Advertisement

Puttur ಪ್ರೇಮ ವೈಫಲ್ಯ: ಯುವಕ ಆತ್ಮಹತ್ಯೆ

11:46 PM Jun 01, 2024 | Team Udayavani |

ಪುತ್ತೂರು: ಪ್ರೇಮ ವೈಫಲ್ಯದಿಂದ ನೊಂದು ಯುವಕನೋರ್ವ ರೈಲ್ವೇ ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಬಕ-ಪುತ್ತೂರು ರೈಲ್ವೇ ನಿಲ್ದಾಣದ ಮುರ ಎಂಬಲ್ಲಿ ಜೂ. 1 ರಂದು ಬೆಳಕಿಗೆ ಬಂದಿದೆ.

Advertisement

ಛತ್ತೀಸ್‌ಗಢದ ಮನಮೋಹನದಾಸ್‌ (24) ಆತ್ಮಹತ್ಯೆಗೈದವರು. ಕಳೆದ ಒಂದು ತಿಂಗಳಿನಿಂದ ಪುತ್ತೂರಿನಲ್ಲಿ ಎಳನೀರು ಕೀಳುವ ತಂಡವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಮೇ 30ರಂದು ರಾತ್ರಿ ಈ ಕೃತ್ಯ ಎಸಗಿದ್ದಾನೆ.

ಛತ್ತೀಸ್‌ಗಢದ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಅವರಿಬ್ಬರ ಮಧ್ಯೆ ವಿರಸ ಉಂಟಾಗಿದ್ದು ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಪ್ರೇಯಸಿಯ ದೂರವಾಣಿಗೆ ಸಂದೇಶ ಕಳುಹಿಸಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾಸರಗೋಡಿನಲ್ಲಿ ಕೆಲಸ ಮಾಡು ತ್ತಿದ್ದ ಈತ ಒಂದು ತಿಂಗಳ ಹಿಂದೆ ಯಷ್ಟೇ ಪುತ್ತೂರಿಗೆ ಬಂದು ಕೆಲಸಕ್ಕೆ ಸೇರಿಕೊಂಡಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next