Advertisement

ನಟನೆಯಲ್ಲಿ ಪರಿಪೂರ್ಣತೆ ಸಿಗುವವರೆಗೂ ಪುಟ್ಟಣ್ಣ ಬಿಡುತ್ತಿರಲಿಲ್ಲ

12:44 PM Dec 02, 2020 | Suhan S |

ಮೈಸೂರು: ಕನ್ನಡ ಚಲನಚಿತ್ರ ರಂಗಕ್ಕೆ ಪುಟ್ಟಣ್ಣ ಕಣಗಾಲ್‌ ಕೊಡುಗೆ ಅಪಾರವಾಗಿದ್ದು, ಅವರಿಂದಾಗಿ ಎಷ್ಟೋ ನಟರು ಅತ್ಯುತ್ತಮವಾಗಿ ನಟನೆ ಕಲಿತು ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್‌.ವಿ.ರಾಜೀವ್‌ ತಿಳಿಸಿದರು.

Advertisement

ನಗರದ ಚಾಮುಂಡಿಪುರಂನಲ್ಲಿರುವ ಅಪೂರ್ವ ಸಭಾಂಗಣದಲ್ಲಿ ಪರಿವರ್ತನಂ ಟ್ರಸ್ಟ್‌ ವತಿಯಿಂದ ಕನ್ನಡ ಚಿತ್ರರಂಗದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಿತ್ರ ನಿರ್ದೇಶಕ ಎಸ್‌.ಆರ್‌. ಪುಟ್ಟಣ್ಣ ಕಣಗಾಲ್‌ ಅವರ 87ನೇ ಜನ್ಮದಿನೋತ್ಸವದ ಅಂಗವಾಗಿ ನಡೆದ “ಪುಟ್ಟಣ್ಣ ನೆನಪಿನಂಗಳ’ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪುಟ್ಟಣ್ಣನವರು ತಮ್ಮ ಚಿತ್ರಗಳ ಪಾತ್ರಗಳಲ್ಲಿ, ನಟನೆಯಲ್ಲಿ ಪರಿಪೂರ್ಣತೆ ಸಿಗುವವರೆಗೂ ಬಿಡುತ್ತಿರಲಿಲ್ಲ. ಕಲಾವಿದರು ಭಯದ ವಾತವರಣದಲ್ಲೇ ನಟಿಸುತ್ತಿದ್ದರು. ಅಷ್ಟು ಶಿಸ್ತಿನಿಂದ ನಟನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ಕಾರಣ ಇಂದಿಗೆ ವಿಷ್ಣುವರ್ಧನ್‌, ಅಂಬರೀಶ್‌, ಶ್ರೀನಾಥ್‌ರಂತಹ ನಟರು ಅತ್ಯುತ್ತಮ ನಟರೆನಿಸಿಕೊಂಡಿದ್ದಾರೆ ಎಂದು ಹೇಳಿದರು.

ಸಂದೇಶ: ಪುಟ್ಟಣ್ಣನವರ ಚಿತ್ರವು ಸಮಾಜಕ್ಕೆ ಸಂದೇಶ ಕೊಡುವಂತಿರುತ್ತಿತ್ತು. ಜೊತೆಗೆ ಕುಟುಂಬ ಪ್ರಧಾನವಾಗಿದ್ದವು. ಇಡೀ ಕುಟುಂಬ ಒಟ್ಟಿಗೆ ಕುಳಿತು ಅವರ ಚಿತ್ರಗಳನ್ನು ನೋಡಬಹುದಿತ್ತು. ಅವರು ಸೃಷ್ಟಿಸಿದ ಚಾಮಯ್ಯ ಮೇಷ್ಟ್ರು ಅಶ್ವಥ್‌ ಅವರ ಪಾತ್ರ ಇವತ್ತಿಗೂ ಸಂಸ್ಕಾರದ ಸಂದೇಶವನ್ನುತೋರಿಸುತ್ತದೆ. ಇದು ಅವರ ಪಾತ್ರಗಳಿಗಿರುವ ಶಕ್ತಿ ಎಂದುಕೊಂಡಾಡಿದರು.

ಜನಮನ್ನಣೆ: ದೇವರಾಜು ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷ ಕೌಟಿಲ್ಯ ಆರ್‌.ರಘು ಮಾತನಾಡಿ, ಪೌರಾಣಿಕ ಮತ್ತು ಧಾರ್ಮಿಕ ಕತೆಗಳ ಆಧಾರಿತ ಚಿತ್ರಗಳನ್ನ ನೋಡುತ್ತಿದ್ದ ಪ್ರೇಕ್ಷಕರನ್ನು ಸಾಮಾಜಿಕ ಚಿತ್ರಮಂದಿರಗಳ ಬಳಿ ಸಾಲುಗಟ್ಟಿ ಟಿಕೆಟ್‌ ಪಡೆಯಲು ನಿಲ್ಲುವಂತೆ ಮಾಡಿದವರೇ ಪುಟ್ಟಣ್ಣ ಕಣಗಾಲ್. ಅಂದು ಬಿ.ಆರ್‌.ಪಂತಲು ಅವರ ಬಳಿ ಮೆಕ್ಯಾನಿಕ್‌ ಕಮ್‌ ಡೈರೆಕ್ಟರ್‌ ಆಗಿ ಕೆಲಸಕ್ಕೆ ಸೇರಿ ಅತ್ಯುತ್ತಮ ಚಿತ್ರನಿರ್ದೇಶಕರಾಗಿ ಬೆಳೆದು ನಿಂತರು.

Advertisement

ಕಣಗಾಲ್‌ ಪ್ರಭಾಕರ್‌ ಶಾಸ್ತ್ರೀ ಮತ್ತು ಪುಟ್ಟಣ್ಣ ಕಣಗಾಲ್‌ ಎಂದರೆ ಡಾ.ರಾಜಕುಮರ್‌ರವರಿಗೆ ಎಲ್ಲಿ ಲ್ಲದ ಪ್ರೀತಿ. ಅವರ ಗರಡಿಯಲ್ಲಿ ಬೆಳೆದ ಅನೇಕರು ಜನಮನ್ನಣೆ ಗಳಿಸಿದರು ಎಂದು ಸ್ಮರಿಸಿದರು.

ಇದೇ ವೇಳೆ ಪುಟ್ಟಣ್ಣ ಕಣಗಾಲ್‌ ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ನಗರಪಾಲಿಕೆ ಸದಸ್ಯ ಮಾ.ವಿ.ರಾಮ ಪ್ರಸಾದ್‌,ಯುವಮುಖಂಡ ಎನ್‌.ಎಂ.ನವೀನ್‌ ಕುಮಾರ್‌, ಮುಡಾ ಸದಸ್ಯೆ ಲಕ್ಷ್ಮೀದೇವಿ, ಕೆಎಂಪಿಕೆ ಚಾರಿಟಬಲ್‌ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್‌, ಪರಿವರ್ತನಂ ಟ್ರಸ್ಟ್ ಅಧ್ಯಕ್ಷ ವಿನಯ್‌ ಕಣಗಾಲ್, ಅಜಯ್‌ ಶಾಸ್ತ್ರೀ , ಅಪೂರ್ವ ಸುರೇಶ್‌, ಕಡಕೊಳ ಜಗದೀಶ್‌, ಗಿರೀಶ್‌, ರಾಕೇಶ್‌ ಕುಂಚಿಟಿಗ, ಎಸ್‌.ಎನ್‌ ರಾಜೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next