ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರನ ನೆಲದಲ್ಲಿ ಎರಡನೇ ವರ್ಷ ನಡೆದ ಪಿಲಿಗೊಬ್ಬುವಿನಲ್ಲಿ ಪಿಲಿಗಳ ನರ್ತನ ಪ್ರೇಕ್ಷಕರ ಮನಸೂರೆಗೊಳಿಸಿತು.
ವಿಜಯ ಸಾಮ್ರಾಟ್ ಆಶ್ರಯ ದಲ್ಲಿ ಎರಡು ದಿನಗಳ ಕಾಲ ನಡೆದ ಪಿಲಿಗೊಬ್ಬು ಹಾಗೂ ಫುಡ್ ಫೆಸ್ಟ್‌ಗೆ ಜನರ ದಂಡೇ ಹರಿದು ಬಂತು. ಜನರು ಒಂದೆಡೆ ಆಹಾರ ಮಳಿಗೆಯಲ್ಲಿನ ಬಗೆ-ಬಗೆಯ ತಿನಿಸುಗಳ ಸವಿ ಸವಿದರೆ, ಇನ್ನೊಂದೆಡೆ ಅದ್ದೂರಿ ವೇದಿಕೆಯಲ್ಲಿ ಗರ್ಜಿಸು ತ್ತಿದ್ದ ಪಿಲಿ ವೇಷಧಾರಿಗಳನ್ನು ಕಣ್ತುಂಬಿಸಿಕೊಂಡರು. ಮಧ್ಯಾಹ್ನದ ಅನಂತರ ವರುಣಾಗಮನದ ನಡುವೆಯು ಪ್ರೇಕ್ಷಕರ ಉತ್ಸಾಹಕ್ಕೇನೂ ಕ್ಕೇನೂ ಅಡ್ಡಿಯಾಗಲಿಲ್ಲ. ಸ್ವತ್ಛತೆಗೆ ವಿಶೇಷ ಗಮನ ನೀಡಲಾಗಿತ್ತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸುನಿಲ್ ಆಚಾರ್, ಮಾಜಿ ಶಾಸಕ ಸಂಜೀವ ಮಠಂದೂರು, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಜಿ.ಎಲ್.ಆಚಾರ್ಯ ಜುವೆಲ್ಸ್‌ನ ಮಾಲಕ ಬಲರಾಮ ಆಚಾರ್ಯ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ವಲಯ ಅರಣ್ಯಧಿಕಾರಿ ಕಿರಣ್ ಬಿ.ಎಂ., ಉದ್ಯಮಿ ಹರ್ಷ ಕುಮಾರ್ ರೈ, ನಗರಸಭೆ ಸದಸ್ಯ ರಮೇಶ್ ರೈ ಮೊಟ್ಟೆತ್ತಡ್ಕ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಬಿ. ಜಯರಾಮ ರೈ, ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರಸಭೆ ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ಪ್ರಮುಖರಾದ ಎ.ಕೆ. ಜಯರಾಮ ರೈ, ಅಶೋಕ್ ಶೆಣೈ, ಸಾಜ ರಾಧಾಕೃಷ್ಣ ಆಳ್ವ, ಸುಧೀರ್ ರೈ ನೇಸರಮ ಪಿಲಿಗೊಬ್ಬು ಸಮಿತಿ ಕಾರ್ಯಾಧ್ಯಕ್ಷ ಸುಜಿತ್ ರೈ ಪಾಲ್ತಾಡು, ಸಂಚಾಲಕ ನಾಗರಾಜ್ ನಡುವಡ್ಕ, ಪ್ರಧಾನ ಕಾರ್ಯದರ್ಶಿಗಳಾದ ಶರತ್ ಆಳ್ವ, ಉಪಾಧ್ಯಕ್ಷರಾದ ಶಂಕರ ಭಟ್, ದೇವಿಪ್ರಸಾದ್ ಭಂಡಾರಿ ಮೊದಲಾದವರಿದ್ದರು.
ಮುಡಿ ಎತ್ತಿ ಎಸೆದ ಹುಲಿ.
ವಿಜಯ ಸಾಮ್ರಾಟ್ ಸ್ಥಾಪಕ ಅಧ್ಯಕ್ಷ, ಪಿಲಿಗೊಬ್ಬು ಸಮಿತಿ ಗೌರವ ಅಧ್ಯಕ್ಷ ಸಹಜ್ ರೈ ಬಳಜ್ಜ ಸ್ವಾಗತಿಸಿದರು. ಪಿಲಿಗೊಬ್ಬು ಸಮಿತಿ ಅಧ್ಯಕ್ಷ ಉಮೇಶ್ ನಾಯಕ್ ಪುತ್ತೂರು ಪ್ರಸ್ತಾವನೆಗೈದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ನಿರೂಪಿಸಿದರು.
ಹುಲಿ ಕುಣಿತದಲ್ಲಿ ದೇವರನ್ನು ಕಂಡ ತುಳುನಾಡು: ನಳಿನ್
ಮಾಜಿ ಸಂಸದ ನಳಿನ್ ಕುಮಾರ್ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪಿಲಿಗೊಬ್ಬುವಿನ ಹಿಂದೆ ಧಾರ್ಮಿಕ ನಂಬಿಕೆಯ ಹಿನ್ನೆಲೆ ಇದೆ. ಹುಲಿ ಕುಣಿತ, ಆಟದಲ್ಲಿ ದೇವರನ್ನು ಕಂಡ ನಾಡು ತುಳುನಾಡು ಎಂದರು.
ಸಹಾಯ ಮಾಡುವ ಕಾರ್ಯ ಆಗಲಿ
ಪಿಲಿಗೊಬ್ಬ ವೇದಿಕೆ ಉದ್ಘಾಟಿಸಿದ ಕತಾರ್ ನ ಉದ್ಯಮಿ ರವಿ ಶೆಟ್ಟಿ ಮೂಡಂಬೈಲು ಮಾತನಾಡಿ, ಪುಣ್ಯ ಸಂಪಾದನೆಗೆ ಅನುಕಂಪ ಭರಿತ, ಧೀಮಂತ ವ್ಯಕ್ತಿತ್ವದೊಂದಿಗೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಕೆಲಸ ಕಾರ್ಯಗಳು ಯುವ ಜನತೆಯಿಂದ ನಡೆಯಬೇಕು ಎಂದರು.