Advertisement
ಐದು ಎಕ್ರೆ ಜಮೀನು ಹೊಂದಿರುವವರಿಗೆ ವರ್ಷದಲ್ಲಿ 6 ಸಾವಿರ ರೂ. ನೀಡುವ ಕಿಸಾನ್ ಸಮ್ಮಾನ್ ಯೋಜನೆ ಕೆಲ ದಿನಗಳ ಹಿಂದಷ್ಟೇ ಘೋಷಣೆಯಾಗಿತ್ತು. ಅರ್ಜಿ ಸಲ್ಲಿಸುವಾಗ ಪಹಣಿ ಪತ್ರ (ಆರ್‌ಟಿಸಿ) ನೀಡಬೇಕೆಂದು ಮಾಹಿತಿ ನೀಡಲಾಗಿತ್ತು. ತಾಲೂಕು ಕಚೇರಿ ಮುಂದೆ ರೈತರು ಸಾಲು ನಿಲ್ಲುತ್ತಿದ್ದರು. ಸರ್ವರ್ ಸಮಸ್ಯೆಯಿಂದ ಪಹಣಿ ಪತ್ರ ಸಿಗದೇ ಬರಿಗೈಯಿಂದ ಮರಳುತ್ತಿದ್ದರು. ರೈತರ ಅಲೆದಾಟದ ಕುರಿತು ‘ಉದಯವಾಣಿ’ ಸುದಿನ ಫೆ. 28ರಂದು ವರದಿ ಪ್ರಕಟಿಸಿತ್ತು. ಇದೀಗ ಕಿಸಾನ್ ಸಮ್ಮಾನ್ ನಿಧಿಗೆ ಪಹಣಿ ಪತ್ರ ಅಗತ್ಯ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಮ ಕರಣಿಕರಿಂದ ಹಿಡುವಳಿ ಪತ್ರ ಪಡೆದು ಅರ್ಜಿ ಜತೆ ನೀಡಿದರೆ ಸಾಕೆಂದು ತಹಶೀಲ್ದಾರ್ ತಿಳಿಸಿದ್ದಾರೆ.
ಕಿಸಾನ್ ಸಮ್ಮಾನ್ ಯೋಜನೆಗೆ ಪಹಣಿ ಪತ್ರ ಅಗತ್ಯವಿಲ್ಲ. ಇದರ ಬದಲಾಗಿ ಗ್ರಾಮ ಕರಣಿಕರಿಂದ ಹಿಡುವಳಿ ಪತ್ರ ಪಡೆದುಕೊಂಡರೆ ಸಾಕು. ಪಹಣಿ ಪತ್ರದ ಸಂಖ್ಯೆಯನ್ನು ಅರ್ಜಿಯಲ್ಲಿ ದಾಖಲಿಸಬೇಕು.
– ಡಾ| ಪ್ರದೀಪ್ ಕುಮಾರ್
ತಹಶೀಲ್ದಾರ್, ಪುತ್ತೂರು ಮಾಹಿತಿ ಕೊರತೆ
ಗ್ರಾಮ ಕರಣಿಕರು ಪಹಣಿ ಪತ್ರ ಬೇಕೆಂದು ತಿಳಿಸಿದ್ದಾರೆ. ಈಗ ಬೇಡ ಎನ್ನುತ್ತಿದ್ದಾರೆ. ಮಾಹಿತಿ ಕೊರತೆಯಿಂದ ನಾಲ್ಕೈದು ದಿನಗಳಿಂದ ಅಲೆದಾಟವಾಯಿತು. ಮೊದಲೇ ತಿಳಿಸುತ್ತಿದ್ದರೆ ನಾಲ್ಕು ದಿನ ಸಾಲು ನಿಲ್ಲುವುದು ತಪ್ಪುತ್ತಿತ್ತು.
– ಬಾಲಕೃಷ್ಣ ಗೌಡ ಕೃಷಿಕ