ಪುತ್ತೂರು: ಉದ್ಯೋಗ ಖಾತ್ರಿ ಯೋಜನೆ ಯಡಿ ಜೇಸಿಬಿ ಮೂಲಕ ಕೆಲಸ ಮಾಡಿಸಿದ ಪ್ರಕರಣ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಅಡಿಕೆ ಮರಗಳನ್ನು ನಡೆಲು ಗುಂಡಿ ತೋಡುವುದಕ್ಕೂ ಯಂತ್ರಗಳನ್ನು ಬಳಸಿದ ಪ್ರಸಂಗಗಳು ನಡೆದಿವೆ. ಈ ಸಂಬಂಧ ಎರಡು ದೂರುಗಳು ತಾಲೂಕು ಪಂಚಾಯತ್‌ಗೆ ಬಂದಿದ್ದು, ಗಂಭೀರವಾಗಿ ಪರಿಗಣಿಸಲಾಗಿದೆ.ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯ ಸಣ್ಣ-ಪುಟ್ಟ ಅವಕಾಶ ಸಿಕ್ಕರೂ. ಯಂತ್ರಗಳನ್ನು ಬಳ ಸಲಾಗುತ್ತದೆ ಎಂಬ ಆರೋಪ ಹಿಂದಿನಿಂದಲೂ ಕೇಳಿಬಂದಿತ್ತು. ರಾಜ್ಯದ ಕೆಲವೆಡೆ ಹಲವು ಪ್ರಕರಣ ಗಳೂ ನಡೆದಿದ್ದವು. ಈಗ ಅಂಥ ಪ್ರಕರಣಗಳು ಪುತ್ತೂರು ತಾಲೂಕಿನಲ್ಲೂ ನಡೆದಿವೆ.
Advertisement
ದೂರುಗಳ ಹಿನ್ನೆಲೆಯಲ್ಲಿ ತಾಲೂಕು ಪಂಚಾ ಯಿತ್ ಎಲ್ಲ ಗ್ರಾಮ ಪಂಚಾಯಿತಿ ಪಿಡಿಒಗಳ ಸಭೆ ಕರೆದು ಕಟ್ಟು ನಿಟ್ಟಿನ ಸೂಚನೆ ನೀಡಿದೆ. ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಪಡೆದವರ ಹೆಸ ರನ್ನು ದಾಖಲಿಸಿ, ಜೇಸಿಬಿ, ಹಿಟಾಚಿ ಯಂತ್ರದಲ್ಲಿ ಕೆಲಸ ಮಾಡಿಸುವಂತಿಲ್ಲ.
Related Articles
Advertisement
ಉಲ್ಲಂಘನೆ ಹೇಗೆ?ಓರ್ವ ವ್ಯಕ್ತಿಯ ಹೆಸರಿನಲ್ಲಿ 20 ಸಾವಿರ ರೂ.ಗಳ ಕೆಲಸ ಮಾಡಿದ್ದರೆ, ಆ ಹಣ ನೇರವಾಗಿ ಆತನ ಖಾತೆಗೆ ಜಮೆ ಆಗುತ್ತದೆ. ಆದರೆ, ಜಾಬ್ ಕಾರ್ಡ್ ಹೊಂದಿರುವ ಖಾತಾದಾರನ ಒಪ್ಪಿಗೆ ಇಲ್ಲದೇ, ಯಂತ್ರದ ಮೂಲಕ ಮಾಡಿಸಿದ ಕೆಲಸದ ಹಣ ವನ್ನು ಖಾತೆಗೆ ಸ್ವೀಕರಿಸಲ ಸಾಧ್ಯವಿಲ್ಲ. ಕಾರಣ ಕೆಲಸ ಮಾಡಿದ ದಿನದ ಹಾಜರಾತಿಯನ್ನು ಆಯಾ ವ್ಯಕ್ತಿಯೇ ದಾಖಲಿಸಬೇಕು. ಆದ್ದರಿಂದ ನಿರ್ದಿಷ್ಟ ವ್ಯಕ್ತಿಗಳ ಹೆಸರನ್ನು ಬಳಸಿ, ಅವರ ಹಾಜರಾತಿ ತೋರಿಸಿ ಯಂತ್ರದಲ್ಲಿ ಕೆಲಸ ಮಾಡಿಸಲಾಗುತ್ತಿದೆ ಎನ್ನಲಾಗಿದೆ. ಕಾಮಗಾರಿ ನಡೆಯುತ್ತಿರುವ ವೇಳೆ ಆಯಾ ಗ್ರಾ.ಪಂ. ಕಾರ್ಯದರ್ಶಿ ಅಥವಾ ಪಿಡಿಒ ಸ್ಥಳಕ್ಕೆ ತೆರಳಿ ಪರಿಶೀಲಿಸಬೇಕು. ಕಾಮಗಾರಿಯ ಫೋಟೋ ದಾಖಲೆ, ಜಿಪಿಎಸ್ ದಾಖಲೆ ನೀಡಲೇಬೇಕು. ಹೀಗಿದ್ದರೂ. ಉಲ್ಲಂಘನೆ ಆಗಿದೆ. ಗ್ರಾ.ಪಂ. ಸಿಬಂದಿ ಜತೆ ಹೊಂದಾಣಿಕೆ ಮಾಡಿಕೊಂಡು, ಇಂತಹ ಕಾರ್ಯಕ್ಕೆ ಕೈ ಹಾಕಲಾಗಿದೆ ಎಂಬುದು ಆರೋಪ. ಕೆಲವೆಡೆ ಜೇಸಿಬಿ ಬಳಸಲಾಗಿದೆ
ಅಡಕೆ ಗಿಡಗಳಿಗೆ ಗುಂಡಿ ತೋಡಲೂ ಮಾನವ ಶ್ರಮವನ್ನೇ ಬಳಸಿಕೊಳ್ಳಬೇಕು. ಆದರೆ ಕೆಲವು ಕಡೆ ಜೆಸಿಬಿ ಬಳಸಿದ ಉದಾಹರಣೆ ಇದೆ. ಇಂತಹ ಪ್ರಕರಣಗಳು ಪುತ್ತೂರು ತಾಲೂಕಿನಲ್ಲಿ ಪತ್ತೆ ಹಚ್ಚಿದ್ದು, ಅವುಗಳಿಗೆ ಹಣ ಬಿಡುಗಡೆ ಮಾಡಿಲ್ಲ. ಒಟ್ಟಿನಲ್ಲಿ ಇದು ನಿರುದ್ಯೋಗಿಗಳಿಗೆ ಕೆಲಸ ನೀಡಬೇಕೆಂಬ ಆಶಯದಲ್ಲಿ ಯೋಜನೆ ಜಾರಿಗೊಳಿಸಲಾಗಿದೆ.
– ಜಗದೀಶ್ ಎಸ್. ಇಒ,
ಪುತ್ತೂರು ತಾ.ಪಂ.