ನಗರ: ಅಪಘಾತ ಮುಕ್ತ ವಾತಾವರಣ ಇರುವ ಆಫ್‌ರೋಡ್ ಚಾಲನೆ ಚಾಲಕರ ಚಾಣಾಕ್ಷತನವನ್ನು ಒರೆಗೆ ಹಚ್ಚುತ್ತದೆ ಎಂದು ನಿವೃತ್ತ ಕರ್ನಲ್ ಶರತ್ ಭಂಡಾರಿ ಹೇಳಿದರು. ಸಂಪ್ಯದ ಶ್ರೀ ವೆಂಕಟೇಶ್ವರ ಸಾಮಿಲ್ ಹಿಂಭಾಗ ನ. 18ರಂದು ಆಯೋಜಿಸಲಾಗಿದ್ದ ಜೀಪ್ ಗಳ ಆಫ್ ರೋಡ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಆಫ್‌ರೋಡ್ ಚಾಲನೆ ಸ್ಪರ್ಧೆಯಲ್ಲ. ಇದು ಚಾಲಕರ ನೈಪುಣ್ಯವನ್ನು ಪರೀಕ್ಷಿಸುವ ವಿಧಾನ. ಜೀಪ್ ಚಾಲಕರು ತಮ್ಮ ನೈಪುಣ್ಯವನ್ನು ಹೆಚ್ಚಿಸಿಕೊಳ್ಳಲು ಇದೊಂದು ಅವಕಾಶ. ಕೇರಳ ಹಾಗೂ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ನಡೆದ ಸಂದರ್ಭ, ಎನ್‌ಡಿಆರ್‌ಎಫ್ ತಂಡ ಹೋಗಲು ಅಸಾಧ್ಯವಾದ ಪ್ರದೇಶಗಳಿಗೆ ಆಫ್ ರೋಡ್ ಚಾಲಕರು ತೆರಳಿದ್ದಾರೆ. ಈ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದಾರೆ ಎಂದರು.
ಆಫ್‌ರೋಡ್ ಬಗ್ಗೆ ಮಾತನಾಡಿದ ಸಂಘಟಕ, 21 ಆಫ್‌ರೋಡ್ ಸಂಸ್ಥೆಯ ಸ್ಥಾಪಕ ಅಖಿಲೇಶ್, ಹಿಂದಿನ ರೋಡ್‌ಗಳಿಗಿಂತ ಹೆಚ್ಚು ಕ್ಲಿಷ್ಟವಾದ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಚಾಲಕರು ತಮ್ಮ ಸುರಕ್ಷತೆ ಮತ್ತು ಜಾಗರೂಕತೆಯಿಂದ ಚಾಲನೆ ಮಾಡುವಂತೆ ಮನವಿ ಮಾಡಿಕೊಂಡರು. ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಾಮಿಲ್‌ನ ಕೆ.ಆರ್. ನಾಯಕ್, ಕ್ಯಾಪ್ಟನ್ ದೀಪಕ್, ಫುಡಾ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ಪೃಥ್ವಿ ಪರಿಚಯ ಮಾಡಿದರು. ವಿಶ್ವನಾಥ್ ನಾಯಕ್ ಸ್ವಾಗತಿಸಿ, ನಿಖೀಲ್ ವಂದಿಸಿದರು. ಬಳಿಕ ಜೀಪ್ ಗಳು ಆಫ್ ರೋಡ್ ಕೂಟ ಜರಗಿತು.
ಆತ್ಮವಿಶ್ವಾಸ ಹೆಚ್ಚಿಸುತ್ತದೆ
ಇದು ಸ್ಪೋರ್ಟ್ಸ್ ಅಷ್ಟೇ ಅಲ್ಲ. ಸಾಹಸಮಯ ಕ್ರೀಡೆಯಾಗಿ ಗುರುತಿಸಿಕೊಂಡಿದೆ. ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಇದರಿಂದ ಸಾಧ್ಯ. ಅಪಘಾತ ಮುಕ್ತ ವಾತಾವರಣವನ್ನು ನಿರ್ಮಾಣ ಮಾಡಲು ಇಂತಹ ಸಾಹಸಮಯ ಕ್ರೀಡೆಗಳು ಸಹಕಾರಿ. ಸುರಕ್ಷತಾ ಚಾಲನೆ ದೃಷ್ಟಿಯಿಂದಲೂ ಉಪಕಾರಿ. ವಾಹನಕ್ಕೆ ಹಾನಿಯಾಗದಂತೆ ಚಲಾಯಿಸುವುದು ಇಲ್ಲಿನ ಪ್ರಮುಖ ಉದ್ದೇಶ.
–
ಶರತ್ ಭಂಡಾರಿ,
ನಿವೃತ್ತ ಕರ್ನಲ್