ಪುತ್ತೂರು: ಹಿಂದೂ ಸಂಘಟನೆಯ ಮುಖಂಡ, ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ ಅವರ ಕಚೇರಿ ಎದುರು ಐವರು ತಲವಾರು ಪ್ರದರ್ಶನ ಮಾಡಿದ ಘಟನೆ ನಗರದ ಮುಕ್ರಂಪಾಡಿಯಲ್ಲಿ ನ.10ರ ಶುಕ್ರವಾರ ಹಾಡಹಗಲೇ ನಡೆದಿದೆ.
ಹಿಂದೂ ಜಾಗರಣ ವೇದಿಕೆ ಮುಖಂಡ ದಿನೇಶ್ ಪಂಜಿಗ ನೇತೃತ್ವದ ತಂಡದಿಂದ ತಲವಾರು ದಾಳಿಗೆ ಯತ್ನ ಎಂದು ತಿಳಿದು ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿನ ಹಾಕಿದ ಸಂದೇಶವೇ ಘಟನೆಗೆ ಕಾರಣ ಎನ್ನಲಾಗಿದೆ.
ಪುತ್ತಿಲ ಬೆಂಬಲಿಗ ಮನೀಶ್ ಕುಲಾಲ್ ಎಂಬವರ ಮೇಲೆ ದಾಳಿ ಮಾಡಲು ಯತ್ನಿಸಲಾಗಿದ್ದು ಆದರೆ ಮನೀಷ್ ಈ ವೇಳೆ ಕಚೇರಿಯಲ್ಲಿ ಇರಲಿಲ್ಲ. ದಾಳಿ ಬಗ್ಗೆ ಮಾಹಿತಿ ಪಡೆದ ಮನೀಷ್ ಪೊಲೀಸರಿಗೆ ತಿಳಿಸಿದ್ದರು ಎಂದು ತಿಳಿದು ಬಂದಿದೆ.
ತಲವಾರು ಹಿಡಿದು ದಾಳಿಗೆ ಮುಂದಾದ ದಿನೇಶ್ ಸಹಿತ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.