Advertisement

ಶ್ರೀ ಕೃಷ್ಣ ಶರ್ಮ ಅವರ ವಿನೂತನ ಪ್ರಯತ್ನ ಪುಟ್ಟಣ್ಣ

03:26 PM Jul 09, 2020 | sudhir |

“ಪುಟ್ಟಣ್ಣ”; ಪ್ರಯೋಗಾತ್ಮಕ ಮತ್ತು ಅಸಂಗತ ವಿಷಯವನ್ನು ಆದರಿಸಿ ನಿರ್ಮಿಸಲ್ಪಟ್ಟ ಚಿತ್ರ. ಇನ್ನೊಂದು ಆಯಾಮದಲ್ಲಿ ಹೇಳುವುದಾದರೆ “ಕಂಡದ್ದು ಸತ್ಯ”, ಎನ್ನುವ ತರ್ಕದ ಮೇಲೆ ನಿಂತಿರುವ ಕಿರು ಚಿತ್ರವು ಹೌದು.

Advertisement

ಈ ಕಿರು ಚಲನಚಿತ್ರದ ನಿರ್ಮಾಣ ಹಾಗು ನಿರ್ದೇಶನವನ್ನು ಶ್ರೀಕೃಷ್ಣ ಶರ್ಮಾ ಅವರು ಮಾಡಿದ್ದಾರೆ; ಇವರು “ಒಂದಲ್ಲ ಎರಡಲ್ಲ” ಹಾಗೂ “ಬಡವ ರಾಸ್ಕಲ್” ಚಲಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಹಾಗೂ ನಟನಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಇನ್ನು ಅಭಿನಯಕ್ಕೆ ಬರುವುದಾದರೆ; ತುಳು ಚಲಚಿತ್ರಗಳಾದ “ಎನ್ನಾ”, “ರಂಬಾರೊಟ್ಟಿ” ಮತ್ತು ಕನ್ನಡ ಚಿತ್ರಗಳಾದ “ಒಂದು ಮೊಟ್ಟೆಯ ಕಥೆ” , “ಬೀರ್ ಬಲ್” ಮುಂತಾದ ಉತ್ತಮ ಚಲನಚಿತ್ರಗಳಲ್ಲಿ ಅತ್ಯತ್ತಮ ರೀತಿಯಲ್ಲಿ ಅಭಿನಯಿಸಿದ
ವಿ ಜೆ ವಿನೀತ್ ಅವರು ಈ ಚಿತ್ರದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿರುವುದು ಈ ಕಿರುಚಿತ್ರದ ಮತ್ತೊಂದು ವಿಶೇಷ.

ಈ ಕಿರುಚಿತ್ರದ ಆಡಿಯೋ ಹಕ್ಕನ್ನು ಕನ್ನಡದ ಪ್ರಖ್ಯಾತ ಆಡಿಯೋ ಕಂಪೆನಿ “ಆನಂದ್ ಆಡಿಯೋಸ್” ನವರು ಈಗಾಗಲೇ ಖರೀದಿಸಿದ್ದು, ಇದರ ರಿಮೇಕ್ ಹಕ್ಕನ್ನು ಕೊಳ್ಳಲು ಮಲಯಾಳಂ ನ ಕೆಲ ಚಿತ್ರ ನಿರ್ದೇಶಕರು ಕೊಂಡುಕೊಳ್ಳಲು ಕಾತರರಾಗಿರುವುದು ಈ ಕಿರುಚಿತ್ರದ ಇನ್ನೊಂದು ವಿಶೇಷ. ಹಾಗೂ ಈ ಚಿತ್ರದ ಮುಂದುವರಿದ ಭಾಗದೊಂದಿಗೆ ಮಳೆಯಾಳಂ ನಲ್ಲಿ ಬರುವ ಸಾಧ್ಯತೆ ಇದೆ.

Advertisement

ಇನ್ನು ಹಲವಾರು ತುಳು ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಕಿಶೋರ್ ಶೆಟ್ಟಿ ಯವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ ಮತ್ತು ಎಡಿಟಿಂಗ್ ಕಾರ್ಯವನ್ನು ಅನ್ನು ನವೀನ್ ಶೆಟ್ಟಿ ಯವರು ನಿರ್ವಹಿಸಿದ್ದಾರೆ. ಇಷ್ಟೇ ಅಲ್ಲದೆ ” ವಿ.ಎಫ್.ಏಕ್ಸ್ ” ನಲ್ಲಿ ವಿಜೇತ್ ಕುಮಾರ್ ಮತ್ತು ಸೌಂಡ್ ಎಫೆಕ್ಟ್ ಹಾಗು ಮಿಕ್ಸಿಂಗ್ ನಲ್ಲಿ ಸುಹಿತ್ ಬಂಗೇರ ಹಾಗು ಡ್ಯಾನಿಯಲ್ ಕಾರ್ಯ ನಿರ್ವಹಿಸಿದ್ದಾರೆ. ಇನ್ನು ಪೋಸ್ಟರ್ ಡಿಸೈನಿಂಗ್ ಅನ್ನು GOD company ಅವರು ಮಾಡಿದ್ದಾರೆ.

ಇನ್ನು ಚಿತ್ರದ ಕಥೆ ಹಾಗು ಸಂಭಾಷಣೆಯನ್ನು; ರಂಗಾಯಣದಲ್ಲಿ ನಾಟಕ ಕಲೆ ವಿಷಯದಲ್ಲಿ ಪದವಿ ಪಡೆದಿರುವ ಹಾಗು ಪ್ರಸ್ತತ ಪ್ರಯೋಗಾತ್ಮಕ ಬರಹದಲ್ಲಿ ತೊಡಗಿಸಿಕೊಂಡಿರುವ ಉದಯಪ್ರಸಾದ್.ಎನ್.ಜೆ ಅವರು ಬರೆದಿದ್ದಾರೆ.

ಇನ್ನು ನಟನೆಯ ವಿಭಾಗದಲ್ಲಿ ವಿ.ಜೆ ವಿನೀತ್ ಅವರೊಂದಿಗೆ “ಸಾ.ಹಿ.ಪ್ರಾ.ಕಾಸರಗೋಡು”, “ಒಂದು ಮೊಟ್ಟೆಯ ಕಥೆ” ಮೊದಲಾದ ಚಲನ ಚಿತ್ರಗಳಲ್ಲಿ ಅಭಿನಯಿಸಿರುವ ” ವಿಶ್ವನಾಥ್ ಅಸೈಗೊಳಿ” ಅವರು ಸಹ ಈ ಕಿರುಚಿತ್ರದಲ್ಲಿ ತಮ್ಮ ಪಾತ್ರ ನಿರ್ವಹಿಸಿದ್ದಾರೆ. ಇನ್ನುಳಿದಂತೆ ಉದಯಪ್ರಸಾದ್, ಆತ್ಮಿಕ್ ಕೃಷ್ಣ, ಶಶಿಪ್ರಭ, ವಿವೇಕಾನಂದ ಅವರುಗಳು ಸಹ ತಮ್ಮ ಪಾತ್ರವನ್ನು ಉತ್ತಮ ರೀತಿಯಿಂದ ನಿರ್ವಹಿಸಿದ್ದಾರೆ.

ಇನ್ನುಳಿದಂತೆ ಛಾಯಾಗ್ರಹಣ ವಿಭಾಗದಲ್ಲಿ ಮನು ಹೊಳ್ಳ, ವರುಣ್ ಕೃಷ್ಣ, ಪವನ್ ಭಟ್ ಹಾಗು ಧೀರಜ್ ಇವರುಗಳು ಸಹ ಉತ್ತಮ ರೀತಿಯಿಂದ ಕಾರ್ಯನಿರ್ವಹಿಸಿದ್ದಾರೆ.

ಒಟ್ಟಿನಲ್ಲಿ ಹೇಳುವುದಾದರೆ “ಪುಟ್ಟಣ್ಣ” ಈ ಒಂದು ಅದ್ಬುತ ತಂಡದಿಂದ ಮೂಡಿ ಬಂದ ಒಂದು ವಿಶಿಷ್ಟ ಚಿತ್ರ. ಈ ಕಿರುಚಿತ್ರ ನೋಡುಗರನ್ನು ರಂಜಿಸಲು ಶೀಘ್ರವಾಗಿ ಎಲ್ಲರ ಮುಂದೆ ಬರಲಿದೆ. ಈಗಾಗಲೇ ಇದರ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು, ಕನ್ನಡ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕರಾದ ವಾಸುಕಿ ವೈಭವ್ ‘ರವರು ಬಿಡುಗಡೆಗೊಳಿಸಿದರು . ಶೀಘ್ರದಲ್ಲೇ ಬಿಡುಗಡೆ ದಿನಾಂಕ ಶೀಘ್ರದಲ್ಲೇ ಪ್ರಕಟ ಗೊಳ್ಳಲಿದೆ .

Advertisement

Udayavani is now on Telegram. Click here to join our channel and stay updated with the latest news.

Next