Advertisement
ಶನಿವಾರ ವ್ಯಾಟಿಕನ್‌ನ ಸೈಂಟ್ ಪೀಟರ್ ಬಸಿಲಿಕಾದಲ್ಲಿ ಪೋಪ್ ಫ್ರಾನ್ಸಿಸ್ ಅವರು ನೇಮಕದ ಆದೇಶ ಹೊರಡಿಸಿದ್ದು, ಅದೇ ವೇಳೆ ಮಲಂಕರ ಸಿರಿಯನ್ ಕೆಥೋಲಿಕ್ ಧರ್ಮಸಭೆಯ ಕೇಂದ್ರ ತಿರುವನಂತಪುರದ ಸೈಂಟ್ ಮೆರೀಸ್ ಕೆಥೆಡ್ರಲ್‌ನಲ್ಲಿ ಧರ್ಮಸಭೆಯ ಮುಖ್ಯಸ್ಥ ಮೋರಾನ್ ಮೋರ್ ಬಸೇಲಿಯೋಸ್ ಕಾರ್ಡಿನಲ್ ಕ್ಲೀಮೀಸ್ ಕಾತೋಲಿಕ್ಕೋಸ್ ಹಾಗೂ ನೂಜಿಬಾಳ್ತಿಲದ ಪ್ರೋ ಕೆಥೆಡ್ರಲ್‌ನಲ್ಲಿ ಪುತ್ತೂರು ಧರ್ಮಪ್ರಾಂತದ ಕುಲಪತಿ ವಂ| ಫಿಲಿಪ್ ನೆಲ್ಲಿವಿಳ ಅವರು ಪೋಪ್ ಅವರ ಆದೇಶವನ್ನು ಪ್ರಕಟಿಸಿದರು.
ನೂತನ ಧರ್ಮಾಧ್ಯಕ್ಷರ ಪಟ್ಟಾಭಿ ಷೇಕ ಸಮಾರಂಭವು ಸೆ. 21 ರಂದು ಕೇರಳದ ಪಟ್ಟನಂತಿಟ್ಟ ಅಡೂರಿ ನಲ್ಲಿ ಜರಗಲಿದೆ. ಸೆ. 30ರಂದು ನೂಜಿ ಬಾಳ್ತಿಲದ ಪ್ರೋ ಕೆಥೆಡ್ರಲ್‌ನಲ್ಲಿ ಪೀಠಾ ರೋಹಣ ಸಮಾ ರಂಭ ನೆರವೇರಲಿದೆ. 1986ರಲ್ಲಿ ಬತ್ತೇರಿ ಧರ್ಮಪ್ರಾಂತಕ್ಕಾಗಿ ಸಿರಿಲ್ ಬಸೇಲಿಯೋಸ್ ಕಾತೋಲಿಕ್ಕೋಸರಿಂದ ಯಾಜಕ ದೀಕ್ಷೆಯನ್ನು ಪಡೆದ ಡಾ| ಕಾಲಾಯಿಲ್ ಅವರು 1994ರಲ್ಲಿ ರೋಮ್‌ನ ಗ್ರಿಗೋರಿಯನ್ ವಿ.ವಿ.ಯಿಂದ ದೈವಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದರು. ವಿವಿಧೆಡೆ ಧರ್ಮಗುರುವಾಗಿ, ಪ್ರಾಧ್ಯಾ ಪಕರಾಗಿ ಸೇವೆ ಸಲ್ಲಿಸಿರುವ ಅವರು ಪುತ್ತೂರು ಧರ್ಮ ಪ್ರಾಂತದ ವಿಕಾರ್ ಜನರಲ್ ಆಗಿಯೂ ಸೇವೆ ಸಲ್ಲಿಸಿರು ತ್ತಾರೆ. ಆ. 8ರಂದು ಅಪರಾಹ್ನ 3 ಗಂಟೆಗೆ ನೂಜಿಬಾಳ್ತಿಲದ ಸೈಂಟ್ ಮೇರೀಸ್ ಪ್ರೋ ಕೆಥೆಡ್ರಲ್‌ಗೆ ಆಗಮಿಸುವ ನೂತನ ಧರ್ಮಾಧಕ್ಷರಿಗೆ ಅದ್ದೂರಿ ಸ್ವಾಗತ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.