Advertisement

ಪುತ್ತೂರು: ರಿಕ್ಷಾ ಪರವಾನಿಗೆ ರದ್ದು ಪಡಿಸುವಂತೆ ಮನವಿ

04:51 PM Oct 13, 2017 | |

ಪುತ್ತೂರು: ತಾಲೂಕಿಗೆ ಹೊಸದಾಗಿ ರಿಕ್ಷಾ ಪರವಾನಿಗೆ ನೀಡುತ್ತಿರುವುದನ್ನು ರದ್ದು ಪಡಿಸಬೇಕು ಅಥವಾ ತಾಲೂಕಿನ ಬದಲು ಗ್ರಾಮಾಂತರ ಪರವಾನಿಗೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಿಕ್ಷಾ  ಚಾಲಕ, ಮಾಲಕರ ಸಂಘದ ವತಿಯಿಂದ ಸಹಾಯಕ ಕಮಿಷನರ್‌ ರಘುನಂದನ್‌ ಮೂರ್ತಿ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ನೀಡಲಾಯಿತು.

Advertisement

ತಾಲೂಕಿಗೆ ಹೊಸ ರಿಕ್ಷಾ ಪರವಾನಿಗೆ ನೀಡುವುದರಿಂದ ನಿರಂತರವಾಗಿ ರಿಕ್ಷಾಗಳ ಸಂಖ್ಯೆ ಹೆಚ್ಚುತ್ತಿವೆ. ಹೆಚ್ಚಿನ ರಿಕ್ಷಾಗಳು ಪುತ್ತೂರು ನಗರ ವ್ಯಾಪ್ತಿಯಲ್ಲಿಯೇ ಬಾಡಿಗೆ ಮಾಡುತ್ತಿದ್ದು, ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ರಿಕ್ಷಾಗಳು ಹೆಚ್ಚಾಗಿರುವುದರಿಂದ ಚಾಲಕರಿಗೆ ಬಾಡಿಗೆ ಇಲ್ಲದಂತಾಗಿದೆ. ಜತೆಗೆ ನಗರ ವ್ಯಾಪ್ತಿಯಲ್ಲಿ ರಿಕ್ಷಾ  ತಂಗುದಾಣದ ಕೊರತೆಯಿದ್ದು ರಿಕ್ಷಾಗಳನ್ನು ರಸ್ತೆ ಬದಿಯಲ್ಲಿಯೇ ನಿಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ತಾಲೂಕಿಗೆ ಹೊಸದಾಗಿ ರಿಕ್ಷಾಗಳಿಗೆ ಪರವಾನಿಗೆ ನೀಡಬಾರದು. ಒಂದು ವೇಳೆ ಈ ಕುರಿತು ಕಾನೂನಿನಲ್ಲಿ ಅವಕಾಶ ಇಲ್ಲದೇ ಇದ್ದರೆ, ತಾಲೂಕಿನ ಬದಲು ಗ್ರಾಮಾಂತರ ಪರವಾನಿಗೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಸಂಘದ ಅಧ್ಯಕ್ಷ ಗಿರೀಶ್‌ ನಾಯ್ಕ ಸೊರಕೆ, ಪ್ರಧಾನ ಕಾರ್ಯದರ್ಶಿ ಜಲೀಲ್‌ ಎಂ.ಕೆ., ಕೋಶಾಧಿಕಾರಿ ಸಂಜೀವ ಪೂಜಾರಿ, ಕಾರ್ಯಾಧ್ಯಕ್ಷ ಕೆ. ಜಯರಾಮ ಕುಲಾಲ್‌, ಉಪಾಧ್ಯಕ್ಷ ನಾಸೀರ್‌ ಇಡಬೆಟ್ಟು, ಇಸುಬು ಕೂರ್ನಡ್ಕ, ಸದಸ್ಯರಾದ ಕೃಷ್ಣಪ್ಪ ಬಂಬಿಲ ಉಪಸ್ಥಿತರಿದ್ದರು.

ಸೂಕ್ತ ಕ್ರಮಕ್ಕೆ ಆಗ್ರಹ ಕಳೆದ ಹಲವು ವರ್ಷಗಳಿಂದ ಸಂಘದ ವತಿಯಿಂದ ಸಂಬಂಧಿಸಿದ ಇಲಾಖೆಗಳಿಗೆ ಮನವಿ ಸಲ್ಲಿಸುತ್ತಾ ಬಂದರೂ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲ. ಇದರಿಂದ ರಿಕ್ಷಾ  ಚಾಲಕರಿಗೆ ತುಂಬಾ ತೊಂದರೆಯಾಗಿದೆ. ಅಲ್ಲದೆ ರಿಕ್ಷಾ  ಚಾಲಕರು ರಾಷ್ಟ್ರೀಕೃತ ಬ್ಯಾಂಕಿನಿಂದ ಹಾಗೂ ಪ್ರಧಾನ ಮಂತ್ರಿ ಯೋಜನೆ ಮೂಲಕ ಪಡೆದ ಸಾಲವನ್ನು ಮರುಪಾವತಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾ ಸಾರಿಗೆ ಪ್ರಾಧಿಕಾರದ ಸಭೆ ಕರೆದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಕೋರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next