ಭಗವದ್ಗೀತೆಗೆ ಶ್ರೀಮದಾಚಾರ್ಯರು “ಭಾಷ್ಯ’ ಮತ್ತು “ತಾತ್ಪರ್ಯ’ ಎಂಬ ಎರಡು ಕೃತಿಗಳನ್ನು ರಚಿಸಿದರು. ಗೀತೆಯ ಬಗ್ಗೆ ಇತರ ಕಡೆಗಳ ವ್ಯಾಖ್ಯಾನ, ಪ್ರಾಮಾಣ್ಯಕ್ಕೆ ಸಂಬಂಧಿಸಿ “ಭಾಷ್ಯ’ದಲ್ಲಿ ವಿಶ್ಲೇಷಣೆ ನಡೆಸಿದ್ದರೆ, ಗೀತೆಯ ವಾಕ್ಯಗಳನ್ನು ಮಾತ್ರ ಉಲ್ಲೇಖಿಸಿ “ತಾತ್ಪರ್ಯ’ವನ್ನು ಬರೆದರು.
ಭಗವದ್ಗೀತೆಯನ್ನು ಒಳಗೊಂಡ ಮಹಾಭಾರತ ಗ್ರಂಥದಿಂದ ಅತ್ಯಂತ ಮುಖ್ಯವಾದ ಮೋಕ್ಷ ಪ್ರಾಪ್ತಿ ಸಾಧ್ಯ ಎನ್ನುವ ಕಾರಣದಿಂದಲೇ ಇದರ ಸರ್ವೋತ್ತಮತ್ವ ಸಿದ್ಧಿಸಿದೆ. ಮಹಾಭಾರತದ ಸಾರ ಭಗವದ್ಗೀತೆಯಲ್ಲಿ ಅಡಕವಾಗಿದೆ. “ಅನುಬಂಧ ಚತುಷ್ಟಯ’ವನ್ನು ಪಾಲಿಸಿದ್ದಾರೆ. ತಮಗೆ ತೋಚಿದ್ದನ್ನು ಹೇಳಿ ಅದಕ್ಕೆ ಫಿಲಾಸಫಿ ಎನ್ನುವುದು ಇವರ ಕ್ರಮವಲ್ಲ.
ವೇದಗಳಲ್ಲಿ ಹೇಳದೆ ಇದ್ದದ್ದನ್ನೂ ಮಹಾಭಾರತದಲ್ಲಿ ಹೇಳಿರಬೇಕಾದರೆ ಶ್ರೀಮನ್ನಾರಾಯಣನಿಂದಲೇ ಇದು ಸಾಧ್ಯ. ಅನಂತ ವೇದಗಳಲ್ಲಿ ಹೇಳದೆ ಇದ್ದದ್ದನ್ನು ಭಗವಂತನಲ್ಲದೆ ಇನ್ನಾರು ಹೇಳುವುದು? ಹೀಗಾಗಿ ಭಗವದವತಾರರೂಪಿ ವೇದವ್ಯಾಸರ ಅನುಜ್ಞೆ ಪಡೆದೇ ಇತರ ಗ್ರಂಥಗಳೊಂದಿಗೆ ಮಹಾಭಾರತದ “ಭಾರ’ವನ್ನು ತುಲನೆ ಮಾಡಲಾಯಿತು. ಇಲ್ಲಿ ಇಲ್ಲದ್ದು ಬೇರಾವ ಗ್ರಂಥಗಳಲ್ಲಿಯೂ ಇಲ್ಲ ಎನ್ನುವುದು ಜನಪ್ರಿಯ ಮಾತು. ಸರ್ವಶ್ರೇಷ್ಠವಾದ ವೇದಗಳ ಅರ್ಥವನ್ನು ಇತಿಹಾಸ, ಪುರಾಣಗಳ ಬೆಂಬಲದಿಂದಲೇ ಮಾಡಿಕೊಳ್ಳಬಹುದಾಗಿದೆ ಎಂಬುದನ್ನೂ ಅರ್ಥ ಮಾಡಿಕೊಳ್ಳಬೇಕು.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811