ಮೈಸೂರು: ಅತ್ಯಂತ ಸರಳ, ಸುಂದರ ಭಾಷೆಯಾದ ಸಂಸ್ಕೃತವು ವಿಶ್ವ ಭಾಷೆಯಾಗಿದೆ ಎಂದು ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ನುಡಿದರು.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಯವರ 80ನೇ ಜನ್ಮದಿನೋತ್ಸವದ ಏಳನೇ ದಿನದ ಕಾರ್ಯಕ್ರಮದಲ್ಲಿ ಶನಿವಾರ ಪಾಲ್ಗೊಂಡು ಅವರು ಮಾತನಾಡಿದರು.
ಸಂಸ್ಕೃತವು ಎಲ್ಲ ಭಾಷೆಗಳಿಗೂ ಮೂಲ. ಇದು ತಾಯಿ ಭಾಷೆ. ಅತ್ಯಂತ ಸರಳವಾಗಿದ್ದು, ಕಲಿಯುವುದು ಸುಲಭ ಎಂದರು.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ವಿಶ್ವ ಸ್ವಾಮೀಜಿಯಾಗಿದ್ದಾರೆ. ಶ್ರೀಗಳು ಆಧ್ಯಾತ್ಮಿಕ ಜೀವನವನ್ನು ಅಳವಡಿಸಿಕೊಂಡಿದ್ದಾರೆ. ಅದನ್ನೇ ಉಸಿರಾಗಿಸಿಕೊಂಡು ಸಾರ್ಥಕತೆ ಪಡೆದಿದ್ದಾರೆ. ಆಧ್ಯಾತ್ಮ ಒಂದು ಶ್ರೇಷ್ಠ ವಿದ್ಯೆಯಾಗಿದೆ. ಹಾಗೆಯೇ ಶ್ರೀಗಳ ಜೀವನವೂ ಶ್ರೇಷ್ಠ ವಾದುದು. ಅವರು ಗೀತೆಯನ್ನು ಪ್ರಚಾರ ಮಾಡುತ್ತಿದ್ದಾರೆ. ಇದು ಅತ್ಯಂತ ಶ್ರೇಷ್ಠ ಎಂದು ಶ್ರೀ ಸುಗುಣೇಂದ್ರ ತೀರ್ಥರು ನುಡಿದರು.
ತಮ್ಮ ನಾಲ್ಕನೆಯ ಪರ್ಯಾಯ ಹಾಗೂ ಕೋಟಿ ಗೀತಾ ಯಜ್ಞ ಕಾರ್ಯಕ್ರಮಕ್ಕೆ ಗಣಪತಿ ಶ್ರೀ ಗಳನ್ನು ಪುತ್ತಿಗೆ ಶ್ರೀಗಳು ಆಹ್ವಾನಿಸಿದರು. ಅವಧೂತ ದತ್ತ ಪೀಠದ ಕಿರಿಯ ಶ್ರೀ ಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.