Advertisement
ಮಹಿಳೆಯ ಸಹೋದರ ಬಂಟ್ವಾಳ ತಾಲೂಕಿನ ವಿಟ್ಲ ಕಸಬಾ ನಿವಾಸಿ ಲೋಕೇಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ನನ್ನ ತಂಗಿ ಆಶಾಲತಾಳನ್ನು 11 ವರ್ಷದ ಹಿಂದೆ ಶ್ರೀಪತಿ ಹೆಬ್ಟಾರ್ ಅವರಿಗೆ ಮದುವೆ ಮಾಡಿಕೊಟ್ಟಿದ್ದು, 2 ವರ್ಷದ ಅನಂತರ ಆಶಾಲತಾಗೆ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದಿದೆ. ಈ ಬಗ್ಗೆ ಗಂಡನ ಮನೆಯವರು ಹಾಗೂ ತಾಯಿ ಮನೆಯವರು ಔಷಧ ಮಾಡಿರುತ್ತಾರೆ.
9 ವರ್ಷಗಳಿಂದಲೂ ಶ್ರೀಪತಿ ಹೆಬ್ಟಾರ್ ಅವರು ನಮ್ಮನ್ನು ಮನೆಗೆ ಬಾರದಂತೆ ಹಾಗೂ ನಮ್ಮೊಂದಿಗೆ ಆಶಾಲತಾ ಮಾತನಾಡದಂತೆ ತಿಳಿಸಿರುವುದರಿಂದ ನನಗೂ, ತಂಗಿಗೂ ಶ್ರೀಪತಿ ಹೆಬ್ಟಾರ್‌ಗೂ ಯಾವುದೇ ಸಂಪರ್ಕವಿರುವುದಿಲ್ಲ.
ಮಾಹಿತಿ ಪಡೆದುಕೊಂಡಿದ್ದೇವೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಂಗಿಯನ್ನು ರಕ್ಷಣೆ ಮಾಡಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿರುವ ವಿಷಯ ಮಾಧ್ಯಮದ ಮೂಲಕ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ನಾನು ಮತ್ತು ಅಣ್ಣ ಚಂದ್ರಶೇಖರ ಪುತ್ತೂರು ಸರಕಾರಿ ಆಸ್ಪತ್ರೆಗೆ ಹೋಗಿ ತಂಗಿಯನ್ನು ನೋಡಿಕೊಂಡು ಅನಂತರ ಮಾಹಿತಿ ಪಡೆದುಕೊಂಡಿದ್ದೇವೆ. ಶ್ರಿಪತಿ ಹೆಬ್ಟಾರ್ ಅವರ ಪತ್ನಿಗೆ ಸರಿಯಾಗಿ ಊಟ ತಿಂಡಿ ನೀಡದೇ ಔಷಧ ಮಾಡದೇ ಅವಳು ಮಾನಸಿಕ ಅಸ್ವಸ್ಥಳಾಗಿರುವುದು ಕಂಡು ಬಂದಿರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೊಠಡಿಯಲ್ಲೇ ಹಾಕುತ್ತೇವೆ
ಶುಕ್ರವಾರ ಪೊಲೀಸರು, ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಅಧಿಕಾರಿಗಳು ಶ್ರೀಪತಿ ಹೆಬ್ಟಾರ್ ಅವರ ಮನೆಗೆ ಭೇಟಿ ನೀಡಿದ್ದು ಆಶಾಲತಾ ಅವರನ್ನು ಮನೆಗೆ ಕರೆದುಕೊಂಡು ಬಂದು ಉಪಚರಿಸುವಂತೆ ಹೇಳಿದ್ದಾರೆ. ಈ ವೇಳೆ ಮನೆ ಮಂದಿಯು ಈ ಹಿಂದೆ ಇದ್ದ ಕೊಠಡಿಯೊಳಗೆ ಆಕೆಯನ್ನು ಹಾಕುತ್ತೇವೆ. ಮನೆಯೊಳಗೆ ಸಾಧ್ಯ ಇಲ್ಲ ಎಂದು ಉತ್ತರಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.