Advertisement
ಪುತ್ತೂರು ಪ್ರಧಾನ ಅಂಚೆ ಪಾಲಕ ಶಶಿಧರ ರೈ ಮಾತನಾಡಿ, ಅಂಚೆ ಇಲಾಖೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ. ಇಲಾಖೆಯ ಮೂಲಕ ನೀಡುವ ಸೇವೆಗಳನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ರಾಷ್ಟ್ರಮಟ್ಟದಲ್ಲಿ ಜರಗಿದ ಪತ್ರ ಲೇಖನ ಸ್ಪರ್ಧೆಯಲ್ಲಿ ಕರ್ನಾಟಕ ಅಂಚೆ ವಲಯ ಮಟ್ಟದಲ್ಲಿ 18ರಿಂದ ಕಡಿಮೆ ವಯೋಮಾನದ ಅಂಚೆ ಲಕೋಟೆ ವಿಭಾಗದಲ್ಲಿ ಸರ್ವೆ ಗೌರಿ ಮೆಮೋರಿಯಲ್ ಹೈಸ್ಕೂಲ್‌ನ ವಿದ್ಯಾರ್ಥಿಗಳಾದ ಪ್ರಥಮ ಬಹುಮಾನ ಪಡೆದ ಆಯಿಷತ್ ಶಮಾ ಎ. ಮತ್ತು ದ್ವಿತೀಯ ಬಹುಮಾನ ಗಳಿಸಿದ ಪ್ರತೀಕ್ಷಾ ಎ. ಅವರನ್ನು ಸಮ್ಮಾನಿಸಲಾಯಿತು. ಪ್ರಥಮ ಬಹುಮಾನ 25 ಸಾವಿರ ರೂ. ನಗದು ಮತ್ತು ಪ್ರಮಾಣ ಪತ್ರ, ದ್ವಿತೀಯ ಬಹುಮಾನ 10 ಸಾವಿರ ರೂ. ನಗದು ಮತ್ತು ಪ್ರಮಾಣ ಪತ್ರವನ್ನು ನೀಡಲಾಯಿತು.ಸಹಾಯಕ ರಾಜೇಶ್ ಕುಮಾರ್ ಸ್ವಾಗತಿಸಿ, ವಂದಿಸಿದರು. ಎಂ. ಜಗನ್ನಾಥ ನಿರ್ವಹಿಸಿದರು.