ನಿಂದ ತಪ್ಪಿಸಿಕೊಂಡು ಬೆಂಗಳೂರಿಗೆ ಹೊರಟಿದ್ದ ಬಾಲಕರ ರಕ್ಷಣೆ
01:07 AM Jul 14, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.