Advertisement
ತಾಲೂಕಿನ ಆಲೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹಯೋಗದೊಂದಿಗೆ ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್ ಆಯೋಜಿಸಿದ್ದ ನಟ, ನಿರ್ದೇಶಕ, ನಾಟಕಕಾರ ಡಾ. ಗಿರೀಶ್ ಕಾರ್ನಾಡ್ ಮತ್ತು ಗೊರವರ ಕುಣಿತ ಕಲಾವಿದ ಪುಟ್ಟಮಲ್ಲೇಗೌಡರಿಗೆ ರಂಗನಮನ ಕಾರ್ಯಕ್ರಮದಲ್ಲಿ ಡಾ.ಗಿರೀಶ್ ಕಾರ್ನಾಡ್, ಪುಟ್ಟಮಲ್ಲೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
Related Articles
Advertisement
ಪುಸ್ತಕಗಳನ್ನು ಸ್ನೇಹಿತರಾಗಿಸಿಕೊಳ್ಳಿ: ಸಾಹಿತಿ ಹಾಗೂ ಪ್ರಾಂಶುಪಾಲ ಮಂಜು ಕೋಡಿಉಗನೆ ಮಾತನಾಡಿ, ಬೆಳಕು ಇಲ್ಲದ ದಾರಿಯಲ್ಲಿ ನಡೆಯಬಹುದು. ಆದರೆ ಕನಸೇ ಇಲ್ಲದ ಬದುಕನ್ನು ನಾನು ಸಾಗಿಸುವುದು ಹೇಗೆ ಎಂಬ ಡಾ.ಗಿರೀಶ್ ಕಾರ್ನಾಡ್ ಅವರ ನಾಟಕದ ಸಾಲಿನಂತೆ ಕಾರ್ನಾಡರು ತಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ಹಾಗೂ ಸಾಹಿತ್ಯವನ್ನು ಲೋಕಕ್ಕೆ ಸರ್ಮಪಿಸಿದ್ದಾರೆ.
ವಿದ್ಯಾರ್ಥಿಗಳು ಪುಸ್ತಕವನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಕು. ನಮ್ಮೂರಿನ ಕಲಾವಿದ ಪುಟ್ಟಮಲ್ಲೇಗೌಡರು ಮತ್ತು ನಾಟಕಕಾರ ಕಾರ್ನಾಡ್‌ರಂತಹ ಚೇತನಗಳನ್ನು ಪ್ರೇರಣೆಯಾಗಿಟ್ಟುಕೊಂಡು ತಮ್ಮ ಗುರಿಗಳನ್ನು ಸಾಧಿಸಬೇಕು ಎಂದು ತಿಳಿಸಿದರು.
ರಂಗ ಗೀತೆಗಳ ಗಾಯನ: ಆತ್ಮೀಯ ರಂಗ ಪ್ರಯೋಗಾಲಯ ಕಲಾವಿದರು ಕಾರ್ನಾಡರ ತುಘಲಕ್ ನಾಟಕದ ದೃಶ್ಯವೊಂದರ ವಾಚನಾಭಿನಯ ಹಾಗೂ ಹಯವದನ ನಾಟಕದ ರಂಗಗೀತೆಗಳ ಗಾಯನವನ್ನು ನಡೆಸಿಕೊಟ್ಟರು.
ಟ್ರಸ್ಟ್ ಅಧ್ಯಕ್ಷ ಎಸ್.ಕೆ.ಕಿರಣ್‌ಕುಮಾರ್ ಗಿರ್ಗಿ, ಕಾರ್ಯದರ್ಶಿ ಶಿವುಕುಮಾರ್ ಜನ್ನೂರು ಹೊಸೂರು, ಶಿವಶಂಕರ್ ಚಟ್ಟು, ಜೇಮ್ಸ್ ದೇಶ್ವಳ್ಳಿ, ನವೀನ್ ಉಡಿಗಾಲ, ಮೂರ್ತಿಕೆಂಗಾಕಿ, ಆಲೂರು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಬಳಗ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು, ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.