Advertisement

ಪುತ್ತೂರು: 29ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ಚಾಲನೆ

03:24 PM Mar 19, 2022 | Team Udayavani |

ಪುತ್ತೂರು: ಕಂಬಳದಿಂದ ಮನೋಸ್ಥೈರ್ಯ ಮತ್ತು ಮನೋಬಲ ವೃದ್ಧಿಸುತ್ತದೆ. ಕಂಬಳ ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಮುಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಲಿ ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್‌ ಮುಳಿಯ ಹೇಳಿದರು.

Advertisement

ಪುತ್ತೂರು ಮಹಾಲಿಂಗೇಶ್ವರ ದೇಗುಲ ಮುಂಭಾಗದ ದೇವರಮಾರು ಗದ್ದೆಯಲ್ಲಿ 29ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳಕ್ಕೆ ಚಾಲನೆ ನೀಡಿ ಮಾತನಾಡಿದರು.

ಪುತ್ತೂರು ಮಾಯಿ ದೇವುಸ್‌ ಚರ್ಚ್‌ನ ಧರ್ಮಗುರು ಫಾ| ಡಾ| ಆ್ಯಂಟನಿ ಪ್ರಕಾಶ್‌ ಮೊಂತೆರೋ ಮಾತನಾಡಿ, ಕಂಬಳವು ದೇಶ, ಭಾಷೆ ಮತ್ತು ಸಂಸ್ಕೃತಿಯನ್ನು ಒಂದುಗೂಡಿಸುತ್ತದೆ. ಇದರ ಜತೆಗೆ ಅವೆಲ್ಲವನ್ನೂ ಮೀರಿದ ಮನುಷ್ಯತ್ವವನ್ನು ಬಿಂಬಿಸುತ್ತದೆ. ಎಲ್ಲ ಎಲ್ಲೆಗಳನ್ನು ಮೀರಿ ಕಂಬಳ ನಮ್ಮೆಲ್ಲರನ್ನೂ ಒಂದಾಗುವಂತೆ ಮಾಡುತ್ತಿದೆ ಎಂದರು.

ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಸೀತಾರಾಮ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾನಪದ ಕಲೆಯಾಗಿರುವ ಕಂಬಳ ಈ ನಾಡಿನ ಸಂಸ್ಕೃತಿಯ ಪ್ರತೀಕ ಎಂದರು.

Advertisement

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಸುದಾನ ದೇವಾಲಯದ ಧರ್ಮಗುರು ವಿಜಯ ಹಾರ್ವಿನ್‌, ಪುತ್ತೂರು ಜುಮ್ಮಾ ಮಸೀದಿ ಅಧ್ಯಕ್ಷ ಎಲ್‌.ಟಿ. ರಝಾಕ್‌ ಹಾಜಿ, ಎಪಿಎಂಸಿ ಅಧ್ಯಕ್ಷ ದಿನೇಶ್‌ ಮೆದು, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್‌ ಕುಮಾರ್‌ ಭಂಡಾರಿ, ನಗರಸಭೆ ಪೌರಾಯುಕ್ತ ಮಧು ಎಸ್‌ ಮನೋಹರ್‌, ಉಪಾಧ್ಯಕ್ಷೆ ವಿದ್ಯಾ ಆರ್‌. ಗೌರಿ, ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅರುಣ್‌ ಕುಮಾರ್‌ ಪುತ್ತಿಲ, ಕಂಬಳ ಸಮಿತಿ ಸಂಚಾಲಕ ಎನ್‌.ಸುಧಾಕರ ಶೆಟ್ಟಿ, ಪತ್ರಕರ್ತ ಡಾ| ಯು.ಪಿ. ಶಿವಾನಂದ, ವಿವಿಧ ಸಂಸ್ಥೆಗಳ ಮುಖ್ಯಸ್ಥರಾದ ಕರುಣಾಕರ ಸುವರ್ಣ, ಡಾ| ಪ್ರಸನ್ನ ಹೆಬ್ಟಾರ್‌, ಗುಣಪಾಲ ಕಡಂಬ, ಚೆನ್ನಪ್ಪ ರೈ ದೇರ್ಲ, ಉಲ್ಲಾಸ್‌ ಕೋಟ್ಯಾನ್‌, ಸಂಜೀವ ಪೂಜಾರಿ, ಸತೀಶ್‌ ಕುಮಾರ್‌ ಕೆಡೆಂಜಿ, ಶೇಖರ ನಾರಾವಿ, ರವೀಂದ್ರ ರೈ ಬಳ್ಳಮಜಲು, ಸುಧೀರ್‌ ಶೆಟ್ಟಿ ನೇಸರ, ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಉಮೇಶ್‌ ಶೆಣೈ, ಸಂಕಪ್ಪ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಕೆ. ಸೀತಾರಾಮ ರೈ ಸವಣೂರು ಅವರನ್ನು ಸಮ್ಮಾನಿಸಲಾಯಿತು. ಕಂಬಳ ಸಮಿತಿ ಅಧ್ಯಕ್ಷ ಎನ್‌. ಚಂದ್ರಹಾಸ ಶೆಟ್ಟಿ ಸ್ವಾಗತಿಸಿದರು. ಕಂಬಳ ಸಮಿತಿ ಉಪಾಧ್ಯಕ್ಷ ವಸಂತ ಕುಮಾರ್‌ ವಂದಿಸಿದರು. ನಿರಂಜನ ರೈ ಮಠಂತಬೆಟ್ಟು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next