Advertisement

Puttur: ಲಕ್ಕಿ ಡ್ರಾ ನಂಬಿ ಹಣ ಕಳೆದುಕೊಂಡ ಕೂಲಿ ಕಾರ್ಮಿಕ

07:14 PM Nov 07, 2024 | Team Udayavani |

ಪುತ್ತೂರು: ಲಕ್ಕಿ ಡ್ರಾ ಎಂಬ ಮಾತು ನಂಬಿ ಪುಣಚದ ಕೂಲಿ ಕಾರ್ಮಿಕರೋರ್ವರು ಹಣ ಕಳೆದುಕೊಂಡ ಘಟನೆ ನಡೆದಿದೆ.

Advertisement

ನಿಮ್ಮ ಮೊಬೈಲ್‌ ನಂಬರ್‌ ಲಕ್ಕಿ ಡ್ರಾದಲ್ಲಿ ಆಯ್ಕೆಯಾಗಿದ್ದು, ನಿಮಗೆ ಮೊಬೈಲ್‌ ಬಹುಮಾನ ಇದೆ. ವಿಳಾಸ ಕಳುಹಿಸಿದರೆ ಮೊಬೈಲ್‌ ತಲುಪಿಸುತ್ತೇವೆ ಎಂದು ಅಪರಿಚಿತ ವ್ಯಕ್ತಿಯೋರ್ವ ದೂರವಾಣಿ ಮೂಲಕ ತಿಳಿಸಿದ್ದ. ಇದಕ್ಕೆ ಕೂಲಿ ಕಾರ್ಮಿಕ ನನಗೆ ಮೊಬೈಲ್‌ ಬೇಡ ಎಂದು ಹೇಳಿ ಕರೆ ಕಟ್‌ ಮಾಡಿದ್ದರು. ಇದಾದ ಬಳಿಕ ಮತ್ತೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ಕೂಲಿ ಕಾರ್ಮಿಕರನ್ನು ನಂಬಿಸುವಲ್ಲಿ ಯಶಸ್ವಿಯಾಗಿದ್ದ.

ಮರುದಿನ ಕರೆ ಮಾಡಿದ ಆತ ನೀವು ಹೇಳಿದ ವಿಳಾಸಕ್ಕೆ ಮೊಬೈಲ್‌ ಕಳುಹಿಸಿದ್ದು, ಅಂಚೆಯಿಂದ ನೀವು ಪಡೆದುಕೊಳ್ಳಬೇಕಾದರೆ 1,600 ರೂ. ಪಾವತಿಸುವಂತೆ ಆತ ಹೇಳಿದ್ದ. ಅದರಂತೆ ಹಣ ಪಾವತಿಸಿ ಪಾರ್ಸೆಲ್‌ ಪಡೆದುಕೊಂಡಾಗ ಅದರಲ್ಲಿ ಹಾಳಾದ ಮೊಬೈಲ್‌ವೊಂದರ ಬಿಡಿಭಾಗ ಮಾತ್ರ ಇತ್ತು. ಅನಂತರ ಅವರಿಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next