Advertisement

ದಾಖಲೆ ಮತದೊಂದಿಗೆ ಪುಟಿನ್‌ ನಾಲ್ಕನೇ ಬಾರಿಗೆ ರಷ್ಯ ಅಧ್ಯಕ್ಷ

12:39 PM Mar 19, 2018 | Team Udayavani |

ಮಾಸ್ಕೋ : ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ನಿರಂತರ ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದು ಮುಂದಿನ ಆರು ವರ್ಷಗಳ ಕಾಲ ಅವರು ರಶ್ಯದ ಅಧ್ಯಕ್ಷರಾಗಿರುತ್ತಾರೆ. 

Advertisement

ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ಶೇ.76.67 ಮತಗಳನ್ನು  ಪಡೆದು ಪ್ರಚಂಡ ವಿಜಯ ಸಾಧಿಸಿರುವ ಪುಟಿನ್‌, ಅನಿರ್ದಿಷ್ಟಾವಧಿಗೆ ದೇಶದ ಅಧ್ಯಕ್ಷರಾಗಿ ಅಧಿಕಾರದಲ್ಲಿ ಉಳಿಯುವ ಸಾಧ್ಯತೆಗಳನ್ನು ಅಲ್ಲಗಳೆದಿದ್ದಾರೆ. ಪುಟಿನ್‌ ಕಳೆದ ಎರಡು ದಶಕಗಳಿಂದ ರಷ್ಯಾದ ಅಧ್ಯಕ್ಷರಾಗಿದ್ದಾರೆ. 

ಈ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿರುವುದಾಗಿ ವಿರೋಧ ಪಕ್ಷಗಳು ದೂರಿವೆ.ಆದರೆ ಈ ಚುನಾವಣೆಗೆ ಹೆಚ್ಚಿನ ಸಿಂಧುತ್ವ ದೊರಕಿಸಿ ಪುಟಿನ್‌ ಅವರು ನಾಲ್ಕನೇ ಬಾರಿಗೆ ದೇಶದ ಅಧ್ಯಕ್ಷರಾಗುವಂತೆ ಮಾಡುವಲ್ಲಿ ಗರಿಷ್ಠ ಸಂಖ್ಯೆಯ ಮತದಾರರು ಮತದಾನಕ್ಕೆ ಬರವಂತೆ ಮಾಡಲಾಗಿತ್ತು ಎನ್ನಲಾಗಿದೆ. 

ಇಂದಿನ ವಿಜಯದೊಂದಿಗೆ ಪುಟಿನ್‌ 2014ರ ವರೆಗೂ ದೇಶದ ಅಧ್ಯಕ್ಷರಾಗಿರುತ್ತಾರೆ. ಸ್ಟಾಲಿನ್‌ ಬಳಿಕದಲ್ಲಿ ಪುಟಿನ್‌ ದೇಶದ ದೀರ್ಘಾವಧಿ ಅಧ್ಯಕ್ಷರೆನಿಸಕೊಂಡಿದ್ದಾರೆ. ಆದರೆ ತಾನು ಜೀವಮಾನದ ಅಧ್ಯಕ್ಷರಾಗಿ ಮುಂದುವರಿಯಲು ಬಯಸುವುದಿಲ್ಲ ಎಂದು ಪುಟಿನ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next