Advertisement
ಪುತಿನ್ ಬಳಿ ದೊಡ್ಡ ಸಂಖ್ಯೆಯ ಸೇನಾ ಪಡೆಯಿದೆ. ಹೀಗಾಗಿ ಅವರೇ ಜಯ ಸಾಧಿಸುವ ಸಾಧ್ಯತೆಯಿದೆ. ರಾಜಕೀಯ ವಾಗಿಯೂ ರಷ್ಯಾ ಅಧ್ಯಕ್ಷರು ತಪ್ಪೆಸಗಿದ್ದಾರೆ ಎಂದರು. ಪುತಿನ್ ಗೆದ್ದರೂ, ಉಕ್ರೇನಿಗರ ಕೆಚ್ಚನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಮುಂದಿನ ವಾರ ಉಕ್ರೇನ್‌ನ ಕೀವ್‌ನಲ್ಲಿ ಬ್ರಿಟನ್‌ನ ರಾಯಭಾರ ಕಚೇರಿಯನ್ನು ಮತ್ತೆ ತೆರೆಯಲಾಗುತ್ತದೆ ಎಂದರು.
Related Articles
ಗುರುವಾರ ಗುಜರಾತ್‌ಗೆ ಬಂದಿಳಿಯುತ್ತಿದ್ದಂತೆ ಸಿಕ್ಕ ಅದ್ದೂರಿ ಸ್ವಾಗತಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಫಿದಾ ಆಗಿದ್ದಾರೆ. “ನನ್ನನ್ನು ಅಷ್ಟೊಂದು ಪ್ರೀತಿಯಿಂದ ಸ್ವಾಗತಿಸಿದ್ದು ನೋಡಿ, ನಾನೇ ಸಚಿನ್ ತೆಂಡೂಲ್ಕರ್, ನಾನೇ ಅಮಿತಾಭ್ ಬಚ್ಚನ್ ಎಂಬ ಭಾವನೆ ಬಂತು’ ಎಂದಿದ್ದಾರೆ ಬೋರಿಸ್. “ಅದ್ದೂರಿ ಸ್ವಾಗತ ನೀಡಿದ ಪ್ರಧಾನಿ ಮೋದಿ ಹಾಗೂ ಭಾರತೀಯರಿಗೆ ಧನ್ಯವಾದಗಳು. ಕಣ್ಣು ಹಾಯಿಸಿದಲ್ಲೆಲ್ಲ ನನ್ನ ಪೋಸ್ಟರ್‌ಗಳು, ಕಟೌಟ್‌ಗಳೇ ಕಾಣುತ್ತಿದ್ದವು. ಅದನ್ನು ನೋಡಿದಾಗ ಸಚಿನ್, ಅಮಿತಾಭ್ ಬೇರ್ಯಾರೂ ಅಲ್ಲ, ಅದು ನಾನೇ ಎಂದು ಭಾಸವಾಯಿತು’ ಎಂದಿದ್ದಾರೆ.
Advertisement
ಸಾಮೂಹಿಕ ಸಮಾಧಿ ಪತ್ತೆಉಕ್ರೇನ್ನ ಪೂರ್ವ ಭಾಗದಲ್ಲಿ ರಷ್ಯಾ ದಾಳಿ ಮುಂದುವರಿಸಿರುವಂತೆಯೇ, ಮರಿಯು ಪೋಲ್‌ನಲ್ಲಿ ಸಾಮೂಹಿಕವಾಗಿ ಜನರನ್ನು ಹೂಳಲಾಗಿರುವ ಸ್ಥಳ ಕಂಡು ಬಂದಿದೆ. ಜತೆಗೆ ಕೀವ್‌ನ ಹೊರವಲಯದಲ್ಲಿ ಕೂಡ ಇಂಥದ್ದೇ ಸ್ಥಳಗಳು ಪತ್ತೆಯಾಗಿವೆ. ಉಪಗ್ರಹ ಚಿತ್ರಗಳೂ ಈ ಅಂಶಕ್ಕೆ ಇಂಬು ಕೊಟ್ಟಿವೆ. ಝಪೋರ್‌ಜಿಯಾ ನಗರದ ಸಮೀಪ ಉಕ್ರೇನ್ ಸೇನೆಗೆ ಸೇರಿದ ಹೆಲಿಕಾಪ್ಟರ್ ಪತನಗೊಂಡಿದೆ. ಈ ಮಧ್ಯೆ ಸತತ ಟೀಕೆಗಳ ನಡುವೆ, ಜರ್ಮನಿ ಸರ್ಕಾರ ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸಲು ಮುಂದಾಗಿದೆ. ಇನ್ನೊಂದೆಡೆ ರಷ್ಯಾದಲ್ಲಿ ಉಕ್ರೇನ್ ವಿರುದ್ಧದ ದಾಳಿ ಬಗ್ಗೆ ತಪ್ಪು ಮಾಹಿತಿ ನೀಡುವ ಪ್ರತಿಪಕ್ಷಗಳ ಪ್ರಮುಖ ನಾಯಕರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ತೀರ್ಮಾನಿಸಿದೆ.