Advertisement

ಹೆಚ್ಚಿನ ಪರಿಹಾರಕ್ಕಾಗಿ ಕೇಂದ್ರಕ್ಕೆ ಒತ್ತಡ ಹೇರಲಿ

11:20 PM Oct 05, 2019 | Lakshmi GovindaRaju |

ರಾಯಚೂರು: ನೆರೆ ಸಂತ್ರಸ್ತರ ನೆರವಿನ ವಿಚಾರದಲ್ಲಿ ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಹೆಚ್ಚಿನ ನೆರವಿಗೆ ಬಿಜೆಪಿಯ 25 ಸಂಸದರು ಕೇಂದ್ರದ ಮೇಲೆ ಒತ್ತಡ ಹೇರುವ ಕೆಲಸ ಮಾಡಬೇಕು ಎಂದು ಉಜ್ಜಯಿನಿ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಒತ್ತಾಯಿಸಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗಾರ ರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ ತುರ್ತು ಪರಿಹಾರಕ್ಕಾಗಿ 1200 ಕೋಟಿ ರೂ. ನೀಡಿರುವುದು ಸಮಾಧಾನಕರ ಸಂಗತಿ. ಆದರೆ, ರಾಜ್ಯ ಸರ್ಕಾರ ನೀಡಿದ ಪ್ರಸ್ತಾವನೆಗೂ, ಅದಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂದರು. ರಾಜ್ಯದಲ್ಲಿ ನೆರೆ-ಬರ ವಿಚಾರದಲ್ಲಿ ರಾಜಕೀಯ ಕಿತ್ತಾಟ ಮಾಡೋದು ಸರಿಯಲ್ಲ. ಮುಖ್ಯಮಂತ್ರಿಯವರು ಪಕ್ಷಾತೀತವಾಗಿ ನಿಯೋಗ ಕರೆದೊಯ್ಯಬೇಕು. ಜನಪ್ರತಿನಿಧಿಗಳು ಪಕ್ಷಭೇದ ಮರೆತು ನೆರವಿಗೆ ಧಾವಿಸಿ, ನೆರೆ ಸಂತ್ರಸ್ತರ ಕಣ್ಣೀರೊರೆಸಬೇಕು ಎಂ ದರು.

ಪ್ರಸಕ್ತ ವರ್ಷ ನೆರೆ-ಬರ ಎರಡೂ ನಾಡಿನ ಜನರಿಗೆ ಕಾಡುತ್ತಿದ್ದು, ಹಲವಾರು ಜನ ಸಂಕಷ್ಟಕ್ಕೀಡಾಗಿದ್ದಾರೆ. ಆದರೆ, ನೆರೆ ಪರಿಹಾರ ಕಾರ್ಯಗಳು ಅತ್ಯಂತ ಮಂದಗತಿಯಲ್ಲಿ ನಡೆಯುತ್ತಿರುವುದು ವಿಷಾದನೀಯ. ಜನರ ನಿರೀಕ್ಷೆ ಈಡೇರಿಸುವ ಕೆಲಸ ಆಗಬೇಕಿದ್ದು, ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿರುವುದರಿಂದ ರಾಜ್ಯದ ಜನರ ನಿರೀಕ್ಷೆಗಳು ಹೆಚ್ಚಾಗಿವೆ. ಆ ನಿರೀಕ್ಷೆಗಳಿಗೆ ಭಂಗವಾಗದ ರೀತಿಯಲ್ಲಿ ಕೆಲಸ ಮಾಡಬೇಕಿದೆ. ಕೇಂದ್ರ ಇನ್ನೂ ಹೆಚ್ಚು ಅನುದಾನ ತ್ವರಿತಗತಿಯಲ್ಲಿ ಬಿಡುಗಡೆ ಮಾಡಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next