Advertisement

Puthige Swamiji ಗೀತಾರ್ಥ ಚಿಂತನೆ 9 ; ಸರಿಸಮ ವಿಭಜನೆಯಾದಾಗ ಸಂಶಯ

12:30 AM Aug 18, 2024 | Team Udayavani |

ವೇದವ್ಯಾಸರ ಅವತಾರದ ಮುನ್ನ ಜ್ಞಾನದ ವಿಷಯದಲ್ಲಿ ಅಷ್ಟು ಗೊಂದಲ ಮೂಡಿದ್ದಾದರೂ ಏತಕ್ಕೆ ಎಂಬ ಸಂಶಯ ಬರುವುದು ಸಹಜ. ಕೃತಯುಗದಲ್ಲಿ ಶೇ.100ರಷ್ಟು ಸಜ್ಜನರಿದ್ದರು. ಆಗ ಸೇನೆಯೂ ಬೇಡ, ಪೊಲೀಸರೂ ಬೇಡ, ರಕ್ಷಣೆಯೇ ಬೇಡವಾಗುತ್ತದೆ. ಸಂಶಯಗಳೇ ಇಲ್ಲ. ತ್ರೇತಾಯುಗದಲ್ಲಿ ಶೇ.75 ಸಜ್ಜನರಾದರು.

Advertisement

ಬಹುಸಂಖ್ಯಾಕರು ಇಷ್ಟು ಸಂಖ್ಯೆಯಲ್ಲಿರುವಾಗಲೂ ಸಂಶಯಕ್ಕೆ ಎಡೆ ಇಲ್ಲ. ಕಲಿಯುಗದಲ್ಲಿ ಸಜ್ಜನರ ಸಂಖ್ಯೆ ತೀರಾ ಇಳಿಮುಖವಾಗುವಾಗಲೂ ಸಂಶಯಗಳಿಲ್ಲ. ಸಂಶಯ ಏರ್ಪಟ್ಟದ್ದು ದ್ವಾಪರ ಯುಗದಲ್ಲಿ ಮಾತ್ರ. ಏಕೆಂದರೆ 50-50. ಸಜ್ಜನರು-ದುರ್ಜನರ ಸಂಖ್ಯೆ ಸಮಪ್ರಮಾಣದಲ್ಲಿತ್ತು, ಹಾಗಾಗಿಯೇ ಆಚೆಯೋ ಈಚೆಯೋ ಎಂಬ ಸಂಶಯ. ಗೀತೆಯಲ್ಲಿಯೇ ಹೇಳುವಂತೆ ‘ಸೇನಯೋರುಭಯೋರ್ಮಧ್ಯೇ….’ ಇಲ್ಲಿಯೂ ಅರ್ಜುನನಿಗೆ ಸಂಶಯ, ಗೊಂದಲ ಉಂಟಾಯಿತು. ಆಚೀಚೆ ಸರಿಸಮನಾಗಿ ಹಂಚಿ ಹೋದಾಗ ಹಾಗೋ ಹೀಗೋ ಎಂಬ ಸಂಶಯ ಬರುತ್ತದೆ. ಹೀಗಾಗಿ ಗೀತೆಯ ಉದ್ಭವವಾಯಿತು. ಮಹಾಭಾರತವು ಇತಿಹಾಸ, ಮೌಲ್ಯ ಮತ್ತು ಭಗವಂತನ ವರ್ಣನೆ ಈ ಮೂರು ಅರ್ಥಗಳಲ್ಲಿ ತೆರೆದುಕೊಳ್ಳುತ್ತದೆಯಾದರೂ ಮುಖ್ಯ ಗಮನ ಭಗವಂತನ ವಿಷಯದಲ್ಲಿ. ಕೆಲವರು ಹೇಳುವಂತೆ ಸ್ವಲ್ಪ ಸ್ವಲ್ಪ ಭಾಗಗಳಲ್ಲಿ ಮೂರು ವಿಷಯಗಳು ಹಂಚಿ ಹೋಗಿಲ್ಲ. ಎಲ್ಲ ಶಬ್ದಗಳೂ ಏಕಕಾಲದಲ್ಲಿ ಈ ಮೂರೂ ಅರ್ಥಗಳಲ್ಲಿ ತೆರೆದುಕೊಳ್ಳುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next