ಪುತ್ತೂರು: ದಿನಕ್ಕೊಂದು ತಿರುವು ಪಡೆಯುತ್ತಿರುವ ಬಿಜೆಪಿ ರಾಜ್ಯಾ ಧ್ಯಕ್ಷರ ತವರು ಪುತ್ತೂರು ಕ್ಷೇತ್ರದಲ್ಲಿ ಹಿಂದೂ ಸಂಘಟನೆಯ ಅರುಣ್ ಕುಮಾರ್ ಪುತ್ತಿಲ ಅವರ ಬಂಡಾಯ ಖಚಿತವಾದಂತಿದೆ.
ಜಿಲ್ಲೆಯ ಆರ್‌ಎಸ್‌ಎಸ್ ನ ಪ್ರಮುಖ ಮುಖಂಡರು ಅರುಣ್ ಕುಮಾರ್ ಅವರ ಮನವೊಲಿಸುವ ಪ್ರಯತ್ನ ನಡೆಸಿದ್ದರು. ಕಳೆದ ಎರಡು ಅವಧಿ
ಯಲ್ಲಿ ತನಗಾದ ನೋವು ತೋಡಿಕೊಂಡಿರುವ ಅರುಣ್, ಹಿಂದುತ್ವವೇ ತನ್ನ ಮೊದಲ ಆಯ್ಕೆಯಾಗಿದ್ದು ಕಾರ್ಯಕರ್ತರ ಅಭಿಪ್ರಾಯದಂತೆ ಮುಂದುವರಿಯುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್ ಸ್ವತಃ ಪಕ್ಷದ ಗೆಲುವಿಗೆ ತಂತ್ರ ರೂಪಿಸುವ ಹೊಣೆಯನ್ನು ವಹಿಸಿಕೊಂಡಿದೆ. ಸಂಘದ ಪಂಚವಟಿ, ಪಕ್ಷದ ಕಚೇರಿಯಲ್ಲಿ ಸಾಲು ಸಾಲು ಸಭೆ ನಡೆಸಿದ್ದು ಪಕ್ಷೇತರ ಸ್ಪರ್ಧೆ, ಜಾತಿ ಅಪವಾದ, ಹೊರ ಕ್ಷೇತ್ರದ ಅಭ್ಯರ್ಥಿ ವಿಚಾರವಾಗಿ ಬಿಜೆಪಿ ಮೇಲಾ ಗುವ ಪರಿಣಾಮಗಳನ್ನು ಎದುರಿಸುವ ಕುರಿತೂ ಗಂಭೀರ ಚರ್ಚೆ ನಡೆದಿದೆ ಎನ್ನಲಾಗಿದೆ.
ಪುತ್ತೂರಿನಲ್ಲಿ ಶುಕ್ರವಾರ ಮಹ ತ್ವದ ಸಭೆ ನಡೆದಿದ್ದು, ಅರುಣ್ ಕುಮಾರ್ ಮುಂದಿನ ನಡೆಯ ಸಾಧಕ-ಬಾಧಕಗಳನ್ನು ಚರ್ಚಿಸಲಾಯಿತು. ಅಂತಿಮವಾಗಿ ಕಾರ್ಯ ಕರ್ತರ ಆಗ್ರಹದಂತೆ ಪಕ್ಷೇತರರಾಗಿ ಸ್ಪರ್ಧಿಸಲು ನಿರ್ಧರಿಸಿದ್ದು ಎ. 17ರಂದು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.