Advertisement
ಹಸಿವು ಇಂಗಿಸಲು ಕೆಲಸ ಮಾಡದೆ ಆನಂದಾನುಭವಕ್ಕೆ ಕೆಲಸ ಮಾಡಬೇಕು ಎನ್ನುವುದು ನೀತಿ. ಭಗವಂತ ಕೆಲಸ ಮಾಡುವುದು ಆನಂದೋದ್ರೇಕಕ್ಕಾಗಿ. ಅದು ಆನಂದಾತ್ಮಕವಾದ ಕರ್ಮ. ಕಬಡ್ಡಿ, ಕ್ರಿಕೆಟ್ ಆಟವಾಡುತ್ತಾರೆ. ಏತಕ್ಕಾಗಿ? ಆಟವಾಡಿದರೆ ಕಷ್ಟವಾಗುವುದಿಲ್ಲವೆ? ಆದರೂ ಓಡಿಬರುತ್ತಾರಲ್ಲ? ಹಾಗೆ ಬರಲು ಕಾರಣ ಅದರಿಂದ ಸಿಗುವ ಆನಂದ. ಹೀಗಾಗಿ ಭಗವಂತನ ಎಲ್ಲ ಕೆಲಸವೂ ಆನಂದದ ಅಭಿವ್ಯಕ್ತಿ ಪ್ರತೀಕ. ಯಾವುದು ಆನಂದಾತ್ಮಕವಾಗಿರುವುದಿಲ್ಲವೋ ಅದು ಸಾರ್ಥಕವಲ್ಲ. ಸಂತೋಷವಾದಾಗ ಕಷ್ಟಪಟ್ಟರೂ ಕುಣಿಯುವುದಿಲ್ಲವೆ? ಸಂತೋಷವಾದಾಗ ಸುಮ್ಮನೆ ಕುಳಿತುಕೊಳ್ಳಿ ಎಂದರೂ ಕೇಳುವುದಿಲ್ಲ. ಇದು ಸಂತೋಷದ ಅಭಿವ್ಯಕ್ತಿ. ಕ್ರಿಯೆಯಲ್ಲಿ ಎರಡು ಬಗೆ ಆನಂದರೂಪವಾದುದು, ಆನಂದರೂಪವಲ್ಲದ್ದು. ನಮ್ಮ ಕರ್ಮ ಆನಂದರೂಪವಾಗಿರಬೇಕು.
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
Related Articles
Advertisement