Advertisement

ನಿಮ್ಮ ಹೊಟ್ಟೆಗೆ ತಣ್ಣೀರ್‌ ಬಟ್ಟೆಹಾಕ…

08:20 PM Jan 27, 2020 | Lakshmi GovindaRaj |

ಆಫೀಸಿನ ಚೇರಿನ ಮೇಲೆ ಕುಳಿತರೆ ಬಗ್ಗೊಕೆ ಆಗೋಲ್ಲ, ಕಂಪ್ಯೂಟರ್‌ ಮಣೆ ನೇರವಾಗಿ ಹೊಟ್ಟೆಗೆ ಬಂದು ಬಡಿಯುತ್ತದೆ. ಏನಾದರೂ ಮಾಡಿ ಹೊಟ್ಟೆ ಕರಗಿಸಬೇಕಲ್ಲ ಅಂತ ಅಂದುಕೊಂಡರೂ ಆಗುವುದಿಲ್ಲ. ಏನೇನೋ ಪ್ರಯತ್ನ ಪಟ್ಟರೂ ಬೊಜ್ಜು ಇಳಿಯುತ್ತಿಲ್ಲ ಅಂತಾದರೆ, ಹೊಟ್ಟೆ ಮೇಲೆ ತಣ್ಣೀರ್‌ ಬಟ್ಟೆ ಹಾಕಿ. ಇವರೇನು ಹೀಗೇಳ್ತಾರೆ ಅಂದ್ಕೋಬೇಡಿ. ಇದರಲ್ಲಿ ಹೊಟ್ಟೆ ಮೇಲೆ ತಣ್ಣೀರ್‌ ಬಟ್ಟೆ ಹಾಕೋದು ಅನ್ನೋದು ಇದೆಯಲ್ಲ.

Advertisement

ಇದೇನು ಸುಳ್ಳಲ್ಲ. ನೀವು ಬೇಕಾದರೆ ತಣ್ಣೀರು ಬಟ್ಟೆ ಹಾಕಿಕೊಂಡು ನೋಡಿ. ಏನೇನಾಗುತ್ತದೆ ಅಂತ? ಊಟ ಮಾಡುವ ಹತ್ತು ನಿಮಿಷ ಮೊದಲು ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡರೆ ಹಸಿವಿನ ಪ್ರಮಾಣ ಕಡಿಮೆಯಾಗುತ್ತದೆ. ಅರೆ, ಇದೇನಪ್ಪ, ಹಸಿವಾಗದೆ ತಿನ್ನುವುದಾದರೂ ಹೇಗೆ?ಅಂದ್ರ. ತಲೆಬೇನೆ ಇಲ್ಲ. ಸಾಮಾನ್ಯವಾಗಿ ನಾವು ನೆಲದ ಮೇಲೆ ಕುಳಿತು ಕೊಳ್ಳುವುದನ್ನು ಬಿಟ್ಟು, ಟೇಬಲ್‌ ಮೇಲೆ ಕೂತು ಊಟ ಮಾಡುತ್ತೇವೆ.

ಹೀಗಾಗಿ, ನಮ್ಮ ಹೊಟ್ಟೆಗೆ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇರಿಬಿಡುತ್ತದೆ. ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡರೆ ಹಸಿವು ಕಡಿಮೆಯಾಗಿ, ಕ್ಯಾಲೋರಿ ಕಡಿಮೆಯಾಗುತ್ತದೆ. ಖಾಲಿ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡರಂತೂ ಲಾಭ ಹೆಚ್ಚು. ಇದರಿಂದ ಜೀರ್ಣಾಂಗಗಳ ರಕ್ತ ಪರಿಚಲನೆ ಹೆಚ್ಚುತ್ತದಂತೆ. ಹೀಗಾದಾಗ, ತಿಂದ ಆಹಾರ ಬೇಗ ಜೀರ್ಣಗೊಳ್ಳುತ್ತದೆ. ಕರುಳಿನ ಚಲನೆ ವೇಗವಾಗುತ್ತದೆ.

ಮಲಬದ್ಧತೆ ಆಗುವುದಿಲ್ಲ. ಮೂತ್ರಕೋಶಗಳಿಗೆ ರಕ್ತ ಸಂಚಾರ ಕೂಡ ಸರಾಗವಾಗುತ್ತದೆ. ಇದರಿಂದ, ಮೂತ್ರ ಹೆಚ್ಚು ಹೆಚ್ಚು ಹೋಗುತ್ತದೆ. ಆದರೆ ಗಾಬರಿ ಬೇಡ. ಇಷ್ಟೇ ಅಲ್ಲ, ಹೊಟ್ಟೆಯ ಭಾಗದ ಬೊಜ್ಜು ಕಡಿಮೆ ಮಾಡಲು ಇದು ರಾಮಾಬಾಣ. ಒಂದು ಗಂಟೆ ಕಾಲ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡರೆ ಸ್ನಾಯು ಸಂಕುಚಿತ ಗೊಳ್ಳುತ್ತದೆ. ಕ್ಯಾಲರಿ ಬರ್ನಿಂಗ್‌ ಹೆಚ್ಚಾಗಿ, ಸೊಂಟದ ಸುತ್ತಳತೆ ಕೂಡ ಕಡಿಮೆಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next