Advertisement
ವೇದ ಸಂವರ್ಧನ ಪ್ರತಿಷ್ಠಾನದ ವತಿ ಯಿಂದ ಬೆಳಗ್ಗೆ 8 ಗಂಟೆಗೆ ಆರಂಭಗೊಂಡ ಮಹಾರುದ್ರಯಾಗ ಮಧ್ಯಾಹ್ನ ಪೂರ್ಣಾ ಹುತಿಯೊಂದಿಗೆ ಸಮಾಪನಗೊಂಡಿತು. ದೇವಸ್ಥಾನದ ಪ್ರಧಾನ ಅರ್ಚಕ ವಸಂತ ಕೆದಿಲಾಯ ಹಾಗೂ ಜಯರಾಮ ಭಟ್ ನೇತೃತ್ವದಲ್ಲಿ ರುದ್ರಯಾಗ ನಡೆಯಿತು. 100ಕ್ಕೂ ಹೆಚ್ಚು ಮಂದಿಯಿಂದ ರುದ್ರ ಪಾರಾಯಣ ನಡೆಯಿತು.
ಸೀಮೆಯ ಒಡೆಯ ಹಾಗೂ ಪ್ರಧಾನ ಶಿವ ದೇವಸ್ಥಾನವಾಗಿರುವ ಹಿನ್ನೆಲೆಯಲ್ಲಿ ಮಹಾಶಿವರಾತ್ರಿಯಂದು ಶ್ರೀ ಮಹಾ ಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ಭಕ್ತ ಜನಸಾಗರ ಹರಿದುಬಂತು. ಸರತಿಯ ಸಾಲಿನಲ್ಲಿ ಬಂದು ಭಕ್ತರು ದೇವರ ದರ್ಶನ ಪಡೆದರು. ರುದ್ರಾಭಿಷೇಕ ಸೇವೆ ನಡೆಸಿದರು. ಬೆಳಗ್ಗೆ ಮಹಾಶಿವರಾತ್ರಿಯ ಅಂಗವಾಗಿ ದೇವರಿಗೆ ಶತರುದ್ರ ಸೇವೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಸಂಜೆ ಶಿವಪುರಾಣ ಕಥಾ ಪ್ರವಚನ ಜರಗಿತು. ರಾತ್ರಿ ದೇವರ ಉತ್ಸವ ಬಲಿ, ಪಲ್ಲಕಿ ಉತ್ಸವ, ದೇವರ ಕೆರೆ ಆಯನ, ನಿತ್ಯ ಪೂಜೆಗಳು ಜರಗಿದವು.
Related Articles
ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ತನಕ ಸಾವಿರಕ್ಕೂ ಮಿಕ್ಕಿ ಮಂದಿ ರುದ್ರಾಭಿಷೇಕ ಸೇವೆ ನೆರವೇರಿಸಿದರು. 10 ಸಾವಿರಕ್ಕೂ ಮಿಕ್ಕಿ ಮಂದಿ ಪಾಲ್ಗೊಂಡಿದ್ದು, ಸಾವಿರಾರು ಮಂದಿ ಭಕ್ತರು ಮಧ್ಯಾಹ್ನ ಅನ್ನ ಪ್ರಸಾದ ಸ್ವೀಕರಿಸಿದರು.
Advertisement